Fonts Problem?

For Unicode version click here

For ANSI version click here

Downloads

Wallpapers

Vikrantakarnataka Weekly

 

 

ಮುಖ ಪುಟ

ಸುದ್ದಿ-ಸದ್ದು

ಎನ್ನಾರೈ

ಸಾಹಿತ್ಯ-ಸಂದರ್ಭ

ಚಿತ್ರ ವಿಚಿತ್ರ

ಚಿತ್ರ ಶಾಲೆ

ಒಕ್ಕಲುತನ

ವೆಬ್ ಲಿಂಕ್ಸ್

ಪಾಕ ಶಾಲೆ

ಆಟ ಬೊಂಬಾಟ

ನಗೆ ಬುಗ್ಗೆ

ನಿಮ್ಮ ಓಲೆ

Google    

ವೆಬ್

ವಿಕ್ರಾಂತ ಕರ್ನಾಟಕ

Thursday, 19 October 2006 01:39 PM

ಗಾಂಧಿನಗರದಲ್ಲಿ `ಕನ್ನಡ' ನಿರ್ಮಾಪಕರ ಹಣಾಹಣಿ

 

ವಿಚಿತ್ರ ಆದರೂ ನಿಜ. ನಿರ್ಮಾಪಕರು ಇನ್ನುಮುಂದೆ ಅನಿರ್ಧಿಷ್ಟ ಕಾಲ ಚಿತ್ರೋದ್ಯಮವನ್ನು ನಿಲ್ಲಿಸುವ ನಿರ್ಧಾರ ತೆಗೆದುಕೊಂಡ ನಂತರ ಹೊಸ ಚಿತ್ರಗಳಾವೂ ಸೆಟ್ಟೇರಲಿಲ್ಲ ಎಂಬುದು ಒಂದು ಸಂಗತಿ. ಆದರೆ ಅದೇ ಸಮಯಕ್ಕೆ ಬೇರೆ ಯಾವ ನಿರ್ಮಾಪಕರೂ ಚಿತ್ರ ನಿರ್ಮಾಣದ ವಿಚಾರದಲ್ಲಿ ನಿರ್ಮಾಪಕರು ಹಾಕಿದ ಬೇಲಿ ಹಾರುವುದಿಲ್ಲ ಎನ್ನುವುದೂ ಅಷ್ಟೇ ಸುಳ್ಳು... ಯಾಕೆಂದರೆ ಈಗಾಗಲೇ ಹಲವು ನಿರ್ಮಾಪಕರು ತಾವು ಹೊಸಚಿತ್ರ ಆರಂಭಿಸುವ ಬಗ್ಗೆ ಮಾತಾನಾಡುತ್ತಿದ್ದಾರೆ. ಅದೂ ಅಲ್ಲದೇ ನಿರ್ಮಾಪಕರ ಸಂಘದಲ್ಲೇ ಇರುವ ಭಾರೀ ಅಪಸ್ವರವೂ ಈಗ ಗಾಂಧೀನಗರದಾಚೆಗೆ ಪ್ರತಿಧ್ವನಿಸತೊಡಗಿದೆ. ಸದ್ಯದಲ್ಲೇ ಹಲವು ಚಿತ್ರಗಳು ಆರಂಭವಾದರೂ ಅಚ್ಚರಿಯೇನಿಲ್ಲ.
 

