|
ಕಿಂಗ್ ಖಾನ್ ಹೆಸರಿನಲ್ಲಿ ಪರಿಮಳ ದ್ರವ್ಯ
ವಾಷಿಂಗ್ಟನ್: ಬಾಲಿವುಡ್‌ನ ಹೀರೋ ಶಾರುಕ್ ಖಾನ್ ಮುಂಬಯಿ
ಜಗತ್ತಿನಲ್ಲಿ ಸಿಂಹದಂತೆ ರಾರಾಜಿಸುತ್ತಿರಬಹುದು. ಆದರೆ ವಿದೇಶದಲ್ಲಿ
ಅದರಲ್ಲೂ ಅಮೇರಿಕಾದಲ್ಲಿ ಕಿಂಗ್ ಖಾನ್ ನನ್ನು ಹೆಬ್ಬುಲಿಯಂತೆ
ಚಿತ್ರಿಸಲಾಗಿದೆ.
ಶಾರುಕ್ ಖಾನ್‌ನ ಜನಪ್ರಿಯತೆಯನ್ನು ಸರಿಯಾಗಿ ಬಳಸಿಕೊಂಡು
ಅಮೇರಿಕಾದಲ್ಲಿ `ಟೈಗರ್ ಐ' ಬ್ರಾಂಡ್‌ನಲ್ಲಿ ಸುಗಂಧ ತೈಲವನ್ನು
ಗಂಡಸರು ಹಾಗೂ ಹೆಂಗಸರಿಗಾಗಿ ಬಿಡುಗಡೆ ಮಾಡಲಾಗಿದೆ.
ಸುಗಂಧ ತೈಲದ ಪ್ರಸರಣದ ಹಕ್ಕು ಕ್ಯಾಲಿಫೋರ್ನಿಯಾದ
ಡ್ರೀಮ್ಸ್ ಡಿಸೈನ್ ಸಂಸ್ಥೆಯ ಕ್ರೆಗ್ ಮತ್ತು ಶೆಲ್ಲಿ ಷಾ ದಂಪತಿಗಳಿಗೆ
ಸಿಕ್ಕಿದೆ. ಸದ್ಯಕ್ಕೆ ಆನ್‌ಲೈನ್‌ನಲ್ಲಿ ಮಾತ್ರ ಲಭ್ಯವಿರುತ್ತದೆ. ಫ್ರಾನ್ಸ್
ನಲ್ಲಿ ತಯಾರಿಸಲಾಗುತ್ತದೆ. ಈಗಾಗಲೇ `ಟೈಗರ್ ಐ'ಗೆ ಸಾಕಷ್ಟು
ಬೇಡಿಕೆ ಬಂದಿದೆ ಎಂದು ಷಾ ದಂಪತಿಗಳು ಹೇಳಿದರು. |