|
ಫುಟ್ಬಾಲ್ ತರಬೇತುದಾರನಾಗಿ ಮನೋಜ್ ಬಾಜ್‌ಪೈ!!
ಮುಂಬಯಿ: ಭಾರತೀಯ ಫುಟ್ಬಾಲ್ ಆಟಗಾರರ ಖರಾಬ್
ಆಟವನ್ನು ನೋಡಿ ಮನೋಜ್ ತಾವೇ ಕೋಚ್ ನೀಡಲು ಮುಂದಾದರು
ಎಂದುಕೊಂಡಿರೊ? ಹಾಗೇನಿಲ್ಲ. ಪದ್ಮಿನಿ ಕಪಿಲಾ ಅವರ `೯೦ ಮಿನಿಟ್ಸ್'
ಎನ್ನುವ ಸಿನಿಮಾದಲ್ಲಿ ಮನೋಜ್ ಬಾಜ್‌ಪೈ ಫುಟ್ಬಾಲ್ ಕೋಚ್ ಆಗಿ
ನಟಿಸಲಿದ್ದಾರೆ.
`ಪುಣ್ಯಕ್ಕೆ ನನಗೆ ಬೇರೆ ನಟರಂತೆ ಓಡುವ ಆಡುವ ಕೆಲಸವಿರಲಿಲ್ಲ.
ಆದರೆ ಒಬ್ಬ ಕೋಚ್ ಆಗಿ ಅವನ ಟೀಮ್ ಸೋಲಿನಿಂದ ದುಃಖಿತವಾದಾಗ
ಕೂಗಿ-ಕೂಗಿ ಅವರಲ್ಲಿ ಪುನಃ ಹುಮ್ಮಸ್ಸನ್ನು ತುಂಬುವ ನಟನೆ
ಇದಕ್ಕಿಂತ ಸುಲಭವಾಗಿರಲಿಲ್ಲ' ಎಂದು ಚಿತ್ರೀಕರಣದಲ್ಲಿ ತಮಗಾದ
ಅನುಭವವನ್ನು ಹೇಳುತ್ತಾರೆ.
ವಿಶಾಲವಾದ ಸ್ಟೇಡಿಯಂನಲ್ಲಿ ತುಂಬಿ ತುಳುಕುತ್ತಿರುವ ಪ್ರೇಕ್ಷಕರ
ನಡುವೆ ಫುಟ್ಬಾಲ್ ಆಡುವ ಕೊನೆಯ ಹಂತದ ಚಿತ್ರೀಕರಣ
ಮಾಡಿಕೊಳ್ಳಲು ತಂಡ ಸದ್ಯದಲ್ಲೇ ಮಲೇಶಿಯಾ ತೆರಳಲಿದೆ.
ಇನ್ನಷ್ಟು
ಭಾರತದಲ್ಲಿ ತಲೆ ಎತ್ತಲಿರುವ ಪಾಕ್ ಬ್ಯಾಂಕ್
ಉತ್ತಮ ಕೃಷಿಕ ಪ್ರಶಸ್ತಿಗೆ ಅರ್ಜಿ ಅಹ್ವಾನ
ವೈಮಾಕ್ಸ್ ಆಗಲಿದೆ ಬೆಂಗಳೂರು:ಐಟಿ ಕಾರ್ಯದರ್ಶಿ
ಯೂಟೂಬ್ ವೆಬ್‌ಸೈಟ್ ಖರೀದಿಸಿದ ಗೂಗಲ್
ಬಿಎಸ್‌ಎನ್‌ಎಲ್‌ನ ಎಸ್‌ಟಿಡಿ ದರದಲ್ಲಿ ಕಡಿತ
ಕ್ಷಮಾದಾನ ನ್ಯಾಯಾಂಗ ಪರಿಶೀಲನೆಗೆ ಅರ್ಹ
ಕಟ್ಟಡಕ್ಕೆ ಅಪ್ಪಳಿಸಿದ ವಿಮಾನ: ಬೆಚ್ಚಿದ ನ್ಯೂಯಾರ್ಕ್
ದೇಶ ವಿರೋಧಿ ಭಾವನೆ : ಗೂಗಲ್‌ಗೆ ನೋಟೀಸ್
ಆರ್‌ವಿಸಿಇ ವಿದ್ಯಾರ್ಥಿಗಳಿಂದ ವಿಶೇಷ ವಾಹನ ತಯಾರಿ
ಯುನೆಸ್ಕೊ ತಂಡದಿಂದ ಬೇಲೂರು ಹಳೇಬೀಡು ವೀಕ್ಷಣೆ
ಕೆಪಿಎಸ್‌ಸಿ ಇನ್ನು ಯುಪಿಎಸ್‌ಸಿ ಮಾದರಿಯಲ್ಲಿ
|