|
ಈ ಕವಿ ಮತ್ತೆ ಚಿಗುರೊಡಿದಿದೆ `ಬೇರು' ನಂತರ `ಮೌನಿ'ಯಾಗಿ
ಸದಭಿರುಚಿ ಕನ್ನಡ ಚಲನಚಿತ್ರವನ್ನು ಬೆಂಬಲಿಸುವ ಸಲುವಾಗಿ
`ವಿಕ್ರಾಂತ ಪ್ರಕಾಶನ' ಈ ಕವಿಯ ಈ ಕಾರ್ಯಕ್ರಮಕ್ಕೆ
ಪ್ರಚಾರವನ್ನು ಒದಗಿಸುವ ಹೊಣೆ ಹೊತ್ತಿದೆ.
ಬೆಂಗಳೂರು: ಎಲ್ಲಾ ಕನ್ನಡ ಅಭಿಮಾನಿಗಳ
ಅಂತರರಾಷ್ಟ್ರೀಯ ವೇದಿಕೆ-`ಈ ಕವಿ' ಸಂಸ್ಥೆ ಹೆಮ್ಮೆಯ
ಕನ್ನಡನಾಡಿನ ಭಾಷೆ, ಸಂಸ್ಕೃತಿ, ಕಲಾವೈಭವಕ್ಕೆ ತನ್ನದೇ ಆದ
ಕೊಡುಗೆಯನ್ನು ನೀಡುತ್ತಾ ಬಂದಿದೆ. ಕನ್ನಡದ ರಕ್ಷಣೆಗೆ
ತನ್ನದೇ ರೀತಿಯಲ್ಲಿ ಕಾಳಜಿಯನ್ನು ತೋರುತ್ತಾ ಪಾಶ್ಚಾತ್ಯ
ಸಂಸ್ಕೃತಿಗೆ ಮಾರು ಹೋಗುತ್ತಿರುವ ಕನ್ನಡಿಗರಿಗೆ ನಮ್ಮ
ಸಂಸ್ಕೃತಿ, ಕಲೆಯ ಪರಿಚಯ ಮಾಡಿಸುವ ಕಾರ್ಯವನ್ನು
ಮಾಡುತ್ತಿದೆ.
ಕನ್ನಡದ ಅರ್ಥಪೂರ್ಣ ಚಿತ್ರಗಳನ್ನು ಬೆಂಬಲಿಸುವ ನಿಟ್ಟಿನಲ್ಲಿ ಈ ಕವಿ
ಸಂಸ್ಥೆಯು ಕಳೆದ ವರ್ಷದಿಂದ ಪ್ರಾರಂಭಿಸಿದ `ಚಲನಚಿತ್ರ
ಪ್ರದರ್ಶನ'ಕ್ಕೆ ಸಹೃದಯ ಕನ್ನಡಿಗರಿಂದ ಸಹಕಾರ
ದೊರೆತ್ತಿತ್ತು. ರಾಷ್ಟ್ರಪ್ರಶಸ್ತಿ ವಿಜೇತ ಪಿ. ಶೇಷಾದ್ರಿ ನಿರ್ದೇಶನದ
`ಬೇರು' ಚಿತ್ರದ ಪ್ರದರ್ಶನದೊಂದಿಗೆ ಪ್ರಾರಂಭವಾಗಿ ನಂತರ
`ಸ್ಟಂಬಲ್', `ಹಸೀನಾ' ಮುಂತಾದ ಸದಭಿರುಚಿಯ ಚಿತ್ರಗಳನ್ನು
ಪ್ರದರ್ಶಿಸಲಾಯಿತು.
