ಮುಂಬಯಿ: ಸೈಫ್ ಮತ್ತು ಅವನ ಗೆಳತಿ
ರೋಸಾ ಕೂಡಿ ಕಟ್ಟಿದ ಕನಸಿನ ಅರಮನೆಯಲ್ಲಿ ಬಿರುಕು ಮೂಡುತ್ತಿದೆಯೆ?
ಅವರ ಸಂಬಂಧದಲ್ಲಿ ಇತ್ತೀಚೆಗಿನ ಬೆಳವಣಿಗೆ ನೋಡಿದರೆ ಹಾಗೆಯೇ
ಅನ್ನಿಸುತ್ತಿದೆ. ಕೆಲವು ತಿಂಗಳುಗಳ ಹಿಂದೆ ಪತ್ರಿಕೆಯೊಂದರಲ್ಲಿ ಸೈಫ್
ಅಲಿ ಖಾನ್ `ರೋಸಾ ಒಬ್ಬ ಉದ್ಯೋಗಸ್ಥ ಮಹಿಳೆಯಾಗಿ ತನಗೆ ಇಷ್ಟವಾಗುವುದಿಲ್ಲ
ಎಂದು ಹೇಳಿಕೆ ಕೊಟ್ಟಿದ್ದರು. ಇದು ಅವಳ ಗಮನಕ್ಕೆ ಬಂದದ್ದೇ
ತಡ, ನ್ಯೂಯಾರ್ಕ್‌ನಿಂದ ಗಂಟು ಮೂಟೆ ಕಟ್ಟಿಕೊಂಡು ನೇರವಾಗಿ ಮುಂಬೈಗೆ
ತಿರುಗಿ ಬಂದಿದ್ದಾಳೆ. (ಆಗ ಸೈಫ್ ನಿಖಿಲ್ ಆನಂದ್ ಅವರ `ತರ ರಂ ಪಂಚಿತ್ರದ
ಶೂಟಿಂಗ್‌ಗಾಗಿ ನ್ಯೂಯಾರ್ಕ್‌ನಲ್ಲಿದ್ದರು.) `ಯಾಕಮ್ಮ
ಇದ್ದಕ್ಕಿದ್ದಂಗೆ ತಿರುಗಿ ಬಂದೆ?
ಎಂದು ಕೇಳಿದ ಮುಂಬೈ ಮಂದಿಗೆಲ್ಲ `ನನ್ನ ಯೋಗ ಕ್ಲಾಸ್ ಮಿಸ್
ಆಗುತ್ತೆ ಅಂತ ತಿರುಗಿ ಬಂದೆ
ಎಂದು ಉತ್ತರ ಕೊಟ್ಟಿದ್ದಾಳೆ.
ಆದರೆ ನಿಜವಾಗಿ, ನ್ಯೂಯಾರ್ಕ್‌ನಲ್ಲಿ ಇಬ್ಬರ ನಡುವೆ
ಆದ ಕಿತ್ತಾಟ ಅವಳು ತಿರುಗಿ ಬರಲು ಕಾರಣ ಎಂದು ಬಾಲಿವುಡ್‌ನಲ್ಲಿ
ಗುಸುಗುಸು.
ಸೈಫ್ `ಓಂಕಾರ
ಚಿತ್ರದ ಮೂಲಕ ಸ್ವಲ್ಪ ಗಂಭೀರ ಪಾತ್ರ ಮಾಡಲು ಪ್ರಾರಂಭಿಸಿದ್ದೇ
ಅವರ ಜೀವನದಲ್ಲೂ ಗಂಭೀರ ವಿಷಯಗಳು ಘಟಿಸುತ್ತಿವೆ ಎನಿಸುತ್ತಿದೆ.