Fonts Problem?

For Unicode version click here

For ANSI version click here

Downloads

Wallpapers

Vikrantakarnataka Weekly

 

 

ಮುಖ ಪುಟ

ಸುದ್ದಿ-ಸದ್ದು

ಎನ್ನಾರೈ

ಸಾಹಿತ್ಯ-ಸಂದರ್ಭ

ಚಿತ್ರ ವಿಚಿತ್ರ

ಚಿತ್ರ ಶಾಲೆ

ಒಕ್ಕಲುತನ

ವೆಬ್ ಲಿಂಕ್ಸ್

ಪಾಕ ಶಾಲೆ

ಆಟ ಬೊಂಬಾಟ

ನಗೆ ಬುಗ್ಗೆ

ನಿಮ್ಮ ಓಲೆ

Google    

ವೆಬ್

ವಿಕ್ರಾಂತ ಕರ್ನಾಟಕ

Monday, 25 September 2006 02:29 PM

ಭಾರತದ ಖ್ಯಾತತಾರೆ ಪದ್ಮಿನಿ ನಿಧನ

ಚೆನ್ನೈ: ಖ್ಯಾತ ಚಲನಚಿತ್ರ ನಟಿ ಹಾಗೂ ಭರತನಾಟ್ಯ ಕಲಾವಿದೆ ಪದ್ಮಿನಿ ಹೃದಯಾಘಾತದಿಂದ ಚೆನೈನಲ್ಲಿ ಭಾನುವಾರ ರಾತ್ರಿ ನಿಧನರಾಗಿದ್ದಾರೆ.

ಚೆನ್ನೈನ ಅಪೋಲೊ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದPadmini ಪದ್ಮಿನಿಯವರಿಗೆ ೭೪ ವರ್ಷ ವಯಸ್ಸಾಗಿತ್ತು. ತಮಿಳು, ತೆಲುಗು, ಮಲಯಾಳಂ, ಹಿಂದಿ, ಕನ್ನಡ ಭಾಷೆಯಲ್ಲಿ ಸುಮಾರು ೨೫೦ ಕ್ಕೂ ಅಧಿಕ ಚಿತ್ರಗಳಲ್ಲಿ ನಟಿಸಿದ್ದರು. ಕೇರಳದ ಪೂಜಪ್ಪುರದಲ್ಲಿ ಜೂನ್ ೧೨ ರಂದು ಜನಿಸಿದ ಪದ್ಮಿನಿಯವರು `ಕಲ್ಪನಾ ಎಂಬ ಹಿಂದಿ ಚಿತ್ರ ಮೂಲಕ ಚಿತ್ರರಂಗಕ್ಕೆ ಕಾಲಿರಿಸಿದರು. ರಾಜ್ ಕಪೂರ್ ಅವರ ಜೊತೆ `ಜಿಸ್ ದೇಶ್ ಮೇ ಗಂಗಾ ಬೆಹತಿ ಹೈ, ಆಶಿಕ್ ಮತ್ತು ಮೇರಾ ನಾಮ್ ಜೋಕರ್ ಚಿತ್ರದಲ್ಲಿ ನಟಿಸಿದ್ದರು.

ತಮಿಳು ಚಿತ್ರರಂಗದ ಖ್ಯಾತ ನಟರಾದ ಶಿವಾಜಿ ಗಣೇಶನ್ ಹಾಗೂ ಎಂ.ಜಿ. ರಾಮಚಂದ್ರನ್ ಅವರ ಜೊತೆ ಹಲವು ಜನಪ್ರಿಯ ಚಿತ್ರಗಳಲ್ಲಿ ನಟಿಸಿದ್ದರು.

ಭರತನಾಟ್ಯವನ್ನು ಚಿಕ್ಕಂದಿನಿಂದಲೇ ಅಭ್ಯಾಸ ಮಾಡಿದ್ದ ಪದ್ಮಿನಿಯವರು `ಪದ್ಮಿನಿ ಸ್ಕೂಲ್ ಆಫ್ ಫೈನ್ ಆರ್ಟ್ ಎಂಬ ಕಲಾಶಾಲೆಯನ್ನು ಅಮೆರಿಕಾದ ನ್ಯೂ ಜೆರ್ಸಿಯಲ್ಲಿ ನಡೆಸುತ್ತಿದ್ದರು.

ಡಾ. ಕೆ.ಟಿ. ರಾಮಚಂದ್ರನ್ ಅವರನ್ನು ವಿವಾಹವಾಗಿದ್ದರು. ಪದ್ಮಿನಿಯವರಿಗೆ ಪ್ರೇಮ್ ರಾಮಚಂದ್ರನ್ ಎಂಬ ಪುತ್ರ ಇದ್ದಾರೆ. ಸದ್ಯ ಅವರು ವಾರ್ನರ್ ಬ್ರದರ್ಸ್ ಕಂಪೆನಿಯಲ್ಲಿ ಕೆಲಸನಿರತರಾಗಿದ್ದಾರೆ.

ಇನ್ನಷ್ಟು

ಮೈಸೂರು ದಸರಾ - ೨೦೦೬

ದಾವಣಗೆರೆಯಲ್ಲಿ ಸಮಾಜವಾದಿಗಳ ಸಮಾವೇಶ

ಬೆಳಗಾವಿಯಲ್ಲಿ ವಿಧಾನಸಭಾ ಅಧಿವೇಶನ ಪ್ರಾರಂಭ

ಫ್ರಾನ್ಸ್ ಪತ್ರಿಕೆಯಲ್ಲಿ ಲಾಡೆನ್ ಸಾವಿನ ವರದಿ

ಮಹಿಳೆಯರೂ ವೇದ ಕಲಿಯಬೇಕು: ಸ್ವಾಮೀಜಿ

ಕರ್ನಾಟಕಕ್ಕೆ ವಿಶ್ವ ಬ್ಯಾಂಕ್‌ನಿಂದ ೮೯೭ ಕೋಟಿ. ರೂ

ಸೂರ್ಯನ ಜಾಡು ಹಿಡಿಯ ಹೊರಟ ಜಪಾನಿಗರು

ಕೇರಳದಲ್ಲಿ ಕೋಲಾ ನಿಷೇಧ ರದ್ದು

ಸಚಿವರ ಹೇಳಿಕೆಗೆ ಕ್ಷಮೆ ಯಾಚಿಸಿದ ಗೌಡರು

ಟಿಪ್ಪು ವಿವಾದದಲ್ಲಿ ಮೂರನೆಯ ಪಕ್ಷ

 

Print This PagePrint this page

Email this Page

ಮುಖಪುಟ

Copyright Vikranta Prakashana 2006. All rights reserved.
Site best viewed in 800x600 resolution.

Email : feedback@vikrantakarnataka.com