|
ಸಂಜಯ್ ಲೀಲಾ ಬನ್ಸಾಲಿ ಚಿತ್ರದಲ್ಲಿ ೧೫
ಹಾಡುಗಳು!
ಮುಂಬಯಿ: ಹಾಲಿವುಡ್‌ನ
ಸಂಜಯ್ ಲೀಲಾ ಬನ್ಸಾಲಿಯ ಮಹತ್ವಾಕಾಂಕ್ಷೆಯ ಚಿತ್ರವಾದ `ಸಾವರಿಯಾ
ಚಿತ್ರದಲ್ಲಿ ಕಮ್ಮಿಯೆಂದರೂ ೧೫ ಹಾಡುಗಳಿರುತ್ತದೆ.
ಈ ಚಿತ್ರದ ಮೂಲಕ ರಿಷಿ ಕಪೂರ್ ಮಗ
ರಣಬೀರ್ ಕಪೂರ್ ಹಾಗೂ ಅನಿಲ್ ಕಪೂರ್ ಮಗಳಾದ ಸೋನಂ
ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಲಿರುವುದು ವಿಶೇಷ.
ಈ ಪ್ರಣಯ ಕಥೆಯ ಚಿತ್ರೀಕರಣ ಸಾಗುತ್ತಿದ್ದು
ಮೋಂಟಿ ಶರ್ಮ ಸಂಗೀತ ನೀಡುತ್ತಿದ್ದು, ಸಮೀರ್ ಸಾಹಿತ್ಯ
ಒದಗಿಸಿದ್ದಾರೆ.
`ಈಗಾಗಲೇ ಹತ್ತು ಹಾಡುಗಳ ಧ್ವನಿಮುದ್ರಣ
ಕಾರ್ಯ ಮುಗಿದಿದೆ. ಸಂಜಯ್ ಗೆ ಸಂಗೀತದಲ್ಲಿ ಒಳ್ಳೆ ಅಭಿರುಚಿಯಿದೆ.
ಚಿತ್ರದ ಸಂಗೀತ ಸರಳವಾಗಿದ್ದರೂ ಅರ್ಥಗರ್ಭಿತವಾಗಿ ಮನಸ್ಸಿಗೆ ಮುಟ್ಟುವಂತಿದೆ
ಎಂದು ಸಂಗೀತ ನಿರ್ದೇಶಕ ಮೋಂಟಿ ಶರ್ಮ ಹೇಳಿದ್ದಾರೆ.
ಈ ಚಿತ್ರದ ಸಂಗೀತ ಸರಳವಾಗಿದ್ದು. ಹಿಂದೆ `ಹಮ್
ದಿಲ್ ದೆ ಚುಕೆ ಸನಮ್
ಮತ್ತು `ದೇವದಾಸ್ ಚಿತ್ರದಲ್ಲಿ ಸಂಜಯ್
ಜೊತೆ ಕೆಲಸ ಮಾಡಿದ್ದೆ. ಆದರೆ `ಸಾವರಿಯ
ಚಿತ್ರದ ಮೂಲಕ ನನಗೊಂದು `ಬ್ರೇಕ್
ಸಿಕ್ಕಿದಂತಾಗಿದೆ ಎಂದು ಬಾಲಿವುಡ್‌ನಲ್ಲಿ ಹೆಜ್ಜೆ ಊರುತ್ತಿರುವ ಸಂಗೀತ ನಿರ್ದೇಶಕ
ಲಕ್ಷೀಕಾಂತ್-ಪ್ಯಾರೇಲಾಲ್ ಜೋಡಿಯ ಪ್ಯಾರೇಲಾಲ್‌ರ ಸೋದರಳಿಯನೂ
ಆದ ಮೋಂಟಿ ಶರ್ಮಾ ಹೇಳುತ್ತಾರೆ.
ಇನ್ನಷ್ಟು
ಗೇಶ್ ಕುಕನೂರು ಬಳಿ ಪ್ರೇಮ ಕಥೆಗಳಿಲ್ಲ
ವರ್ಮಾ
ಶೋಲೆ-೨ ಚಿತ್ರಕ್ಕೆ `ಸಾಂಬ'
ಫಿಕ್ಸ್
ಸಂಸಾರ ಸಾಗರದಲ್ಲಿ ತೇಲುತ್ತಿರುವ ನಮ್ರತಾ
ಕಿಂಗ್‌ಸ್ಲೆಯನ್ನು ಬೆರಗುಗೊಳಿಸಿದ ಐಶ್ವರ್ಯ
|