ಧೂಮಪಾನದ ದೃಶ್ಯವಿರುವ ಸಿನಿಮಾಗಳಿಗೆ `ಎ
ಯೋಗ್ಯತೆ
ನವದೆಹಲಿ: ಕೇಂದ್ರೀಯ ಆರೋಗ್ಯ ಸಚಿವ
ಎ. ರಾಮದಾಸ್ `ಧೂಮಪಾನಗಳ ದೃಶ್ಯವಿರುವ ಚಲನ ಚಿತ್ರಗಳಿಗೆ
`ಎ ಯೋಗ್ಯತಾಪತ್ರವನ್ನು
ನೀಡಬೇಕು ಮತ್ತು ಚಿತ್ರದ ಮಧ್ಯಂತರದಲ್ಲಿ ಆ ಚಿತ್ರದ ನಾಯಕನು
ಪ್ರೇಕ್ಷಕರಿಗೆ ಧೂಮಪಾನ ಆರೋಗ್ಯಕ್ಕೆ ಹಾನಿ ಎಂದು ತಿಳಿಸಬೇಕು
ಎಂದು ಅಭಿಪ್ರಾಯ ಪಟ್ಟಿದ್ದಾರೆ.
ಕೇಂದ್ರ ವಾರ್ತಾ ಮತ್ತು ಪ್ರಸಾರ ಖಾತೆಯ ಸಚಿವಾಲಯ
ಈ ಬಗ್ಗೆ ಒಂದು ವಿಸ್ತಾರವಾದ ಸೂಚನಾ ಪಟ್ಟಿಯನ್ನು ತಯಾರಿಸಲಿದೆ.
ಸಿನಿಮಾ ತಯಾರಕ ಮಹೇಶ್ ಭಟ್
ಕೇಂದ್ರವು ಧೂಮಪಾನದ ದೃಶ್ಯಗಳ ಮೇಲೆ ನಿರ್ಬಂಧ
ವಿಧಿಸಿರುವುದನ್ನು ಪ್ರಶ್ನಿಸಿ ದಿಲ್ಲಿ ಉಚ್ಛ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದರು.
ಆದ್ದರಿಂದ ಕೇಂದ್ರವು ಈ ಬಗ್ಗೆ ಹೊಸ ನಿಯಮಗಳನ್ನು ನ್ಯಾಯಾಲಯಕ್ಕೆ
ಸಲ್ಲಿಸಲಿದೆ.
ಇದಲ್ಲದೇ ಒಂದು ಸಮಿತಿಯನ್ನು
ರಚಿಸಲಾಗುತ್ತದೆ. ಚಿತ್ರ ನಿರ್ಮಾಪಕರು ಹೇಗೆ ತಮ್ಮ ಚಿತ್ರದಲ್ಲಿ
ಧೂಮಪಾನದ ದೃಶ್ಯ ಅಗತ್ಯತೆಯನ್ನು ಆ ಸಮಿತಿಗೆ ಮನವರಿಕೆ ಮಾಡಿಕೊಡಬೇಕಾಗುತ್ತದೆ
ಎಂದು ಸಚಿವ ರಾಮ್‌ದಾಸ್ ಹೇಳಿದ್ದಾರೆ. ಸಿನಿಮಾಗಳಲ್ಲಿ ಮಾತ್ರವಲ್ಲದೇ
ಕಿರು ತೆರೆಗೂ ಇದು ಅನ್ವಯಿಸುತ್ತದೆ.
ಸಚಿವ ಮಣಿ ಇದರ ಬಗ್ಗೆ ಅಂಕಿ ಅಂಶಗಳನ್ನು
ನೀಡುತ್ತಾ ೧೯೯೧ ರಲ್ಲಿ ಶೇ.೨೦ ರಷ್ಟು ಮುಖ್ಯ ಪಾತ್ರಗಳು ಧೂಮಪಾನ
ಮಾಡುವಂತೆ ತೋರಿಸಲಾಗುತ್ತಿತ್ತು. ಆದರೆ ಈಗ ಅದು ಶೇ.೭೬ ಕ್ಕೆ
ಏರಿದೆ ಎಂದರು.
ಈ ವಿಷಯದ ಬಗ್ಗೆ ಪ್ರಸಿದ್ಧ ನಿರ್ದೇಶಕ ಮಧುರ್
ಭಂಡಾರ್ಕರ್ ಕೇಳಿದಾಗ `ಹೇಗೆ ಧೂಮಪಾನಗಳ ದೃಶ್ಯಗಳನ್ನು ಸಂಪೂರ್ಣವಾಗಿ
ನಿರ್ಬಂಧಿಸಲು ಸಾಧ್ಯವಿದೆ? ಡಿವಿಡಿ, ಕೇಬಲ್, ಸೆಟಲೈಟ್ ಟಿ.ವಿ. ಗಳು ಹೀಗೆ
ಅನೇಕ ಮಾಧ್ಯಮಗಳಿವೆ. ಅವುಗಳ ಮೇಲೆ ಯಾವ ರೀತಿ ನಿರ್ಬಂಧ
ಹೇರಲಾಗುತ್ತದೆ? ಎಂದು ಪ್ರತಿಕ್ರಿಯಿಸಿದ್ದಾರೆ.
ಇನ್ನಷ್ಟು
ಮುಷರಫ್ ಜೊತೆ ಮಾತುಕತೆ
ಜಾರ್ಖಂಡದಲ್ಲಿ ಇನ್ನು ಕೋಡಾ ಆಡಳಿತ
ಶೀಘ್ರದಲ್ಲೇ ಡಿಎನ್‌ಎ ಸಂಶೋಧನಾ ಕೇಂದ್ರ: ಸರ್ಕಾರ
೭೫ ಸಾವಿರ ನೌಕರರನ್ನು ಹೊರದೂಡಿದ ಫೋರ್ಡ್
ಶಿಕ್ಷೆ ಕಡಿಮೆ ಗೊಳಿಸಲು ಮೆಮೊನ್ ಕುಟುಂಬ ಮನವಿ
ಇಂದು ಸರ್.ಎಂ. ವಿಶ್ವೇಶ್ವರಯ್ಯ ಹುಟ್ಟುಹಬ್ಬ
ನಿಗೂಢ ರೀತಿಯಲ್ಲಿ ಮತ್ತೊಂದು ಸಿಡಿ ಲಭ್ಯ
ಭೂಪಾಲ್ ದುರಂತ ಸಂತ್ರಸ್ತರಿಗೆ ಪರಿಹಾರ
ಅಂಧರಿಗಾಗಿ ಸ್ವಯಂಚಾಲಿತ ಮಾರ್ಗದರ್ಶಕ