|
ಪ್ರೇಮ್..... ಚಿತ್ರೀಕರಣ ಏಕೆ ನಿಂತಿದೆ?........
ಚಿತ್ರವೊಂದು ಚಿತ್ರೀಕರಣ ಇಲ್ಲದೆ ನಿಲ್ಲವುದು ಯಾಕೆ? ಕಾರಣಗಳು
ಸರಳ. ಮೊದಲನೆಯದಾಗಿ ಹಣಕಾಸಿನ ಮುಗ್ಗಟ್ಟು; ಎರಡನೆಯದಾಗಿ
ನಾಯಕನಟರ ಕಾಲ್‌ಶೀಟ್ ರಗಳೆ; ಮೂರನೆಯದಾಗಿ ಸರಿಯಾದ
ನಾಯಕಿ ಸಿಗದಿರುವುದು?
`ಪ್ರೀತಿ ಏಕೆ ಭೂಮಿ ಮೇಲಿದೆ?' ಎಂಬ ಚಿತ್ರಕ್ಕೆ ಇದ್ಯಾವ ರಗಳೆಯೂ
ಇರಲಿಲ್ಲ. ಅಶ್ವಿನಿಯ ರಾಮ್ ಪ್ರಸಾದ್‌ರಂಥ ನಿರ್ಮಾಪಕರಿದ್ದರು,
ನಿರ್ದೇಶಕ ಪ್ರೇಮ್ ನಾಯಕರಾಗಿದ್ದರು. ಹಾಗಾಗಿ ಅವೆಲ್ಲ
ಗೊಂದಲಗಳಾಗಲು ಸಾಧ್ಯವಿರಲಿಲ್ಲ. ಆದರೆ `ಪ್ರೀತಿ.. ಏಕೆ..' ಮುಹೂರ್ತವಾಗಿ ಚಿತ್ರೀಕರಣವೇ ಆಗದಿರಲು ಕಾರಣವೇನು? ಎಂಬ ಬಗ್ಗೆ
ಹಲವು ಊಹಾಪೋಹಗಳು ಹರಡಿದ್ದವು. ಅದರಲ್ಲಿ
ಪ್ರಮುಖವಾದುದೆಂದರೆ ಇನ್ನೂ ಕತೆಯೇ ಸಿದ್ಧವಾಗಲಿಲ್ಲ
ಅನ್ನುವುದು.
ಈ ಮಾತುಗಳೆಲ್ಲ ಸುಳ್ಳು ಅನ್ನುವ ನಿರ್ಮಾಪಕರು, ಪ್ರೇಮ್
ಇರುವಾಗ ಕತೆ ಸಿದ್ಧವಾಗದಿರಲು ಸಾಧ್ಯವೇ? ಅನ್ನುತ್ತಾರೆ.
ತಂತ್ರಜ್ಞರು ಇಲ್ಲ ಅನ್ನುವ ಪುಕಾರೂ ಸರಿಯಲ್ಲ, ನಮ್ಮಲ್ಲಿ ಎಲ್ಲ
ತಂತ್ರಜ್ಞರೂ ಇದ್ದಾರೆ ಅನ್ನುತ್ತಾರೆ. ಆದರೆ ಚಿತ್ರ ಆರಂಭವಾಗದಿರಲು
ಕಾರಣ ಪಾರ್ಟನರ್‌ಶಿಪ್ ಗೊಂದಲವಂತೆ.
