|
ಆಸ್ಕರ್‌ಗೆ ವಾಟರ್
ಕೆನಡಾ: ದೀಪಾ ಮೆಹ್ತಾ ನಿರ್ಮಿಸಿರುವ ವಿವಾದಾತ್ಮಕ
ಚಲನಚಿತ್ರ `ವಾಟರ್
ಅನ್ನು ಆಸ್ಕರ್‌ನ `ಉತ್ತಮ
ವಿದೇಶಿ ಭಾಷೆಯ ಚಲನಚಿತ್ರ
ಸ್ಥಾನಕ್ಕಾಗಿ ಸ್ಪರ್ಧಿಸಲು ಕೆನಡಾ
ಆಯ್ಕೆ ಮಾಡಿದೆ.
ಭಾರತೀಯ ಮೂಲದ ನಿರ್ಮಾಪಕಿಯಾದರೂ
ಕೆನಡಾದಲ್ಲಿ ನೆಲೆಸಿರುವ ದೀಪಾ ತಮ್ಮ ಹೆಚ್ಚಿನ ಚಿತ್ರಗಳನ್ನು `ಕೆನಡಾ-ಭಾರತ
ಸಹನಿರ್ಮಾಣ ದ
ಅಡಿಯಲ್ಲೇ ನಿರ್ಮಿಸಿದ್ದಾರೆ. ಆದ್ದರಿಂದ ಕೆನಡಾದ ಪರವಾಗಿ ಅವರ ಚಿತ್ರ
ಆಸ್ಕರ್‌ನಲ್ಲಿ ಪಾಲ್ಗೊಳ್ಳಲಿದೆ.
ದೀಪಾ ಮೆಹ್ತಾ ಅವರ ವಾಟರ್ ಚಿತ್ರವು ಭಾರತದಲ್ಲಿ
ಬಿಡುಗಡೆಯ ಭಾಗ್ಯ ಕಾಣದಿದ್ದರೂ ಉತ್ತರ ಅಮೇರಿಕಾದಲ್ಲಿ ಉತ್ತಮ ಪ್ರತಿಕ್ರಿಯೆ
ದೊರೆಯಿತು.
ಮೊದಲು ಶಬಾನಾ ಆಜ್ಮಿ ಮತ್ತು ನಂದಿತಾ ದಾಸ್
ಅವರನ್ನು ಹಾಕಿಕೊಂಡು ಚಿತ್ರವನ್ನು ೨೦೦೦ನೇ ಇಸವಿಯಲ್ಲಿಯೇ
ನಿರ್ಮಿಸಿದ್ದರು. ಆದರೆ ೧೯೩೦ ರ ದಶಕದ ಹಿಂದೂ ವಿಧವೆಯರ ವಿಷಯವನ್ನೊಳಗೊಂಡ
ಈ ಚಿತ್ರವನ್ನು ಹಿಂದೂಗಳು ಪ್ರಬಲವಾಗಿ ವಿರೋಧಿಸಿದರು. ಕೊಲೆ ಬೆದರಿಕೆಯನ್ನೂ
ದೀಪಾ ಎದುರಿಸಬೇಕಾಯಿತು. ಮತ್ತೆ ೫ ವರ್ಷಗಳ ನಂತರ ಲೀಸಾ ರೈ
ಮತ್ತು ಜಾನ್ ಅಬ್ರಾಹಂ ತಾರಾಗಣದಲ್ಲಿ ಶ್ರೀಲಂಕಾದಲ್ಲಿ ಈ ಚಿತ್ರವನ್ನು ಪುನರ್ನಿಮಿಸಿದರು.
`ವಾಟರ್
ಕಳೆದ ವರ್ಷ ಟೊರೆಂಟೋ ಅಂತರರಾಷ್ಟ್ರೀಯ ಚಿತ್ರೋತ್ಸವದಲ್ಲಿ
ಪ್ರದರ್ಶಿತವಾಗಿತ್ತು. ಈ ವರ್ಷದ ಫೆಬ್ರವರಿಯಲ್ಲಿ ನಡೆದ ಬ್ಯಾಂಕಾಕ್
ಚಿತ್ರೋತ್ಸವದಲ್ಲಿ `ಗೋಲ್ಡನ್ ಕಿನ್ನರಿ
ಪ್ರಶಸ್ತಿಯನ್ನು ಗೆದ್ದುಕೊಂಡಿದೆ.
ಇನ್ನಷ್ಟು
ಸೂರ್ಯನ ಜಾಡು ಹಿಡಿಯ ಹೊರಟ ಜಪಾನಿಗರು
ಕೇರಳದಲ್ಲಿ ಕೋಲಾ ನಿಷೇಧ ರದ್ದು
ಸಚಿವರ ಹೇಳಿಕೆಗೆ ಕ್ಷಮೆ ಯಾಚಿಸಿದ ಗೌಡರು
ಟಿಪ್ಪು ವಿವಾದದಲ್ಲಿ ಮೂರನೆಯ ಪಕ್ಷ
ತುಣುಕು ಸುದ್ದಿಗಳು
ಅತ್ಯಂತ ಪ್ರಾಚೀನ ಪಳೆಯುಳಿಕೆ ಪತ್ತೆ
ದಸರಾಕ್ಕೆ ಮೆರಗು ನೀಡಲಿರುವ ರಂಗೋತ್ಸವ
ಶಂಕರಮೂರ್ತಿ
ಹೇಳಿಕೆ ತಪ್ಪು : ಕಾರ್ನಾಡ್
ದಕ್ಷಿಣ ಆಫ್ರಿಕಾ ದಾಳಿಗೆ ತತ್ತರಿಸಿದ ಜಿಂಬಾಬ್ವೆ
ಬುದ್ಧ ಜೈನರನ್ನು ಹಿಂದು ಎಂದು ಒಪ್ಪಲು
ತಕರಾರು
ಕಳಸ-ಬಂಡೂರಿ ನಾಲಾ ಯೋಜನೆ ಖಾಯಂ
ಸರ್ಕಾರಿ ವೆಬ್ ಸೈಟ್ ನಿರ್ವಹಣೆ
ಐಬಿಎಂ ಸಂಸ್ಥೆಗೆ
|