|
ಮುನಿರತ್ನ ಡಬ್ಬಿಂಗ್ ಮಾಡ್ತಾರಂತೆ! ಹುಶಾರ್!
ಮುನಿರತ್ನಾ ಎಂಬ ನಿರ್ಮಾಪಕರು ಈಗೀಗ ಕನ್ನಡದ ಚಿತ್ರರಸಿಕರಿಗೆ
ಪರಿಚಯ ಆಗುತ್ತಿದ್ದಾರೆ. ರಕ್ತ ಕಣ್ಣೀರು, ಅದಕ್ಕು ಮುಂಚೆ ಆಂಟಿ
ಪ್ರೀತ್ಸೇ ಮುಂತಾದ ಚಿತ್ರಗಳನ್ನು ನಿರ್ಮಿಸಿರುವ ಖ್ಯಾತಿಯ
ಮುನಿರತ್ನ ಅವತ್ತು ನಿರ್ಮಾಪಕರು ಕರೆದು ಪತ್ರಿಕಾಗೋಷ್ಠಿಯಲ್ಲಿ
ಯದ್ವಾತದ್ವಾ ಮಾತನಾಡಿ ಎಲ್ಲರಿಗೂ ಬೆವರು ಇಳಿಸಿದರು. ಅದರಲ್ಲೂ
ಪತ್ರಕರ್ತರಿಗೇ ಅವರ ಮಾತಿನ ಓಟ ನೋಡಿ ಇದೇನು ನಡೆಯುತ್ತಿದೆ
ಎಂದೇ ಅರ್ಥವಾಗಲಿಲ್ಲ. ಅವರ ವಾದವೆಲ್ಲವೂ ತಾರೆಯರು
ತೆಗೆದುಕೊಳ್ಳುವ ಸಂಭಾವನೆಯ ಮೇಲಿತ್ತು ತಾರೆಯರೆಲ್ಲ
ತಮ್ಮ ಸಂಭಾವನೆ ಕಡಿಮೆ ಮಾಡಬೇಕೆಂದು ಕರೆ ನೀಡಿದರು
ಮುನಿರತ್ನ!
`ಮೂರು ತಿಂಗಳು ಸಮಯ ಕೊಡ್ತೇವೆ... ಸ್ಟಾರ್‌ಗಳು ತಮ್ಮ
ಸಂಭಾವನೆ ಕಡಿಮೆ ಮಾಡಿದರೆ ಸರಿ, ಇಲ್ಲದಿದ್ದರೆ ತೆಲಗು, ತಮಿಳು,
ಹಿಂದಿಯ ಚಿತ್ರಗಳೆಲ್ಲ ಕನ್ನಡಕ್ಕೆ ಡಬ್ ಆಗಿ ಬರುತ್ತವೆ' ಎಂದು
ಮೊದಲ ಕಹಳೆ ಊದಿದರು.
ಮುನಿರತ್ನ ಅವರಿಗೆ ನಿನ್ನೆ ಮೊನ್ನೆಯ ಇತಿಹಾಸ ಗೊತ್ತಿರಬಹುದು.