`ನಾನಂತೂ ಚಿತ್ರ ಆರಂಭಿಸುವವನಿದ್ದೇನೆ. ಸ್ಕ್ರಿಪ್ಟ್ ತಯಾರಿ ನಡೆಯುತ್ತಿದೆ. ಅದು ಮುಗಿದ ನಂತರ ನಮ್ಮ ಸಿನಿಮಾ ಶುರುವಾಗುತ್ತದೆ' ಎಂದವರು ಕಿರುತೆರೆ ಹಾಗೂ ಹಿರಿತೆರೆಯ ನಿರ್ದೇಶಕ ಬಿ.ಎಸ್. ಲಿಂಗದೇವರು. ಅವರು ಹೇಳುವ ಕಾರಣವೂ ಸಕಾರಣವಾಗೇ ಇದೆ. `ಮೌನಿ' ಚಿತ್ರ ನಿರ್ಮಿಸಿದಾಗ ಅದರ ಬಿಡುಗಡೆಗಾಗಿ ಚೇಂಬರ್ ಮೊದಲುಗೊಂಡು ಎಲ್ಲ ಸಂಸ್ಥೆಗಳಲ್ಲೂ ಕೇಳಿದೆ, ಆದರೆ ಯಾರೂ ಸಹಾಯ ಮಾಡಲಿಲ್ಲ. ಅಷ್ಟು ಮಾತ್ರವಲ್ಲ, ಇದಕ್ಕೂ ನಮಗೂ ಸಂಬಂಧ ಇಲ್ಲ ಎಂದು ಚೇಂಬರ್ ಪತ್ರವನ್ನೇ ಕೊಟ್ಟಿದೆ. ಹೀಗಾಗಿ ಚಿತ್ರಕ್ಕೆ ಸಂಬಂಧಿಸಿದ್ದರೆ ನಮ್ಮನ್ನು ಇವರು ಕೇಳುವ ಹಕ್ಕೂ ಇಲ್ಲ ಅಲ್ಲವೇ?' ಎಂದರು ಲಿಂಗದೇವರು.
 

ಇವತ್ತು ಚೇಂಬರ್ ಎನ್ನುವುದು ನಾಮಕಾವಾಸ್ತೆ. ಯಾವುದೇ ಸಮಸ್ಯೆಗೂ ಓಗೊಡದ ಸಂಸ್ಥೆಯಾಗಿ ಬೆಳೆಯುತ್ತಿದೆ. ಈ ಚೇಂಬರ್ ಯಾರ ರಕ್ಷಣೆ ಮಾಡುತ್ತಿದೆ ಎನ್ನುವುದೇ ಚಿತ್ರ ನಿರ್ಮಾಪಕರಿಗಾಗಲಿ, ಕನ್ನಡ ಚಿತ್ರರಂಗಕ್ಕೆ ಸಂಬಂಧಿಸಿದವರಿಗಾಗಲೀ ತಿಳಿದಿಲ್ಲ. ಇದ್ದಕ್ಕಿದ್ದಂತೆ ಆಸ್ಕರ್‌ಗೆ ಚಿತ್ರ ಕಳಿಸುವ ಮಾತಾಡುತ್ತದೆ; ಹಾಗೆಯೇ ಯಾರಿಗೋ ಪದ್ಮಭೂಷಣ, ಪದ್ಮಶ್ರೀಗಾಗಿ ಶಿಫಾರಸು ಮಾಡುತ್ತದೆ; ಅದೇ ರೀತಿ ಯಾವುದೋ ಗೌಜು ನಡೆಸಲು ಕಾರಣ ಹುಡುಕಿ ಸಮಾರಂಭ ಮಾಡುತ್ತದೆ.
 

ಚೇಂಬರ್ ಇತಿಹಾಸ ಮತ್ತು ವರ್ತಮಾನ ಎರಡೂ ಇದೇ ಹೊರತು ಬೇರೇನಲ್ಲ. ಚಿತ್ರಮಂದಿರದಿಂದ ಸಮಸ್ಯೆ, ಚಿತ್ರರಂಗಕ್ಕೆ ಸಮಸ್ಯೆ ಯಾವುದಕ್ಕೂ ಚೇಂಬರ್ ಮಾತಾಡುವುದಿಲ್ಲ. ಈ ಹಿಂದೆ ಪಾರ್ವತಮ್ಮನವರು ಇದೇ ಚೇಂಬರ್ ಫಲಕವನ್ನು ಕಿತ್ತು ಹಾಕಿದ್ದು ನಿಮಗೆ ನೆನಪಿರಬಹುದು. ಅದು ಯಾವತ್ತೂ `ಕನ್ನಡ ಫಿಲಂ ಚೇಂಬರ್' ಆಗಲೇ ಇಲ್ಲ. ಕಡೆಯ ಪಕ್ಷ ಕನ್ನಡ ನಿರ್ಮಾಪಕರಾದರೂ ಕನ್ನಡ ಫಿಲಂ ಚೇಂಬರ್ ಕಟ್ಟುವ ಕೆಲಸ ಮಾಡಬಹುದಿತ್ತು. ಆದರೆ ನಮ್ಮ ನಿರ್ಮಾಪಕರಿಗೂ ತಾರೆಗಳ ರೇಟು ಕಡಿಮೆಯಾಗಬೇಕೇ ವಿನಹ ಕನ್ನಡ ಚಿತ್ರರಂಗದ ಭವಿಷ್ಯದ ಚಿಂತೆಯಲ್ಲ.
 

