Fonts Problem?

Downloads

Wallpapers

Vikrantakarnataka Weekly

 

 

ಮುಖ ಪುಟ

ಸುದ್ದಿ-ಸದ್ದು

ಎನ್ನಾರೈ

ಸಾಹಿತ್ಯ-ಸಂದರ್ಭ

ಚಿತ್ರ ವಿಚಿತ್ರ

ಚಿತ್ರ ಶಾಲೆ

ಒಕ್ಕಲುತನ

ವೆಬ್ ಲಿಂಕ್ಸ್

ಪಾಕ ಶಾಲೆ

ಆಟ ಬೊಂಬಾಟ

ನಗೆ ಬುಗ್ಗೆ

ನಿಮ್ಮ ಓಲೆ

Google    

ವೆಬ್

ವಿಕ್ರಾಂತ ಕರ್ನಾಟಕ

Friday, 01 September 2006 03:31 PM

ಹಾಲಿವುಡ್‌ಗೆ ಹಾರಲು ಸುಶ್ಮಿತಾ ಸೇನ್ ತಯಾರಿ

ಕತ್ತು ನೋವಿನ ಗೋಳು ಪಕ್ಕಕ್ಕಿರಲಿ, ಹಾಲಿವುಡ್ ಯೋಜನೆಗೆ ಮೊದಲ ಪ್ರಾಶಸ್ತ್ಯ


ಮುಂಬಯಿ: ಮಾಜಿ ಭುವನ ಸುಂದರಿ ಸುಶ್ಮಿತಾ ಸೇನ್ ಹಾಲಿವುಡ್ ಚಿತ್ರವೊಂದರಲ್ಲಿ ನಟಿಸಲು ಒಪ್ಪಿಕೊಂಡಿದ್ದು ಚಿತ್ರಕ್ಕೆ ಸಹಿ ಮಾಡಿದ್ದಾರೆ.


ನಟ ರಿಚರ್ಡ್ ಗೆರ್ ನಾಯಕನಾಗಿರುವ `ದಿ ಎಕ್ಸ್‌ಪಾಟ್' ಚಿತ್ರದ ಚಿತ್ರೀಕರಣಕ್ಕಾಗಿ ಅರ್ಜೆಂಟಿನಾಕ್ಕೆ ಸುಶ್ ತೆರಳುವ ನಿರೀಕ್ಷೆಯಿದೆ. ಅಲ್ಲಿಗೆ ಐಶ್ವರ್‍ಯಾ ರೈಗೆ ತಾನೇನು ಕಮ್ಮಿ ಎಂಬ ಸುಶ್ ಮಾತಗಳಿಗೆ ಪುಷ್ಟಿ ದೊರೆತಂತಾಯ್ತು ಅಂತೀರಾ ?


ಈ ವಿಷಯವನ್ನು ಖಚಿತಪಡಿಸಿದ ಸುಶ್ಮಿತಾ ಅಮೇರಿಕಾ ಮೂಲದ ಸುತಪಾ ಘೋಷ್ ಚಿತ್ರವನ್ನು ನಿರ್ದೇಶಿಸಲಿದ್ದಾರೆ ಹಾಗೂ ರಿಚರ್ಡ್ ಗೆರ್ ಮುಖ್ಯ ಭೂಮಿಕೆಯಲ್ಲಿರುವುದಾಗಿ ಹೇಳಿದ್ದಾರೆ.
ಈ ನಡುವೆ ಸುಶ್ ಇನ್ನೂ ಕತ್ತು ನೋವಿನಿಂದ ಬಳಲುತ್ತಿದ್ದಾರೆ. ದೂರ ಪಯಣಮಾಡುವ ಸ್ಥಿತಿಯಲ್ಲಿಲ್ಲ. ಆಕೆಯ ತಂಗಿ ನೀಲಂ ಕೂಡ ಅಕ್ಕನ ಆರೋಗ್ಯ ಚೆನ್ನಾಗಿಲ್ಲ ಎಂದು ಒಪ್ಪಿಕೊಂಡಿದ್ದಾರೆ.

 

 ಆದರೆ ಸುಶ್ ಆರೋಗ್ಯದ ಬಗ್ಗೆ ಏನು ಹೇಳದೆ ತಮ್ಮ ಕನಸುಗಳ ಅರಮನೆಯ ಬಗ್ಗೆಯೇ ಮಾತನಾಡುತ್ತಾರೆ. ಇದು ಹಾಲಿವುಡ್‌ನಲ್ಲಿ ಅವರು ಸಹಿ ಮಾಡುತ್ತಿರುವ ಎರಡನೇ ಪ್ರಾಜೆಕ್ಟ್ ಅಂತೆ. ಅದಕ್ಕಾಗಿ ತಾನು ಕಾತರದಿಂದ ಕಾಯುತ್ತಿದ್ದೇನೆ ಎಂದು ಸುಶ್ ಹೇಳ್ತಾರೆ.

Print This PagePrint this page

 

Email this Page

ಮುಖಪುಟ

Copyright Vikranta Prakashana 2006. All rights reserved.
Site best viewed in 800x600 resolution.

Email : feedback@vikrantakarnataka.com