|
ಸಂಸಾರ ಸಾಗರದಲ್ಲಿ ತೇಲುತ್ತಿರುವ ನಮ್ರತಾ
ಒಂದು ಕಾಲದ ಬಾಲಿವುಡ್ ತಾರೆ ನಮ್ರತಾ
ಶಿರೋಡ್ಕರ್ ಈಗ ಟಾಲಿವುಡ್ ನಟ ಮಹೇಶ್ ಬಾಬು ಅವರ ಕೈಹಿಡಿದು ಸಂತೃಪ್ತ
ಗೃಹಿಣಿಯಾಗಿ ಈಗ ತಾಯ್ತನದ ಹೊಸ್ತಿಲಲ್ಲಿದ್ದಾಳೆ.
ಈಗ ಮುಂಬೈಯಿಂದ ಹೈದ್ರಾಬಾದಿಗೆ ಶಿಫ್ಟ್
ಆಗಿರುವ ನಮೃತಾ ಸದ್ಯ `ಜುಬ್ಲಿ ಹಿಲ್ಸ್
ನಲ್ಲಿ ಇರುವ ಮನೆಯಲ್ಲಿ ಕುಳಿತು `ಕನಸಿನ ಮನೆ
ಕಟ್ಟುವ ಕನಸು ಹೆಣೆಯುತ್ತಿದ್ದಾರೆ.
ತಂದೆ ತಾಯಿ ಆರು ತಿಂಗಳಿಗೊಮ್ಮೆ ಬರುತ್ತಾರೆ.
ತಿರುಪತಿಗೆ ಹೋಗುವ ಮುಂಬೈ ಗೆಳೆಯರು ಇಲ್ಲಿ ಭೇಟಿ ನೀಡಿಯೇ
ಹೋಗುತ್ತಾರೆ. ಟಬು ಕೂಡಾ ಸದ್ಯವೇ ಹೈದ್ರಾಬಾದಿನ ನಿವಾಸಿ
ಆಗುವವಳಿದ್ದಾಳೆ. ಹೀಗೆ ಹೈದ್ರಾಬಾದ್ ನಮ್ರತಾಳಿಗೆ
ತವರೂರಂತೆಯೇ ಎನ್ನಿಸುತ್ತಿದೆಯಂತೆ.
ನಮ್ರತಾ ಬಾಲಿವುಡ್‌ನಿಂದ ಸ್ವಲ್ಪ ದೂರವೇ
ಉಳಿದಿದ್ದಳು. ಈಗಂತೂ ಒಬ್ಬ ಸೂಪರ್ ಸ್ಟಾರನ್ನೇ ಮದುವೆಯಾಗಿ ಅವನ
ಯಶಸ್ಸಿನ ಒಂದು ಭಾಗವಾಗಿರುವುದಲ್ಲೇ
ಸಂತೋಷಕಾಣುತ್ತಿದ್ದಾಳಂತೆ.
ಮಹೇಶ್ ಮತ್ತು ನಮ್ರತಾ ಮಹೇಶ್‌ನ ಮದುವೆಗೆ
ಕುಟುಂಬದ ಒಪ್ಪಿಗೆ ಸಿಕ್ಕಿರಲಿಲ್ಲ. ಈ ಸಮಯ ಮಹೇಶ ಮತ್ತು ನಾನು
ಪರಸ್ಪರ ಇನ್ನೂ ಚೆನ್ನಾಗಿ ಅರಿಯಲು ಸಹಾಯವಾಯಿತು ಎನ್ನುತ್ತಾಳೆ ನಮ್ರತಾ.
ಮಹೇಶನ ಹಿಂದೆ ಹುಡಗಿಯರು
ಬೀಳುತ್ತಾರೆ. ಆದರೆ ನನಗೇನೂ ಇದರಿಂದ ಬೇಸರವಿಲ್ಲ. ನಾನು ಅವನ
ಜೊತೆ ಬಹಳ `ಸೆಕ್ಯೂರ್
ಆಗು ಇರ್‍ತೀನಿ ಅಂತ ತನ್ನ ಗಂಡನ ಬಗ್ಗೆ ಹೊಗಳುತ್ತಾಳೆ. |