|
ರಾಮ್‌ಗೋಪಾಲ್ ವರ್ಮಾ ಖರ್ಚಿನಲ್ಲಿ ಹಿಂದಿ `ಸೈನೈಡ್
ಎನ್‌ಎಫ್‌ಡಿಸಿಗೂ ಸೈನೈಡ್‌ನಲ್ಲಿ ಆಸಕ್ತಿ
`ಸೈನೈಡ್
ಚಿತ್ರದ ಮೂಲಕ ನಿರ್ದೇಶಕ ಎ.ಆರ್. ರಮೇಶ್ ಏಕ್‌ದಂ ರಾಷ್ಟ್ರೀಯ,
ಅಂತಾರಾಷ್ಟ್ರೀಯ ಚಿತ್ರೋದ್ಯಮಿಗಳ ಗಮನ ಸೆಳೆದಿದ್ದಾರೆ.
ಈ
ಚಿತ್ರವನ್ನು ವೀಕ್ಷಿಸಿದ ಹಿಂದಿ ಚಿತ್ರರಂಗದ ದಿಗ್ಗಜರು ಮೂಗಿನ ಮೇಲೆ
ಬೆರಳಿಟ್ಟುಕೊಂಡರಂತೆ. ಅಂಥವರಲ್ಲಿ ಘಟಾನುಘಟಿ ಎಂದರೆ ರಾಮ್
ಗೋಪಾಲ್ ವರ್ಮ.
ವರ್ಮ
ಚಿತ್ರಗಳೆಂದರೆ ಟೆಕ್ನಿಕಲಿ ಸೌಂಡ್. ಅಂಥವರೇ ಅಚ್ಚರಿಪಟ್ಟರೆಂದರೆ....
ಅದೆಲ್ಲ ಸರಿ. ಅವರ ಅಚ್ಚರಿ ಅಲ್ಲಿಗೇ ನಿಂತಿಲ್ಲ. ರಮೇಶ್‌ರನ್ನು ಸೀದಾ ಮುಂಬಯಿಗೆ
ಕರೆಸಿದ್ದಾರೆ. `ಸೈನೈಡ್
ಚಿತ್ರವನ್ನು ತಮ್ಮ ಕಂಪನಿಯ ನಿರ್ಮಾಣದಲ್ಲಿ ನಿರ್ದೇಶಿಸಿ ಎಂದು
ರಮೇಶ್‌ರನ್ನೇ ಕೇಳಿಕೊಂಡಿದ್ದಾರೆ. ಅದೂ ಕಲಾವಿದರು ಯಾರ್‍ಯಾರು
ಗೊತ್ತೇ? ಅಮಿತಾಭ್ ಬಚ್ಚನ್, ನಾಸಿರುದ್ದೀನ್ ಶಾ, ಪರೇಶ್ ರಾವಲ್,
ಟಬು.... ಅಬ್ಬಬ್ಬ!
ಇದಲ್ಲದೇ ಸೈನೈಡ್ ಚಿತ್ರದ ಅಂತಾರಾಷ್ಟ್ರೀಯ ಹಕ್ಕುಗಳನ್ನು ಖರೀದಿಸಲು
ಎನ್‌ಎಫ್‌ಡಿಸಿ ಮುಂದೆ ಬಂದಿದೆಯಂತೆ.
ಸೈನೆಡ್
ಚಿತ್ರದ ತುಣುಕುಗಳು

|