ಮಾಳವಿಕಾಗೆ ಹೊಗಳಿಕೆ ಬೇಕು, ತೆಗಳಿಕೆ ?
ಇದ್ದದನ್ನು
ಇದ್ದಂಗೇ ಹೇಳಿದ್ರೆ ಎದ್ದು ಬಂದು ಎದೆಗೇ ಒದ್ರಂತೆ! ವಿಮರ್ಶೆ ಯಾರಿಗೆ ತಾನೆ
ಇಷ್ಟವಾಗುತ್ತೆ ಹೇಳಿ? ಎಲ್ರಿಗೂ ಬೇಕಾಗಿರೋದು `ಭಲರೇ ಶಹಭಾಸ್'.

ತೆರೆಮೇಲೆ ಪ್ರಬುದ್ಧವಾಗಿ
ಕಾಣಿಸಿಕೊಳ್ಳೋ ಕಲಾವಿದರು ಪ್ರಶಂಸೆ-ಟೀಕೆಗಳನ್ನು ಎದುರಿಸುವಾಗಲೂ ಅದ್ಯಾಕೆ ಪ್ರಬುದ್ಧವಾಗಿ
ವರ್ತಿಸೋದಿಲ್ಲ ಎನ್ನುವ ಪ್ರಶ್ನೆ ಹುಟ್ಟಿಕೊಂಡದ್ದು ಕಳೆದ ಶನಿವಾರ `ಸೈನೈಡ್' ನಿರ್ದೇಶಕ
ರಮೇಶ್ ಹಾಗೂ ನಟಿ ಮಾಳವಿಕಾ ಜತೆ `ಈ ಟಿವಿ' ಏರ್ಪಡಿಸಿದ್ದ ನೇರ ಫೋನ್-ಇನ್ ಸಂವಾದದ
ಸಂದರ್ಭದಲ್ಲಿ.
ತಮ್ಮ ಪಾತ್ರ
ನಿರ್ವಹಣೆಯ ಬಗ್ಗೆ ಪ್ರಶಂಸೆಯ ಮಾತುಗಳು ಬಂದಾಗ ಅಷ್ಟಗಲ ಮುಖ ಮಾಡಿ ನಗುತ್ತಿದ್ದ
ಮಾಳವಿಕಾ, ಅದೇ ಸ್ವಲ್ಪಹೊತ್ತಿನ ಬಳಿಕ ಪ್ರೇಕ್ಷಕರು ಆಕೆಯ ನೆಗೆಟಿವ್ ಪಾಯಿಂಟುಗಳನ್ನು
ಎತ್ತಿತೋರಿಸಹತ್ತಿದಾಗ ಮಾತ್ರ ಕೆಂಡಾಮಂಡಲವಾದರು.
`ಮಾಳವಿಕಾ ನಟನೆಯೇನೋ
ಓಕೆ. ಆದರೆ ಅವರಿನ್ನೂ `ಮುಕ್ತಾ'ದ ಹ್ಯಾಂಗೋವರ್‌ನಿಂದ ಹೊರಬಂದಿಲ್ಲ. ಸೈನೈಡ್‌ನಲ್ಲೂ
ಅದೇಕೋ ಮಾಧವಿ ಪಟೇಲೇ ಕಾಣಿಸ್ತಿದ್ಳು' ಅಂತ ಪ್ರೇಕ್ಷಕರೊಬ್ಬರು ಬೊಟ್ಟು ಮಾಡುತ್ತಿದ್ದರೆ,
ಮಾಳವಿಕಾ ಮೇಡಂ ಫುಲ್ ಅಪ್ಸೆಟ್! `ನೀವು ಆ ಥರಾ ಹೇಳೋದು ಸರಿಯಲ್ಲ. ನಾನು
ಅಪಾರ ಶ್ರಮವಹಿಸಿ ಆ ಪಾತ್ರ ಮಾಡಿದ್ದೀನಿ' ಎಂಬಿತ್ಯಾದಿ ಸ್ಪಷ್ಟೀಕರಣಗಳಿಗೆ ಜೋತು
ಬೀಳತೊಡಗಿದರು ಮಾಳವಿಕಾ.
`ಮಾಳವಿಕಾ ನಟನೆ
ಬಗ್ಗೆ ನೋ ಕಾಮೆಂಟ್ಸ್. ಆದ್ರೆ ಆ ಪಾತ್ರಕ್ಕೆ ಅವ್ರು ಏನೇನೂ ಸೂಟ್ ಆಗ್ತಿರಲಿಲ್ಲ' ಅಂತ ಇನ್ನೊಬ್ಬರು
ಹೇಳುತ್ತಿರಬೇಕಾದರೆ ಮೇಡಂ ಪೆಚ್ಚು ಮೋರೆ ಹಾಕಿ ಕುಳಿತಿದ್ದರು.
`ಮುಕ್ತಾ'
ಧಾರಾವಾಹಿಯಲ್ಲಿ ಮಾಧವಿ ಪಟೇಲ್ ಪಾತ್ರ ಎಲ್ಲರಿಗೂ ಅಚ್ಚುಮೆಚ್ಚಿನದೆನಿಸಿದ್ದು ನಿಜ. ಆ
ಬಳಿಕ ಯಾವುದೇ ವೇದಿಕೆಯಲ್ಲಿ ಕಾಣಿಸಿಕೊಳ್ಳುವಾಗಲೂ ಮಾಳವಿಕಾ ಅದ್ಯಾಕೋ
ಅದರದ್ದೇ ಪ್ರತಿಬಿಂಬದಂತೆ ಭಾಸವಾಗುತ್ತಿದ್ದುದೂ ನಿಜ. ಅದನ್ನ ನೀವು ತನ್ಮಯತೆ ಎನ್ನುತ್ತೀರಾದರೆ,
ಅದು ಮಾಳವಿಕಾ ತಪ್ಪಲ್ಲ. ಆದರೆ, ಆರೋಗ್ಯಕರ ಟೀಕೆಗಳು ಬಂದಾಗ ಸ್ವೀಕರಿಸುವ ಸೌಜನ್ಯವಾದರೂ
ಇರಬಾರದೇ? ಅದು ಮುಕ್ತಾದ ಮಾಧವಿ ಪಟೇಲ್‌ಗೆ ಇಲ್ಲಾ ಎಂಬ ಕಾರಣಕ್ಕೇ
ಮಾಳವಿಕಾಗೂ ಇಲ್ವ ?