ಚಿಕ್ಕಮಗಳೂರು: ವಿದ್ಯಾಧರೆ ಕಂಬೈನ್ಸ್(ಪ್ರೈ)ಲಿ,
ಲಾಂಛನದಲ್ಲಿ ಶ್ರೀಮತಿ ಭಾಗ್ಯವತಿ ನಾರಾಯಣ್ ಅರ್ಪಿಸಿ, ಬಿ.ಎನ್,
ವಿದ್ಯಾಶ್ರೀ ನಿರ್ಮಿಸುತ್ತಿರುವ `ತಾಯಿಯ ಮಡಿಲು' ಚಿತ್ರದ ಮೊದಲ ಹಂತದ
ಚಿತ್ರೀಕರಣವು ಅಂತಿಮ ಘಟ್ಟ ತಲುಪಿದೆ.
ಎಸ್. ನಾರಾಯಣ್ ಅವರು
ಕಥೆ-ಚಿತ್ರಕಥೆ-ಸಂಭಾಷಣೆ ಬರೆದು ಗೀತರಚನೆ ಮಾಡಿ
ನಿರ್ದೇಶಿಸುತ್ತಿರುವ `ತಾಯಿಯ ಮಡಿಲು' ಚಿತ್ರಕ್ಕೆ ರಾಕ್‌ಲೈನ್ ಸ್ಟೂಡಿಯೋದಲ್ಲಿ
ನಿರ್ಮಿಸಿರುವ ವಿಶೇಷವಾದ ಮನೆಗಳ ಸೆಟ್‌ನಲ್ಲಿ ೨೨ದಿನಗಳ ಸತತ
ಚಿತ್ರೀಕರಣ ನಡೆಯಿತು. ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್,
ರಕ್ಷಿತಾ, ದೊಡ್ಡಣ್ಣ, ಮುಖ್ಯಮಂತ್ರಿ ಚಂದ್ರು ಮುಂತಾದ ಕಲಾವಿದರು
ಈ ಚಿತ್ರದಲ್ಲಿ ಅಭಿನಯಿಸಿದ್ದಾರೆ.
ತಿಳಿಹಾಸ್ಯದ ಲೇಪದೊಂದಿಗೆ ತಾಯಿ ಮಗನ ಅಪರೂಪದ
ಸೆಂಟಿಮೆಂಟ್ ಕಥೆಯನ್ನು ನಾರಾಯಣ್ ಅವರು ನಿರೂಪಿಸುತ್ತಿದ್ದು ಹಾಸ್ಯಭರಿತ
ದೃಶ್ಯಗಳ ಚಿತ್ರೀಕರಣ ಪೂರ್ಣಗೊಂಡಿದೆ. ಈ ಚಿತ್ರಕ್ಕಾಗಿ ಎಸ್. ನಾರಾಯಣ್
ರಚಿಸಿ ಎಸ್.ಎ. ರಾಜಕುಮಾರ್ ರಾಗ ಸಂಯೋಜಿಸಿರುವ
`ಮಳವಳ್ಳಿಮಳ್ಳಿ- ಮದ್ದೂರ ಬಳ್ಳಿ-ಬಿದೊದ್ಲುಹಳ್ಳಕ್ಕೆ
ಎಂಟೊಂದ್ಲಎಂಟು-ಎಂಟಾಣೆಗಂಟು-ಸಿಕ್ಸುದ್ಲುಸೊಂಟಕ್ಕೆ'
ಎಂಬ ಗೀತೆಯನ್ನು ಶಿವರಾಜ್ ಕುಮಾರ್,
ರಕ್ಷಿತಾ ಹಾಗೂ ಡಾನ್ಸರ್‌ಗಳೊಂದಿಗೆ ಚಿಕ್ಕಮಗಳೂರಿನ ಸುತ್ತಮುತ್ತಲ
ಸುಂದರ ಪರಿಸರದಲ್ಲಿ ಚಿ
ತ್ರೀಕರಿಸಿಕೊಳ್ಳಲಾಗಿದೆ. ಕೃಷ್ಣರೆಡ್ಡಿ ಅವರ ನೃತ್ಯ
ನಿರ್ದೇಶನದಲ್ಲಿ ಆರುದಿನಗಳ ಚಿತ್ರಣ ನಡೆದಿದೆ. ಪಿ.ಕೆ.ಹೆಚ್. ದಾಸ್
ಛಾಯಾಗ್ರಹಣ, ಪಿ.ಆರ್. ಸೌಂದರ್ ರಾಜನ್ ಸಂಕಲನ, ರಮೇಶ್ ಬಾಬು
ಕಲೆ, ಮಧುಕರ್ ಬೆಳಕವಾಡಿ ಸಹ ನಿರ್ದೇಶನ, ಟೆನ್‌ಷನ್ ನಾಗರಾಜ್
ನಿರ್ಮಾಣ ನಿರ್ವಹಣೆಯಿರುವ ತಾಯಿಯ ಮಡಿಲು ಚಿತ್ರದಲ್ಲಿ ಶಿವರಾಜ್
ಕುಮಾರ್ ಜೋಡಿಯಾಗಿ ಮೊದಲ ಬಾರಿಗೆ ರಕ್ಷಿತಾ ಅಭಿನಯಿಸುತ್ತಿರುವುದು
ಒಂದು ವಿಶೇಷ.