`ಪ್ರೀತಿ...'ಗೆ ಪ್ರೇಮ್ ಮತ್ತು ರಾಮ್ ಪ್ರಸಾದ್ ಇಬ್ಬರೂ
ಪಾಲುದಾರರಂತೆ. ಆದರೆ ಆ ಪಾಲುದಾರಿಕೆಯ ಶೇಕಡಾವಾರು ಎಷ್ಟೆಷ್ಟು
ಇರಬೇಕೆನ್ನುವ ತೀರ್ಮಾನವೇ ಇನ್ನೂ ಆಗಲಿಲ್ಲವಂತೆ. ೬೦:೪೦
ಇರಬೇಕೋ, ೭೦:೩೦ ಇರಬೇಕೋ ಎಂಬ ಚರ್ಚೆಯೇ ಇದುವರೆಗೂ
ಮುಂದುವರಿದಿದ್ದು ಈಗ ಮುಗಿದಿದೆಯಂತೆ. ಆದರೆ ಎಷ್ಟಕ್ಕೆ
ನಿರ್ಧಾರವಾಗಿದೆ ಎಂದು ಮಾತ್ರ ಪ್ರಸಾದ್ ಹೇಳುತ್ತಿಲ್ಲ. ಇಬ್ಬರಿಗೂ
ಸರಿಹೊಂದುವಂತೆ ನಿರ್ಧರಿಸಲಾಗಿದೆಯಂತೆ.
ಅಂದ ಹಾಗೆ ಅವರು ಇವರು ಎಂದು ನಾಯಕಿಯರಿಗಾಗಿ ತಡಕಾಡುತ್ತಿದ್ದ
ಪ್ರೇಮ್ ಮತ್ತು ಪ್ರಸಾದ್‌ಗೆ ಈಗ ಹಿಂದಿಯ `ತಮನಾ'
ನಾಯಕಿಯಾಗಿ ಸಿಕ್ಕಿದ್ದಾರೆ. ಹಾಗಾಗಿ ಆ ಸಮಸ್ಯೆಯೂ ಮುಗಿದಿದೆ. ಅದೇ
ರೀತಿ ಬಾಲಿವುಡ್‌ನ ಸದಾ ಸುಡುಸುಡುವ ಹುಡುಗಿ `ಮಲ್ಲಿಕಾ
ಶೆರಾವತ್' ಕೂಡ ಒಂದು ಹಾಡಿಗಾಗಿ ಬಂದು ಕುಣಿದು ಕನ್ನಡದ
ತೆರೆಯನ್ನು ಬೆಚ್ಚಗಾಗಿಸಲಿದ್ದಾರೆ. ಹಾಗಾಗಿ ಪ್ರೇಮ್‌ರ ಈ ಹೊಸ
ಚಿತ್ರದಲ್ಲಿ ಏನಿಲ್ಲವೆಂದರೂ ಮಿನಿಮಮ್ ರೋಮಾಂಚನವಂತೂ
ಗ್ಯಾರಂಟಿಯಾಗಿದೆ.
ಇನ್ನಷ್ಟು
೧೩ ಕೋಟಿ ಮಕ್ಕಳ
ಭವಿಷ್ಯ ಕತ್ತಲೆಯಲ್ಲಿ
ಬಿಸ್ಮಿಲ್ಲಾ ಖಾನ್‌ರವರ ಕೊನೆಯ ದಿನಗಳ ಕಣ್ಣೀರ ಕಥೆ
ಸಂಸ್ಕೃತಿ ಇಲಾಖೆಯಿಂದ
`ಪ್ರತಿಭಾನ್ವೇಷಣೆ'
ಉ.ಕೋರಿಯಾದ ಚೊಚ್ಚಲ ಪರಮಾಣು ಬಾಂಬ್ ಪರೀಕ್ಷೆ
ಕಗ್ಗಲಿಪುರದಲ್ಲಿ ನಟ ಟೆನ್ನಿಸ್‌ಕೃಷ್ಣ ಮೇಲೆ ಹಲ್ಲೆ
ಬಿಎಸ್‌ಪಿಯ ನಾಯಕ ಕಾಂಶಿ ರಾಮ್ ನಿಧನ
ಆಲಮಟ್ಟಿಯಲ್ಲಿ ವಿಮಾನ ನಿಲ್ದಾಣ: ಸರ್ಕಾರದ ಚಿಂತನೆ
ಬಗೆ ಹರಿದ ಭಾಷಾ ಕಲಿಕಾ
ವಿವಾದ |