|
ಕತೆ ಬೇಕಾಗಲ್ಲ... ಆದ್ರೆ ಹೀರೋ ಯಾರು ಹೇಳಿ!!!?
ಮುಖೇಶ್ ರಿಷಿ ಎಂಬ ಹಿರಿಯ ಖಳನ ಬಗ್ಗೆ ನೀವು ಕೇಳಿರಬಹದು.
ಓದಿರಬಹುದು, ಆತನ ಚಿತ್ರಗಳನ್ನು ನೋಡಿರಲೂಬಹುದು. ನೀವು
`ಸರ್ಫರೋಶ್' ಚಿತ್ರ ನೋಡಿದ್ದರೆ ಅದರಲ್ಲಿ ಅಮೀರ್ ಖಾನ್‌ಗೆ
ಒತ್ತಾಸೆಯಾಗಿ ನಿಲ್ಲುವ ಪೊಲೀಸ್ ಅಧಿಕಾರಿ ಸಲೀಂನ ಪಾತ್ರ
ವಹಿಸಿರುವವರೇ ಮುಖೇಶ್ ರಿಷಿ.

ಈ ಮುಖೇಶ್ ರಿಷಿ ಈಗ ಕನ್ನಡಕ್ಕೆ ಖಳನಾಗಿ ಬರುತ್ತಿದ್ದಾರೆ, ಭೂಪತಿ
ಚಿತ್ರದ ಮೂಲಕ. ಭೂಪತಿಯ ಹೀರೋ ದರ್ಶನ್.

ಅಂದಹಾಗೆ ಮುಖೇಶ್ ರಿಷಿ ಕತೆ ಕೇಳಿಲ್ಲವಂತೆ. ಆತ
ನಾಯಕನಟನಾಗುವವನ ದೇಹ, ಅಂಗಸೌಷ್ಠವ ಇತ್ಯಾದಿ ಬಗ್ಗೆ
ವಿಚಾರಿಸಿದರಂತೆ. ಸಾಕಷ್ಟು ಎತ್ತರ, ದಪ್ಪಗಿರುವ ರಿಷಿಗೆ ಸಣಕಲು
ನಾಯಕ ಹೊಡೆದರೆ ಆಭಾಸವಾಗುವುದಿಲ್ಲವೇ? ಹಾಗಾಗಿ ನಾಯಕ
ನಟಿಸಿದ ವಿಡಿಯೋ ಅಥವಾ ಸಿಡಿ ನೋಡಿ, ತಮಗೆ ಅಂದರೆ ತಮ್ಮ
ದೇಹಕ್ಕೆ ನಾಯಕ ಸರಿ ಹೊಂದಿದರೆ ಮಾತ್ರ ಒಪ್ಪಿಕೊಳ್ಳುತ್ತಿದ್ದಾರೆ.
ಈಗ ದರ್ಶನ್ ಚಿತ್ರ `ಭೂಪತಿ'ಯನ್ನು ಒಪ್ಪಿಕೊಂಡಿರುವುದೂ
ಹಾಗೆಯೇ.
ಇನ್ನಷ್ಟು
ಅ. ೧೨ರಂದು ದಕ್ಷಿಣ ಏಷ್ಯಾ ಪತ್ರಿಕಾ ಕಾರ್ಯಾಗಾರ
ಕಿರಣ್ ದೇಸಾಯಿಗೆ ಬೂಕರ್ ಪ್ರಶಸ್ತಿ
ಮರುಜೀವ ಪಡೆಯುತ್ತಿರುವ ರಕ್ಷಣಾ ಹಗರಣ
೧೩ ಕೋಟಿ ಮಕ್ಕಳ
ಭವಿಷ್ಯ ಕತ್ತಲೆಯಲ್ಲಿ
ಬಿಸ್ಮಿಲ್ಲಾ ಖಾನ್‌ರವರ ಕೊನೆಯ ದಿನಗಳ ಕಣ್ಣೀರ ಕಥೆ
ಸಂಸ್ಕೃತಿ ಇಲಾಖೆಯಿಂದ
`ಪ್ರತಿಭಾನ್ವೇಷಣೆ'
ಉ.ಕೋರಿಯಾದ ಚೊಚ್ಚಲ ಪರಮಾಣು ಬಾಂಬ್ ಪರೀಕ್ಷೆ
ಕಗ್ಗಲಿಪುರದಲ್ಲಿ ನಟ ಟೆನ್ನಿಸ್‌ಕೃಷ್ಣ ಮೇಲೆ ಹಲ್ಲೆ
ಬಿಎಸ್‌ಪಿಯ ನಾಯಕ ಕಾಂಶಿ ರಾಮ್ ನಿಧನ
ಆಲಮಟ್ಟಿಯಲ್ಲಿ ವಿಮಾನ ನಿಲ್ದಾಣ: ಸರ್ಕಾರದ ಚಿಂತನೆ
ಬಗೆ ಹರಿದ ಭಾಷಾ ಕಲಿಕಾ
ವಿವಾದ |