ಕನ್ನಡ
ಚಿತ್ರದಲ್ಲಿ ತಮಿಳು ಚೆಲುವೆ ಸ್ನೇಹಾ
ತಮಿಳು ನಟಿ ಸ್ನೇಹ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟಿದ್ದಾರೆ.
ರವಿಚಂದ್ರನ್‌ಗೆ ನಾಯಕಿಯಾಗಿ ನಟಿಸಲು ಸ್ನೆ
ಹಾ ಒಪ್ಪಿಕೊಂಡಿದ್ದು, ಮೈಸೂರಿನಲ್ಲಿ
ಹೊಸ ಚಿತ್ರದ ಹಾಡಿನ ಚಿತ್ರೀಕರಣ ಆಗಲೇ ಶುರುವಾಗಿದೆ.
ಇತ್ತೀಚೆಗಷ್ಟೆ ಬ್ರಾಹ್ಮಣ ಎಂಬ ಚಿತ್ರ ಮಾಡುತ್ತಿರುವುದಾಗಿ ಹೇಳಿದ್ದ ರವಿ,
ಚಿತ್ರದ ಹೆಸರನ್ನು ರವಿಶಾಸ್ತ್ರಿ ಎಂದು ಬದಲಿಸಿದ್ದಾರಂತೆ. ಈಗ ಚಿತ್ರದ ಹೆಸರು
ರವಿಶಾಸ್ತ್ರಿ- ಬ್ರಾಹ್ಮಣ ಅಲ್ಲ ಎಂದು ರವಿ ಮಾಧ್ಯದವರ ಬಳಿ ಸ್ಪಷ್ಟಪಡಿಸಿದ್ದಾರೆ.
ಆದರೆ `ಬ್ರಾಹ್ಮಣ ಅಲ್ಲ' ಎಂಬು ಚಿತ್ರದ ಸಬ್‌ಟೈಟಲ್ ಆಗಿ ಉಳಿದುಕೊಳ್ಳಲಿದೆ.
ಎಂ. ಎಸ್. ರಾಜಶೇಖರ್ ನಿರ್ದೇಶಿಸುತ್ತಿರುವ ಈ ಚಿತ್ರವನ್ನು ಸಂದೇಶ್‌ನಾಗರಾಜ್
ನಿರ್ಮಿಸುತ್ತಿದ್ದಾರೆ.