ಇಲ್ಲಿ ಇನ್ನೊಂದು ಪ್ರಶ್ನೆ' ಇದುವರೆಗೆ ರಿಮೇಕ್ ಬಗ್ಗೆ ಒಕ್ಕೊರಲಿನಿಂದ ಮಾತನಾಡುತ್ತ, `ರಿಮೇಕ್ ಬೇಕೇ ಬೇಕು' ಎಂದು ಹಪಹಪಿಸಿದವರು ಇದೇ ನಿರ್ಮಾಪಕರು. ಯಾರೇ ಮುಖ್ಯಮಂತ್ರಿ ಬರಲಿ, ಅವರ ಮುಂದೆ ನಿರ್ಮಾಪಕರ ಒಡ್ಡೋಲಗ ಹೋಗುತ್ತದೆ... ಒಂದಷ್ಟು ಸವಲತ್ತು ಕೇಳುತ್ತದೆ... ತಮಗೆ ತುಂಬಾ ಕಷ್ಟವಾಗಿದೆ ಎಂದು ಕಣ್ಣಿರು ಒರೆಸಿಕೊಳ್ಳುತ್ತದೆ. ಅಂತಿಮವಾಗಿ ರಿಮೇಕ್ ಚಿತ್ರಗಳಿಗೆ ಸಬ್ಸಿಡಿ, ತೆರಿಗೆ ವಿನಾಯ್ತಿ ಎರಡೂ ಕೊಡಿ ಎಂದು ಮನವಿ ಸಲ್ಲಿಸುತ್ತದೆ. ಇದು ಅನೂಚಾನವಾಗಿ ಬಂದಿರುವ ಪದ್ಧತಿ.

ಪ್ರತಿಸಾರಿಯೂ ಸರ್ಕಾರದ ಎದುರು ಸವಲತ್ತಿಗಾಗಿ ಕೈಯೊಡ್ಡುವ ಕೆಲಸ ಮಾಡುವ ನಿರ್ಮಾಪಕ ಗಣ ಇವತ್ತು ಐವತ್ತು ಚಿತ್ರಗಳಲ್ಲಿ ನಲವತ್ತೊಂಬತ್ತು ಫ್ಲಾಪ್ ಆಗಿ ಐವತ್ತೈದು ಕೋಟಿ ನಷ್ಟವಾಗಿದೆ ಎಂದು ಕಣ್ಣೀರು ಸುರಿಸಿದೆ.
 

