ಬಾಲಿವುಡ್ ಚಿತ್ರದಲ್ಲಿ ಸಚಿನ್-ಲಾರಾ!
ಸಚಿನ್ ಮತ್ತು ಲಾರಾ ಇಬ್ರೂ ಕ್ರಿಕೆಟ್ ಬಿಟ್ಟು ಸಿನಿಮಾ
ಮಾಡ್ತಿದ್ದಾರಂತೆ. ನಿಜನಾ ? ಎಲ್ರೂ ಹಾಗೇ ಅಂದುಕೊಂಡಿದ್ದರು. ನಿರ್ಮಾಪಕ
ವಿವೇಕ್ ವಾಸ್ವಾನಿ ಅವರ `ದುಲ್ಹೆ ಮಿಲ್ ಗಯಾ' ಚಿತ್ರದ ದೃಶ್ಯವೊಂದರಲ್ಲಿ
ಇಬ್ಬರೂ ಕ್ರಿಕೆಟಿಗರು ಹೀಗೆ ಬಂದು ಹಾಗೆ ಹೋಗಲಿದ್ದಾರೆ.
ಸುಮಾರು ೧೨ ಕೋಟಿ ವೆಚ್ಚದಲ್ಲಿ
ನಿರ್ಮಾಣಗೊಳ್ಳುತ್ತಿರುವ ಈ ಚಿತ್ರದ ಮೈನ್ ಐಟಂ ಮಾಜಿ ವಿಶ್ವಸುಂದರಿ
ಸುಶ್ಮಿತಾ ಸೇನ್. ಈಕೆಯ ಒಂದು ಸಿಂಪಲ್ ಲುಕ್‌ಗೆ ಇಬ್ಬರೂ ಬೋಲ್ಡ್
ಆಗಬಹುದು ಅಂತೀರಾ ? ಹಾಗೇನಿಲ್ಲಾ ಇದೆಲ್ಲಾ ವಾಸ್ವಾನಿಯ ಪಬ್ಲಿಸಿಟಿ ಗಿಮಿಕ್.
ಈವರೆಗೆ ವಿನೋದ್ ಕಾಂಬ್ಳಿ, ಅಜಯ್ ಜಡೇಜಾ
ಎಲ್ಲ ಬಾಲಿವುಡ್ ಸೇರಿ ಮುಗ್ಗರಿಸಿ ಬಿದ್ರೂ ಬುದ್ಧಿ ಬರಲಿಲ್ಲ. ಆದರೆ
ಇವರಿಬ್ಬರ ಬಗ್ಗೆ ಬಾಲಿವುಡ್‌ಗೆ ಎಲ್ಲಿಲ್ಲದ ಗೌರವ. ಹಾಗಾದರೆ ಮುಂಬರುವ
ವೆಸ್ಟ್ ಇಂಡೀಸ್ ಕಪ್ ಜೊತೆ `ದುಲ್ಹೇ ಮಿಲ್‌ಗಯಾ' ಫ್ರೀ ಶೋ ನಿರೀಕ್ಷಿಸಬಹುದಾ
?
ವಾಸ್ವಾನಿ ಮೌನಂ. ಸಮ್ಮತಿ ಲಕ್ಷಣಂ.