Fonts Problem?

Downloads

Wallpapers

Vikrantakarnataka Weekly

 

 

ಮುಖ ಪುಟ

ಸುದ್ದಿ-ಸದ್ದು

ಎನ್ನಾರೈ

ಸಾಹಿತ್ಯ-ಸಂದರ್ಭ

ಚಿತ್ರ ವಿಚಿತ್ರ

ಚಿತ್ರ ಶಾಲೆ

ಒಕ್ಕಲುತನ

ವೆಬ್ ಲಿಂಕ್ಸ್

ಪಾಕ ಶಾಲೆ

ಆಟ ಬೊಂಬಾಟ

ನಗೆ ಬುಗ್ಗೆ

ನಿಮ್ಮ ಓಲೆ

Google

 

ವೆಬ್

ವಿಕ್ರಾಂತ ಕರ್ನಾಟಕ

 

Friday, 01 September 2006 03:31 PM

ವಿಷ್ಣುವರ್ಧನ್‌ನಿಂದ ಅನಿರುದ್ಧ ಗುಣಗಾನ

ನಾವು ಇನ್ನು ಮೇಲೆ ವ್ಹೈಟ್ ಉಳಿಸಿಕೋಬೇಕಷ್ಟೇ !

 

ಚಿತ್ರದಲ್ಲಿ ನನ್ನನ್ನು ಹೈಲೈಟ್ ಮಾಡಬಾರದಿತ್ತು... ನಟ ವಿಷ್ಣುವರ್ಧನ್ ಹೀಗೊಂದು ಮಾತು ಹರಿಬಿಟ್ಟಾಗ ಇಡೀ ಗಾಂಧಿನಗರವೇ ಅಚ್ಚರಿಪಟ್ಟಿತು. ನೀನೆಲ್ಲೋ ನಾನಲ್ಲೆ ಚಿತ್ರದ ಬಗ್ಗೆ ವಿಷ್ಣು ಮಾಡಿದ ಒಂದೇ ಒಂದು ಆಕ್ಷೇಪ ಅಂದರೆ ಇದು.

 

ಈ ಪ್ರೀತಿಯ ಆಕ್ಷೇಪ ಹೆಗಲೇರಿದ್ದು ನಿರ್ಮಾಪಕ ಕೆ.ಮಂಜು ಮೇಲೆ. ಚಿತ್ರದ ನಾಯಕ ಅನಿರುದ್ಧ. ಆತ ನಾಯಕ ಪಾತ್ರಕ್ಕೆ ತಕ್ಕಂತೆ ಅಭಿನಯಿಸಿದ್ದಾನೆ. ಚಿತ್ರದ ಹೈಲೈಟು ಅವನು ಮತ್ತು ರಕ್ಷಿತಾ. ನನ್ನದೇನಿದ್ದರೂ ಅತಿಥಿ ಪಾತ್ರ. ಆದರೆ ನನ್ನ ಚಿತ್ರವನ್ನು ಪೋಸ್ಟರ್‌ನಲ್ಲಿ ಹೈಲೈಟ್ ಮಾಡಬಾರದಿತ್ತು. ನಾವು ಬೆಳೆಯುವಷ್ಟು ಬೆಳೆದಿದ್ದೇವೆ. ಇನ್ನು ಹೈಟ್ ಆಗಲ್ಲ, ವ್ಹೈಟ್ ಉಳಿಸಿಕೋಬೇಕಷ್ಟೇ...

 

ವಿಷ್ಣು ಅವರ ಈ ಮಾತಿಗೆ ಬೆಕ್ಕಸ ಬೆರಗಾಯಿತು ಪತ್ರಕರ್ತರ ಸಮೂಹ. ಅನಿರುದ್ಧ, ತನ್ನ ಅಳಿಯ ಎನ್ನುವುದಕ್ಕಿಂತ ಒಬ್ಬ ಕಲಾವಿದನಾಗಿ ಆತನನ್ನು ವಿಮರ್ಶಿಸಿದರು. ಹಿರಿಯ ಕಲಾವಿದರಿಗೆ ಸರಿಸಮಾನವಾಗಿ ಅಭಿನಯಿಸಿದ ಆತನ ಚಾತುರ್ಯ ಕೊಂಡಾಡಿದರು.

 

ಇದು ಅನಿರುದ್ಧನಿಗೆ ಮಾತ್ರ ಸೀಮಿತವಾಗದಿರಲಿ.

 

ನಟ ರಮೇಶ್ ಹೇಳುವಂತೆ, `ನೀನೆಲ್ಲೋ ನಾನಲ್ಲೇ ಚಿತ್ರ ತನಗೆ `ಅಮೃತವರ್ಷಿಣಿಯಲ್ಲಿ ಸಿಕ್ಕ ಜನಪ್ರಿಯತೆಯನ್ನು ಅನಿರುದ್ಧಗೆ ಗಳಿಸಿಕೊಡಲು ಶಕ್ತವಾಗಿದೆ. ವಿಷ್ಣು ಚಿತ್ರಗಳು ಸೋಲುತ್ತಿದ್ದ ದಿನಗಳಲ್ಲಿ `ಲಾಲಿ ಚಿತ್ರದ ಮೂಲಕ ಹೊಸ ಇಮೇಜು ದಕ್ಕಿತು. ಇದೀಗ ಅನಿರುದ್ಧನ ಯೋಗಾಯೋಗ.

 

Print This PagePrint this page

 

Email this Page

ಮುಖಪುಟ

Copyright Vikranta Prakashana 2006. All rights reserved.
Site best viewed in 800x600 resolution.

Email : feedback@vikrantakarnataka.com