|
ರಂಗು ರಂಗೀಲಾ....... ಊರ್ಮಿ ಶೋಲೆ -ಭಾಗ ೨ರಲ್ಲಿ
ಕುಣಿಯಲಿದ್ದಾಳೆ
ಇನ್ನು ಸ್ವಲ್ಪ ದಿನ ಅಷ್ಟೇ. ಆಮೇಲೆ ಎಲ್ಲರಿಗೂ ಹಬ್ಬದೂಟ. ಎಲ್ಲರ
ಬಾಯಲ್ಲೂ `ಗಬ್ಬರ್' ಗರ್ಜನೆ. ಊಟದಲ್ಲಿ `ಸಾಂಬಾ ಸಾಂಬಾರು!' ಅವಕ್ಕಾಗಿ
ಬಿಡಬೇಡಿ. ಇನ್ನುಮೇಲೆ ಎಲ್ಲವೂ `ಶೋಲೆ'ಮಯ. ರಾಮ್ ಗೋಪಾಲ್
ವರ್ಮರ `ಶೋಲೆ-೨' ಚಿತ್ರದ ತಾರೆಗಳ ಪಟ್ಟಿ ಮುಗಿಯುತ್ತಿದ್ದಂತೆ,
ನಟಿ ಊರ್ಮಿಳಾ ಗೆಜ್ಜೆಕಟ್ಟಿ ತಯಾರಾಗಿದ್ದಾರೆ.

ರಮೇಶ್ ಸಿಪ್ಪಿಯ `ಶೋಲೆ' ಚಿತ್ರದ `ಮೆಹಬೂಬಾ...ಓ....
ಮೆಹಬೂಬಾ' ಐಟಂ ಸಾಂಗು ಯಾರಿಗೆ ನೆನಪಿಲ್ಲ ಹೇಳಿ? ಈಗಿನ ಶೋಲೆಗೆ
ಈ ಐಟಂ ಯಾರಾಗಬಹುದು ಅಂತಾ ವರ್ಮಾ ತಲೆ
ಕೆರೆದುಕೊಳ್ಳುತ್ತಿದ್ದಾಗ ತಟ್ಟನೆ ನೆನಪಾಗಿದ್ದು `ರಂಗೀಲಾ' ರಾಣಿ
ಊರ್ಮಿಳಾ ಮತೋಂಡ್ಕರ್.
ಸಣ್ಣವಳಿದ್ದಾಗ ಕೆಲವು ಕಾರ್ಯಕ್ರಮಗಳಲ್ಲಿ ಈ ಹಾಡಿಗೆ
ಕುಣಿದಿದ್ದೇವೆ. ಈಗ ಅದೇ ಹಾಡಿಗೆ ತೆರೆಯಮೇಲೆ ತಾನು
ಕುಣಿಯುತ್ತಿರುವುದು ಊರ್ಮಿಳಾಗೆ ಖುಷಿಯ ಜೊತೆ ಅಚ್ಚರಿ
ಎಂದ್ದಿದ್ದಾರೆ.
ಸಂಗೀತ ನಿರ್ದೇಶಕ ಆರ್.ಡಿ. ಬರ್ಮನ್ ಶೋಲೆಗೆ ಸಂಗೀತ ನೀಡಿದ್ದರು.
ಪತ್ನಿ ಆಶಾ ಭೋಂಸ್ಲೆ ಆಗ ಹಾಡಿದ ಹಾಡನ್ನೇ ಮತ್ತೊಮ್ಮೆ
ಹಾಡಲಿದ್ದಾರೆ. ಬೇರೆಯವರು ಹಾಡಿ, ಹಾಡಿನ ಒರಿಜಿನಾಲಿಟಿ
ಕೆಡಿಸುವುದನ್ನು ತಪ್ಪಿಸಲು ಆಶಾ ಹಾಡಲು ಒಪ್ಪಿದ್ದು! ಸಿನಿಮಾ
ಬಿಡುಗಡೆಯಾದ ನಂತರ ಚಿತ್ರ ಮಂದಿರದಲ್ಲಿ `ಕಿತನೇ ಅದ್ಮೀ
ಥೇ...?'ಅಂತ ನಿರ್ಮಾಪಕ ತಲೆ ಕೆಡಿಸಿಕೊಳ್ಳಬೇಕಿಲ್ಲ. ಯಾಕೆಂದರೆ
ಶೋಲೆ ಚಿತ್ರಕ್ಕೆ ಶೋಲೆಯೇ ಸಾಟಿ.
ಇನ್ನಷ್ಟು
೧೩ ಕೋಟಿ ಮಕ್ಕಳ
ಭವಿಷ್ಯ ಕತ್ತಲೆಯಲ್ಲಿ
ಬಿಸ್ಮಿಲ್ಲಾ ಖಾನ್‌ರವರ ಕೊನೆಯ ದಿನಗಳ ಕಣ್ಣೀರ ಕಥೆ
ಸಂಸ್ಕೃತಿ ಇಲಾಖೆಯಿಂದ
`ಪ್ರತಿಭಾನ್ವೇಷಣೆ'
ಉ.ಕೋರಿಯಾದ ಚೊಚ್ಚಲ ಪರಮಾಣು ಬಾಂಬ್ ಪರೀಕ್ಷೆ
ಕಗ್ಗಲಿಪುರದಲ್ಲಿ ನಟ ಟೆನ್ನಿಸ್‌ಕೃಷ್ಣ ಮೇಲೆ ಹಲ್ಲೆ
ಬಿಎಸ್‌ಪಿಯ ನಾಯಕ ಕಾಂಶಿ ರಾಮ್ ನಿಧನ
ಆಲಮಟ್ಟಿಯಲ್ಲಿ ವಿಮಾನ ನಿಲ್ದಾಣ: ಸರ್ಕಾರದ ಚಿಂತನೆ
ಬಗೆ ಹರಿದ ಭಾಷಾ ಕಲಿಕಾ
ವಿವಾದ |