ತಾಯಿಯ ಮಡಿಲಲ್ಲಿ ಎಸ್. ನಾರಾಯಣ್
ಎಸ್. ನಾರಾಯಣರ ಕೌಟುಂಬಿಕ ಸೆಂಟಿಮೆಂಟ್
ಚಿತ್ರವೇ ನಿಜವಾಗಿಯೂ ಪ್ರೇಕ್ಷಕರನ್ನು ಆಕರ್ಷಿಸುವುದು ಎಂದು ಲೆಕ್ಕ
ಹಾಕಿದಂತೆ ಇದೆ. ಸೆಪ್ಟೆಂಬರ್ ೧ ರಿಂದ ಅವರು `ತಾಯಿಯ ಮಡಿಲು'
ಚಿತ್ರವನ್ನು ಆರಂಭಿಸಲಿದ್ದಾರೆ. ಈ ಚಿತ್ರದ ನಿರ್ಮಾಣವೂ ಅವರದೇ.
ತಮ್ಮ ನಿರ್ಮಾಣದ ಚಿತ್ರವನ್ನು ಮಾತ್ರ ಹೆಚ್ಚು ಜತನದಿಂದ ಆದಷ್ಟು
ಕಡಿಮೆ ಖರ್ಚಿನಲ್ಲಿ ಮುಗಿಸುತ್ತಾರೆ ಎಂಬುದು ಅವರ ಮೇಲಿನ ಹೊಗಳಿಕೆ
ಮತ್ತು ಆಪಾದನೆ.
ಹೊಸ ಚಿತ್ರದಲ್ಲಿ ಶಿವರಾಜ್‌ಕುಮಾರ್ ಮತ್ತು
ರಕ್ಷಿತಾ ಮುಖ್ಯ ಭೂಮಿಕೆಯಲ್ಲಿದ್ದಾರೆ. ಹಾಡುಗಳ ಧ್ವನಿಮುದ್ರಣ ಪ್ರಾರಂಭವಾಗಿದ್ದು
ಎಸ್. ಎ. ರಾಜಕುಮಾರ ಸಂಗೀತ ನಿರ್ದೇಶಕರು.