ಈ ಐವತ್ತರಲ್ಲಿ ರಿಮೇಕ್ ಎಷ್ಟು ಎಂದು ನಿರ್ಮಾಪಕರು ಲೆಕ್ಕ ಹಾಕಿದ್ದಾರೆಯೆ? ರಿಮೇಕ್ ಚಿತ್ರವನ್ನು ಸ್ವಂತ ಚಿತ್ರವೆಂದು ಅಫಿಡೇವಿಟ್ ಕೊಡುವಷ್ಟು ಭಂಡತನ ಇದೇ ನಿರ್ಮಾಪಕರದ್ದು. ಡಬ್ ಆದ `ಗೌಡ್ತಿ' ಎಂಬ ಚಿತ್ರವನ್ನು ಒರಿಜಿನಲ್ ಎಂದು ಸರ್ಟಿಫೈ ಮಾಡುವ `ಅದ್ಭುತ' ಕೆಲಸವೂ ಇದೇ ನಿರ್ಮಾಪಕರದು. ಅಂದರೆ ಇಡೀ ರಾಜ್ಯಕ್ಕೆ, ಈ ರಾಜ್ಯದ ಸಂಸ್ಕೃತಿಗೆ, ಭಾಷೆಗೆ ಅವಮಾನ ಮಾಡುವ ಕಾಯಕ ಮಾಡುತ್ತಲೇ `ನಾನು ಸುಸ್ತಾಗಿದ್ದೇವೆ, ನಮಗೆ ಸಹಾಯ ಮಾಡಿ' ಎಂದು ರೋಧಿಸುವ ಕೆಲಸವನ್ನೂ ಇದೇ ನಿರ್ಮಾಪಕರು ಮಾಡುತ್ತಾರೆ. `ಚಿತ್ರೋದ್ಯಮ ಬಂದ್ ಮಾಡುತ್ತೇವೆ; ಹೊಸ ಚಿತ್ರ ಶುರು ಮಾಡಲ್ಲ' ಎಂದು ನಿರ್ಮಾಪಕರು ಹೇಳಿಕೆ ನೀಡಿದಾಗ ನಿಟ್ಟುಸಿರು ಬಿಟ್ಟವರು ನೋಡುಗರು. `ಕನಿಷ್ಟ ಒಂದು ವರ್ಷವಾದರೂ ಈ ಕೆಲಸ ಮಾಡಿ... ಗಾಂಧಿನಗರ ಉದ್ಧಾರವಾಗುತ್ತದೆ' ಎಂಬ ಮಾತುಗಳು ಗುಟ್ಟಾಗಿ ಕೇಳುತ್ತಿಲ್ಲ. ಗೋಡೆ ಬರಹದಂತೆ ಢಾಳಾಗಿ ಕಾಣುತ್ತಿದೆ.
 

ಒಂದು ನೆನಪಿರಲಿ, ಒಂದು ಅಮೃತಧಾರೆ, ಒಂದು ಮೈ ಆಟೋಗ್ರಾಫ್ - ಈ ಮೂರು ಚಿತ್ರಗಳು ಯಶಸ್ಸು ಕಂಡ ಚಿತ್ರಗಳು. ಮೈ ಆಟೋಗ್ರಾಫ್ ಬಿಟ್ಟರೆ ಉಳಿದೆರಡೂ ಒರಿಜಿನಲ್ ಚಿತ್ರಗಳು ಎಂಬುದೂ ನಿರ್ಮಾಪಕರಿಗೆ ಕಾಣುತ್ತಿಲ್ಲ. ಕಡೆಯಪಕ್ಷ ಚಿತ್ರರಂಗದ ಬಗ್ಗೆ ಚಿಂತಿಸುವ ಗುಣ ತುಸುವಾದರೂ ನಿರ್ಮಾಪಕರಿಗೆ ಬಂದಿದ್ದರೆ ಅವರ ಬಂದ್ ಬಗ್ಗೆ ಸಹಾನುಭೂತಿ ವ್ಯಕ್ತವಾಗುತ್ತಿತ್ತು. ಒಂದು ಪೈಸೆಯ ಕಾಳಜಿಯೂ ಇಲ್ಲದ ಇವರ ಗುಣವೇ ಇವರನ್ನು ಈಗ ಇಡೀ ಚಿತ್ರೋದ್ಯಮ ಗುಮಾನಿಯಿಂದ ನೋಡುವಂತೆ ಮಾಡಿದೆ.
 

