ಬೆಂಗಳೂರು:
ಕನ್ನಡ ಹೋರಾಟಗಾರರಿಂದಾಗಿ ನಿಂತು ಹೋಗಿದ್ದ ಡಬ್ಬಿಂಗ್ ಸಂಸ್ಕೃತಿ ಮತ್ತೆ ಕನ್ನಡಕ್ಕೆ
ಕಾಲಿಟ್ಟಿದೆ. ತೆಲುಗು ಚಿತ್ರ `ನಾಯುಡಮ್ಮ' ಚಿತ್ರದ ಕನ್ನಡ ಡಬ್ಬಿಂಗ್ ಆವೃತ್ತಿ `ಗೌಡ್ತಿ'
ಆಗಲೇ ಜಾಹಿರಾತಿಗೆ ಜಾಗ ಗಿಟ್ಟಿಸಿಕೊಂಡಿದೆ.
ಕಳೆದ ೩೬
ವರ್ಷಗಳಿಂದ ಕನ್ನಡ ಕಲಾವಿದರು, ಕನ್ನಡ ಚಲನಚಿತ್ರ ವಾಣಿಜ್ಯ ಮಂಡಳಿ ಹಾಗೂ ಕನ್ನಡಪರ
ಸಂಘಟನೆಗಳ ಹೋರಾಟದಿಂದ ಡಬ್ಬಿಂಗ್ ಸಂಸ್ಕೃತಿಗೆ ತೆರೆ ಬಿದ್ದಿತ್ತು.

ವಿಜಯಶಾಂತಿ ಅಭಿನಯದ
ತೆಲುಗಿನ `ನಾಯುಡಮ್ಮ' ಚಿತ್ರಕ್ಕೆ ಕನ್ನಡ ಮಾತುಗಳನ್ನು ಜೋಡಿಸಿ, ಗೌಡ್ತಿ ಹೆಸರಿನಲ್ಲಿ
ಬಿಡುಗಡೆ ಮಾಡಲು ಸಕಲ ಸಿದ್ಧತೆಗಳು ನಡೆದಿವೆ.
ಚಿತ್ರಕ್ಕೆ ಶೇ. ೧೦೦ ಮನರಂಜನಾ
ತೆರಿಗೆ ವಿನಾಯಿತಿ ಸಹ ಕೇಳಲಾಗಿತ್ತು. ಆದರೆ ಚಿತ್ರ ತೆಲುಗು ಚಿತ್ರದ ಮಾತಿನ ಮರುಜೋಡಣೆ
ಎಂದು ತಿಳಿದತಕ್ಷಣ ಸರ್ಕಾರ ಸವಲತುಗಳನ್ನು ನಿರಾಕರಿಸಿತ್ತು.
ಖ್ಯಾತನಾಮರ
ಆಕ್ರೋಶ:
ನಾಯುಡಮ್ಮ
ಚಿತ್ರದ ಸುದ್ದಿ ಹರಡುತ್ತಿದಂತೆಯೇ ಕನ್ನಡ ಚಿತ್ರರಂಗದ ಖ್ಯಾತನಾಮರು
ಕಿಡಿಕಾರಲಾರಂಭಿಸಿದ್ದಾರೆ. ನಿಯಮವನ್ನು ಮೀರಿ ಯಾವುದೇ ಕಾರಣಕ್ಕೂ `ಗೌಡ್ತಿ