ಆದರೆ ೧೯೬೩ರ ಇತಿಹಾಸ ಗೊತ್ತಿರಲಿಕ್ಕಿಲ್ಲ. `ಮಾಯಾಬಜಾರ್' ಚಿತ್ರ
ಕನ್ನಡಕ್ಕೆ ಡಬ್ ಆದಾಗ ಸಾಹಿತಿಗಳು, ಕಲಾವಿದರು, ಪತ್ರಕರ್ತರು,
ಅನಕೃ, ರಾಮಮೂರ್ತಿ ಮುಂತಾದ ಕನ್ನಡದ ಹಿರಿಯ ಚೇತನಗಳು
ಕೆಂಪೇಗೌಡ ರಸ್ತೆಯಲ್ಲಿ ಬೃಹತ್ ಮೆರವಣೆಗೆ ಮಾಡಿ
ಪ್ರತಿಭಟಿಸಿದ್ದರು. ಹಾಗೆಯೇ ಆಗಿನಿಂದಲೇ ಕನ್ನಡದಲ್ಲಿ ಡಬ್ಬಿಂಗ್
ಸಂಸ್ಕೃತಿಯ ವಿರುದ್ಧ ಕನ್ನಡಿಗರ ಮನಸಿನಲ್ಲಿ ಒಂದು ಹೋರಾಟವೇ
ರೂಪುಗೊಂಡಿತು. ಈಗಲೂ ಅಷ್ಟೇ. ಡಬ್ಬಿಂಗ್ ಸಂಸ್ಕೃತಿಯನ್ನು
ವಿರೋಧಿಸುವ ವಿಚಾರದಲ್ಲಿ ರಾಜ್ ಕೂಡಾ ಆಗಾಗ ಗುಡುಗಿದ್ದು
ಮುನಿರತ್ನ ಅವರಿಗೆ ಕೇಳಿರಲಿಕ್ಕಿಲ್ಲ. ಯಾಕೆಂದರೆ ಮುನಿರತ್ನ
ಆಗಿನ್ನೂ ಚಿತ್ರರಂಗದತ್ತ ಕಣ್ಣು ಹಾಕಿರಲಿಲ್ಲ.
`ಇನ್ನು ಮುಂದೆ ಶಾರುಖ್ ಖಾನ್, ರಜನೀಕಾಂತ್, ಚಿರಂಜೀವಿಗಳ
ಚಿತ್ರಗಳನ್ನು ಕನ್ನಡದಲ್ಲಿ ಡಬ್ ಮಾಡ್ತೀವಿ. ಅವರ ದೊಡ್ಡ ದೊಡ್ಡ
ಕಟೌಟ್ ನಿಲ್ಲಿಸುತ್ತೇವೆ' ಎಂದಾಗ ಬಹುಶಃ ನಿರ್ಮಾಪಕರಿಗೂ
ಮುಜುಗರವಾಗಿರಬೇಕು. ಅದಿರಲಿ, `ರಮೇಶ್' ರಂಥ ನಟ ಒಂದು
ಚಿತ್ರಕ್ಕೆ ಹದಿನೈದು ಲಕ್ಷ ತಗೋತಾರೆ. ಐವತ್ತು ಸಾವಿರ ಕಡಿಮೆ
ಕೊಟ್ಟರೂ ಡಬ್ಬಿಂಗ್‌ಗೆ ಬರಲಿಲ್ಲ. ಪೂರ್ತಿ ಸಂದಾಯವಾದ ಮೇಲೆ
ಬಂದರು' ಎಂದು ಮುನಿರತ್ನ ಹೇಳಿದರು. `ಈ ರಮೇಶ್‌ಗೆ
ಕೆಂಪೇಗೌಡ ರಸ್ತೆಯ ಚಿತ್ರಮಂದಿರದಲ್ಲಿ ನಾಲ್ಕು ಶೋ ಫುಲ್
ಮಾಡೋ ತಾಕತ್ತಿಲ್ಲ' ಅಂದೂ ಬಿಟ್ಟರು.
ತಮ್ಮನ್ನು ಚಿತ್ರದಲ್ಲಿ ಹಾಕಿಕೊಳ್ಳಿ ಎಂದು ರಮೇಶ್ ಯಾವತ್ತೂ
ಮುನಿರತ್ನ ಅವರಿಗೆ ಅರ್ಜಿ ಸಲ್ಲಿಸಿದ್ದು, ಮನವಿ ಮಾಡಿಕೊಂಡಿದ್ದದು
ಪತ್ರಕರ್ತರ್‍ಯಾರಿಗೂ ಗೊತ್ತಿಲ್ಲ. ಅಲ್ಲದೇ, ರಮೇಶ್‌ರಂಥ ಸಭ್ಯನಟ
ತಮ್ಮ ಸಂಭಾವನೆ ಇಷ್ಟು ಎಂದು ಹೇಳುವುದು ಅದನ್ನೂ ವಸೂಲು
ಮಾಡುವುದು ಅವರ ಹಕ್ಕು. ಯಾಕೆ? ಕೋಟಿಗಟ್ಟಲೆ ಎಣಿಸುವ
ನಾಯಕರ್‍ಯಾರಿಗೂ ಮುನಿರತ್ನಗೆ ಗೊತ್ತಲ್ಲವೇ? ಅವರ ಹೆಸರು
ಎತ್ತಿದರೆ ಕಷ್ಟವಾಗುತ್ತದೆ ಎಂಬುದು ಮುನಿರತ್ನ ಅವರಿಗೂ ಗೊತ್ತು.