ಮೊನ್ನೆ ರಾತ್ರಿ ರಾಘವೇಂದ್ರ ರಾಜ್‌ಕುಮಾರ್ ಒಂದು ಮಾತು ಹೇಳಿದರು: `ಚಿತ್ರರಂಗದಲ್ಲಿ ಈಗ ನಟರಾದವರು ನಿರ್ಮಾಪಕರೂ ಆಗಿದ್ದಾರೆ. ರವಿಚಂದ್ರನ್, ಶಿವರಾಜ್, ಪುನೀತ್, ಉಪೇಂದ್ರ, ಸುದೀಪ್ ಎಲ್ಲರೂ ನಿರ್ಮಾಪಕರಾಗಿ, ನಟರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಹಾಗಾಗಿ ನಟರ ಸಂಭಾವನೆಯಾಗಲಿ, ಇತರ ವಿಷಯವಾಗಲಿ ನಾವು ಒಟ್ಟಿಗೆ ಕೂತು ಚರ್ಚಿಸಿ ಬಗೆಹರಿಸಿಕೊಳ್ಳಬೇಕು. ಅದನ್ನು ಬಿಟ್ಟು ನಾವೇ ಜಗಳ ಆಡಿದರೆ ಯಾರಿಗೂ ಪ್ರಯೋಜನವಿಲ್ಲ. ರಾಘವೇಂದ್ರ ಹೇಳಿರುವುದು ನಿಜ. ಅದಕ್ಕೂ ಮುನ್ನವೇ ಪಾರ್ವತಮ್ಮ ರಾಜ್ ಕುಮಾರ್ `ಚಿತ್ರ ನಿರ್ಮಾಣವನ್ನು ನಿಲ್ಲಿಸುವ ಬಗ್ಗೆ ನನ್ನ ಬೆಂಬಲವಿಲ್ಲ' ಎಂದು ಸ್ಪಷ್ಟವಾಗಿ ಹೇಳಿದ್ದಾರೆ. ಸಂದೇಶ್ ನಾಗರಾಜ್ ನೇತೃತ್ವದಲ್ಲಿ ಈಗ ಗಟ್ಟಿಗಂಟಲಲ್ಲಿ ಕೂಗಾಡುತ್ತಿರುವವರು ಮುನಿರತ್ನಂ ಥರ ನಿರ್ಮಾಪಕರು ಮಾತ್ರ. ಬಹುಶಃ ಈ ಕೂಗನ್ನೇ ರಣ ಕಹಳೆ ಎಂದು ಕೊಂಡರೆ ಅದಕ್ಕಿಂತ ವಿಪರ್‍ಯಾಸ ಬೇರೇನಿಲ್ಲ.

 

ಇನ್ನಷ್ಟು

ಭಾರತದಲ್ಲಿ ತಲೆ ಎತ್ತಲಿರುವ ಪಾಕ್ ಬ್ಯಾಂಕ್

ಉತ್ತಮ ಕೃಷಿಕ ಪ್ರಶಸ್ತಿಗೆ ಅರ್ಜಿ ಅಹ್ವಾನ

ವೈಮಾಕ್ಸ್ ಆಗಲಿದೆ ಬೆಂಗಳೂರು:ಐಟಿ ಕಾರ್ಯದರ್ಶಿ

ಯೂಟೂಬ್ ವೆಬ್‌ಸೈಟ್ ಖರೀದಿಸಿದ ಗೂಗಲ್

ಬಿಎಸ್‌ಎನ್‌ಎಲ್‌ನ ಎಸ್‌ಟಿಡಿ ದರದಲ್ಲಿ ಕಡಿತ

ಕ್ಷಮಾದಾನ ನ್ಯಾಯಾಂಗ ಪರಿಶೀಲನೆಗೆ ಅರ್ಹ

ಕಟ್ಟಡಕ್ಕೆ ಅಪ್ಪಳಿಸಿದ ವಿಮಾನ: ಬೆಚ್ಚಿದ ನ್ಯೂಯಾರ್ಕ್

ದೇಶ ವಿರೋಧಿ ಭಾವನೆ : ಗೂಗಲ್‌ಗೆ ನೋಟೀಸ್

ಆರ್‌ವಿಸಿಇ ವಿದ್ಯಾರ್ಥಿಗಳಿಂದ ವಿಶೇಷ ವಾಹನ ತಯಾರಿ

ಯುನೆಸ್ಕೊ ತಂಡದಿಂದ ಬೇಲೂರು ಹಳೇಬೀಡು ವೀಕ್ಷಣೆ

ಕೆಪಿಎಸ್‌ಸಿ ಇನ್ನು ಯುಪಿಎಸ್‌ಸಿ ಮಾದರಿಯಲ್ಲಿ

Print This PagePrint this page

Email this Page

ಮುಖಪುಟ

Copyright Vikranta Prakashana 2006. All rights reserved.
Site best viewed in 800x600 resolution.

Email : feedback@vikrantakarnataka.com