ಅಕ್ಟೋಬರ್ ೧೫ ಭಾನುವಾರದಂದು ಬಿ.ಎಸ್. ಲಿಂಗದೇವರು ನಿದೆ ಶನದ
`ಮೌನಿ' ಚಲನಚಿತ್ರವನ್ನು ಮಲ್ಲೇಶ್ವರದಲ್ಲಿರುವ ಶ್ರೀಗಂಧ
ಪ್ರಿವ್ಯೂ ಚಿತ್ರಮಂದಿರದಲ್ಲಿ ಪ್ರದರ್ಶಿಸಲಿದ್ದಾರೆ. `ಮೌನಿ' ಚಿತ್ರದ
ಅಭಿನಯಕ್ಕಾಗಿ ಹಿರಿಯ ನಟ ದತ್ತಾತ್ರೇಯ ಅವರು ರಾಷ್ಟ್ರ
ಪ್ರಶಸ್ತಿಯನ್ನು ಗಳಿಸಿದ್ದಾರೆ. ಚಿತ್ರ ಪ್ರದರ್ಶನದ ನಂತರ ಸಂವಾದ
ಕಾರ್ಯಕ್ರಮವಿರುತ್ತದೆ. ಸಂವಾದದಲ್ಲಿ ನಟ ದತ್ತಾತ್ರೇಯ ಹಾಗೂ
ನಿರ್ದೇಶಕ ಲಿಂಗದೇವರು ಭಾಗವಹಿಸಲಿದ್ದಾರೆ.
ಪ್ರದರ್ಶನ ನಡೆಯುವ ಸ್ಥಳ:
ಶ್ರೀಗಂಧ ಪ್ರಿವ್ಯೂ ಚಿತ್ರಮಂದಿರ
ಲಾವಣ್ಯ ಟವರ್, ೪ನೇ ಮುಖ್ಯರಸ್ತೆ,
೧೮ ನೇ ಅಡ್ಡರಸ್ತೆ, ಬಿಡಬ್ಲ್ಯುಎಸ್‌ಎಸ್‌ಬಿ ಸರ್ವೀಸ್ ರಸ್ತೆ.
ಮಲ್ಲೇಶ್ವರ, ಬೆಂಗಳೂರು-೫೫
ಹೆಚ್ಚಿನ ವಿವರಗಳಿಗಾಗಿ ಸಂಪರ್ಕಿಸಿ:
9341886468,
manushah_19@yahoo.com,
ekavigowda@yahoo.com
ಇನ್ನಷ್ಟು
ಅ. ೧೨ರಂದು ದಕ್ಷಿಣ ಏಷ್ಯಾ ಪತ್ರಿಕಾ ಕಾರ್ಯಾಗಾರ
ಕಿರಣ್ ದೇಸಾಯಿಗೆ ಬೂಕರ್ ಪ್ರಶಸ್ತಿ
ಮರುಜೀವ ಪಡೆಯುತ್ತಿರುವ ರಕ್ಷಣಾ ಹಗರಣ
೧೩ ಕೋಟಿ ಮಕ್ಕಳ
ಭವಿಷ್ಯ ಕತ್ತಲೆಯಲ್ಲಿ
ಬಿಸ್ಮಿಲ್ಲಾ ಖಾನ್‌ರವರ ಕೊನೆಯ ದಿನಗಳ ಕಣ್ಣೀರ ಕಥೆ
ಸಂಸ್ಕೃತಿ ಇಲಾಖೆಯಿಂದ
`ಪ್ರತಿಭಾನ್ವೇಷಣೆ'
ಉ.ಕೋರಿಯಾದ ಚೊಚ್ಚಲ ಪರಮಾಣು ಬಾಂಬ್ ಪರೀಕ್ಷೆ
ಕಗ್ಗಲಿಪುರದಲ್ಲಿ ನಟ ಟೆನ್ನಿಸ್‌ಕೃಷ್ಣ ಮೇಲೆ ಹಲ್ಲೆ
ಬಿಎಸ್‌ಪಿಯ ನಾಯಕ ಕಾಂಶಿ ರಾಮ್ ನಿಧನ
ಆಲಮಟ್ಟಿಯಲ್ಲಿ ವಿಮಾನ ನಿಲ್ದಾಣ: ಸರ್ಕಾರದ ಚಿಂತನೆ
|