ಅದೇ ಸಂದರ್ಭದಲ್ಲಿ ಅಲ್ಲೇ ಪಕ್ಕದಲ್ಲಿ ಕೂತಿದ್ದ ಮಂಜು ಇನ್ನೊಂದು
ಮಾತು ಹೇಳಿದರು; `ಸಿದ್ದಲಿಂಗೇಶ್ವರ ಚಿತ್ರಮಂದಿರದವರು ಹಾಗೂ
ಪಿವಿಆರ್‍ನವರು ಕನ್ನಡ ಚಿತ್ರ ನಾಲ್ಕು ಶೋ ಕೂಡ ತುಂಬಲ್ಲ ಅಂತಾರೆ'
ಎಂದು ದೂರಿದರು.
ಇದೆಲ್ಲ ಮುಗಿಯುವ ಹೊತ್ತಿಗೆ ಪಾರ್ವತಮ್ಮ ಮಾತನಾಡುತ್ತಾ ಒಂದು
ಮಾತು ಹೇಳಿದರು; `ಡಬ್ಬಿಂಗ್ ಮಾಡಿ- ಜನರೇ ಕಲ್ಲು ತಗೋತಾರೆ!'
ಇನ್ನಷ್ಟು
ಭಾರತದಲ್ಲಿ ತಲೆ ಎತ್ತಲಿರುವ ಪಾಕ್ ಬ್ಯಾಂಕ್
ಉತ್ತಮ ಕೃಷಿಕ ಪ್ರಶಸ್ತಿಗೆ ಅರ್ಜಿ ಅಹ್ವಾನ
ವೈಮಾಕ್ಸ್ ಆಗಲಿದೆ ಬೆಂಗಳೂರು:ಐಟಿ ಕಾರ್ಯದರ್ಶಿ
ಯೂಟೂಬ್ ವೆಬ್‌ಸೈಟ್ ಖರೀದಿಸಿದ ಗೂಗಲ್
ಬಿಎಸ್‌ಎನ್‌ಎಲ್‌ನ ಎಸ್‌ಟಿಡಿ ದರದಲ್ಲಿ ಕಡಿತ
ಕ್ಷಮಾದಾನ ನ್ಯಾಯಾಂಗ ಪರಿಶೀಲನೆಗೆ ಅರ್ಹ
ಕಟ್ಟಡಕ್ಕೆ ಅಪ್ಪಳಿಸಿದ ವಿಮಾನ: ಬೆಚ್ಚಿದ ನ್ಯೂಯಾರ್ಕ್
ದೇಶ ವಿರೋಧಿ ಭಾವನೆ : ಗೂಗಲ್‌ಗೆ ನೋಟೀಸ್
ಆರ್‌ವಿಸಿಇ ವಿದ್ಯಾರ್ಥಿಗಳಿಂದ ವಿಶೇಷ ವಾಹನ ತಯಾರಿ
ಯುನೆಸ್ಕೊ ತಂಡದಿಂದ ಬೇಲೂರು ಹಳೇಬೀಡು ವೀಕ್ಷಣೆ
ಕೆಪಿಎಸ್‌ಸಿ ಇನ್ನು ಯುಪಿಎಸ್‌ಸಿ ಮಾದರಿಯಲ್ಲಿ
|