|
|
|
Monday, 04 September 2006 04:46 PM |
|
ವರಲಕ್ಷ್ಮಿ ಕೃಪೆಯೊಂದಿಗೆ
೫ ಚಿತ್ರಗಳು ಸೆಟ್‌ಗೆ
ಬೆಂಗಳೂರು: ವರಮಹಾಲಕ್ಷ್ಮಿ
ಹಬ್ಬದ ದಿನ ಕನ್ನಡ ಚಿತ್ರೋದ್ಯಮಕ್ಕೆ ಶುಭ ಸೂಚಕ ಸಂದರ್ಭ ಎಂಬ ನಂಬಿಕೆಯಿದ್ದು,
ಐದು ಚಿತ್ರಗಳು ಸೆಟ್ ಏರಿರುವುದು ಶುಕ್ರವಾರದ ವಿಶೇಷವಾಗಿದೆ.

ಶ್ರೀರಾಮಾಂಜನೇಯ
ದೇವಸ್ಥಾನದಲ್ಲಿ `ಈ ರಾಜೀವ್‌ಗಾಂಧಿ ಅಲ್ಲ ಅಶ್ವಿನಿ
ಸ್ಟುಡಿಯೋದಲ್ಲಿ `ಪ್ರೀತಿ ಏಕೆ ಭೂಮಿ ಮೇಲಿದೆ,
ರಾಕ್‌ಲೈನ್ ಸ್ಟುಡಿಯೋದಲ್ಲಿ `ತಾಯಿಯ ಮಡಿಲು,
ಕಂಠೀರವ ಸ್ಟುಡಿಯೋದಲ್ಲಿ `ಪೋಲೀಸ್ ಸ್ಟೋರಿ ಭಾಗ-೨,
ವಹೀದಾ ಎಸ್ಟೇಟ್‌ನಲ್ಲಿ `ಪರೋಡಿ- ಹೀಗೆ ಐದು
ಚಿತ್ರಗಳು ಶುಕ್ರವಾರವೇ ಬಿರುಸಿನಿಂದ ಅದ್ದೂರಿಯಾಗಿ ಸೆಟ್ ಏರಿದವು.
`ಪ್ರೀತಿ ಏಕೆ ಭೂಮಿ ಮೇಲಿದೆ
ಚಿತ್ರದ ಮೂಹೂರ್ತ ಸಮಾರಂಭದಲ್ಲಿ ಸಿದ್ಧಗಂಗಾ ಮಠದ ಶಿವಕುಮಾರ ಸ್ವಾಮೀಜಿಯವರ
ಆಶೀರ್ವಾದವನ್ನು ನಟ-ನಿರ್ದೇಶಕ ಪ್ರೇಮ್, ನಟಿ ರಕ್ಷಿತಾ ಪಡೆದಿದ್ದು ವಿಶೇಷಗಳಲ್ಲಿ
ಒಂದಾಗಿತ್ತು. |
|
Print
this page |
ಮುಖಪುಟ |
|
|
|