ವಿಷ್ಣು `ಸಿರಿವಂತ'ನ ರೂಪದಲ್ಲಿ ತೆರೆಗೆ
ಬೆಂಗಳೂರು : ಅದ್ಭುತ ಎಂದು
ಈಗಾಗಲೇ ಮಾಜಿ ಪ್ರಧಾನಿ ದೇವೇಗೌಡ, ಮುಖ್ಯಮಂತ್ರಿಗಳಾದ ಹೆಚ್.ಡಿ.
ಕುಮಾರಸ್ವಾಮಿ ಅವರಿಂದಲೇ ಅಲ್ಲದೆ ಚಿತ್ರೋದ್ಯಮದ ಹಲವಾರು
ಗಣ್ಯರು ಸಂತಸ ಪಟ್ಟಿರುವ ಸಿರಿವಂತ ಈ ವಾರ ಕರ್ನಾಟಕದಾದ್ಯಂತ
ತೆರೆ ಕಾಣಲಿದೆ. ಮನೆಮಂದಿಯೆಲ್ಲಾ ಉತ್ಸುಕರಾಗಿ ಕಾಯುತ್ತಿರುವ ಈ
ಸಿರಿವಂತ ಡಾ. ವಿಷ್ಣುವರ್ಧನ್ ಅವರ ಹೃದಯಂಗಮ ಅಭಿನಯದ
ಮತ್ತೊಂದು ಮೈಲಿಗಲ್ಲಾಗಲಿದೆ ಎಂದು ವರ್ಣಿಸಲಾಗುತ್ತಿದೆ.

ಈ ಸಾಂಸರಿಕ ಚಿತ್ರದಲ್ಲಿ ಹೆತ್ತವರು ಹಾಗೂ ಜನ್ಮ
ಪಡೆದಿರುವ ಮಕ್ಕಳ ಸುತ್ತ ರಚಿಸಿರುವ ಕಥೆಯಿದೆ. ರಾಕಲೈನ್ ವೆಂಕಟೇಶ್
ನಿರ್ಮಾಣ ಈ ಚಿತ್ರದ ಮೂಲಕ ವಿಷ್ಣು, ಶ್ರುತಿ ಹಾಗೂ ಖ್ಯಾತ ನಿರ್ದೇಶಕ
ಎಸ್. ನಾರಾಯಣ್ ಅವರು ವೀರಪ್ಪನಾಯಕ ಚಿತ್ರದ ನಂತರ
ಜೊತೆಯಾಗಿದ್ದಾರೆ. ಈ ಚಿತ್ರದ ಇನ್ನಿತರ ತಾರಾಬಳಗದಲ್ಲಿ ಕೆ.ಎಸ್. ಅಶ್ವಥ್,
ದೊಡ್ಡಣ್ಣ, ಸುಂದರ್ ರಾಜ್, ಅವಿನಾಶ್, ಶಿವರಾಂ, ಶ್ರೀನಾಥ್, ಭಾವನ,
ಅಕ್ಷಯ್ ಮುಂತಾದವರು ಇದ್ದಾರೆ. ನಗರದ ಕಪಾಲಿ, ಪ್ರಸನ್ನ, ನವರಂಗ್
ಮತ್ತಿತ್ತರ ಚಿತ್ರಮಂದಿರದಲ್ಲಿ ಪ್ರದರ್ಶನ ಕಾಣಲಿದೆ.