Fonts Problem?

For Unicode version click here

For ANSI version click here

Downloads

Wallpapers

Vikrantakarnataka Weekly

 

 

ಮುಖ ಪುಟ

ಸುದ್ದಿ-ಸದ್ದು

ಎನ್ನಾರೈ

ಸಾಹಿತ್ಯ-ಸಂದರ್ಭ

ಚಿತ್ರ ವಿಚಿತ್ರ

ಚಿತ್ರ ಶಾಲೆ

ಒಕ್ಕಲುತನ

ವೆಬ್ ಲಿಂಕ್ಸ್

ಪಾಕ ಶಾಲೆ

ಆಟ ಬೊಂಬಾಟ

ನಗೆ ಬುಗ್ಗೆ

ನಿಮ್ಮ ಓಲೆ

Google    

ವೆಬ್

ವಿಕ್ರಾಂತ ಕರ್ನಾಟಕ

Friday, 22 September 2006 04:13 PM

ಚಲನಚಿತ್ರ ಪ್ರಶಸ್ತಿ: ಭುಗಿಲೇಳುತ್ತಿರುವ ಅಸಮಾಧಾನ

ಬೆಂಗಳೂರು: ಜಗ್ಗೇಶ್ ತಮಗೆ ನೀಡುತ್ತಿರುವ ಉತ್ತಮ ಪೋಷಕ ನಟ ಪ್ರಶಸ್ತಿಯನ್ನು ತಿರಸ್ಕರಿಸಿದ ಬೆನ್ನ ಹಿಂದೆಯೇ ಈ ವರ್ಷದ ರಾಜ್ಯ ಚಲನಚಿತ್ರ ಪ್ರಶಸ್ತಿಯ ಬಗ್ಗೆ ಒಂದೊಂದೇ ಆರೋಪಗಳು ಕೇಳಿಬರುತ್ತಿವೆ.

ಅತ್ಯುತ್ತಮ ಚಿತ್ರ ಪ್ರಶಸ್ತಿ ಪಡೆದಿರುವ `ನಾಯಿ ನೆರಳು' ಹಾಗೂ ಕಿಶನ್‌ಗೆ ಬಾಲನಟ ಪ್ರಶಸ್ತಿ ತಂದುಕೊಟ್ಟಿರುವ `ಕೇರ್ ಆಫ್ ಫುಟ್ ಪಾತ್' ಇನ್ನು ಕೆಲವು ಚಿತ್ರಗಳು ಬಿಡುಗಡೆಯನ್ನೇ ಹೊಂದಿಲ್ಲ. ಅವು ಹೇಗೆ ಅತ್ಯುತ್ತಮ ಚಿತ್ರಗಳಾಗುವವು?

ಅತ್ಯುತ್ತಮ ಹಾಸ್ಯನಟ, ಖಳನಾಯಕ, ಕೋರಿಯೊಗ್ರಾಫರ್ ಪ್ರಶಸ್ತಿ ಈ ವರ್ಷ ನೀಡಲಾಗಿಲ್ಲ.

ಆಯ್ಕೆ ಸಮಿತಿಯು ಅಷ್ಟೂ ಚಿತ್ರವನ್ನು ವೀಕ್ಷಿಸಿ ಪ್ರಶಸ್ತಿಯನ್ನು ನೀಡಿಲ್ಲ. ಏಕೆಂದರೆ ಆಯ್ಕೆ ಸಮಿತಿ ೯ ದಿನಗಳಲ್ಲಿ ೩೫ ಚಿತ್ರಗಳನ್ನು ನೋಡಬೇಕಿತ್ತು. ದಿನಕ್ಕೆ ಮೂರು ಚಿತ್ರಗಳನ್ನು ನೋಡಿದರೂ ೨೭ ಚಿತ್ರಗಳನ್ನು ಮಾತ್ರ ವೀಕ್ಷಿಸಲು ಸಾಧ್ಯ.

`ಕಮರ್ಷಿಯಲ್ ಚಿತ್ರಗಳನ್ನು ಪರಿಗಣಿಸದೆ ಇರುವುದು ನೋವನ್ನುಂಟು ಮಾಡಿದೆ' ಎಂದಿದ್ದಾರೆ ಚಿತ್ರ ಸಾಹಿತಿ ನಾಗೇಂದ್ರಪ್ರಸಾದ್.

`ಆಯ್ಕೆ ಸಮಿತಿ ಎಲ್ಲ ಚಿತ್ರಗಳನ್ನು ವೀಕ್ಷಿಸದೆ ಪ್ರಶಸ್ತಿ ಪಟ್ಟಿ ಬಿಡುಗಡೆ ಮಾಡಿ ಸರ್ಕಾರದ ಮುಖಕ್ಕೂ ಮಸಿ ಬಳಿದಿದೆ' ಎನ್ನುವುದು ಭಾ.ಮಾ. ಹರೀಶ್ ದೂರು.

`ಆಯ್ಕೆಗಾಗಿ ನಮ್ಮೆದುರಿದ್ದ ಎಲ್ಲಾ ಚಿತ್ರಗಳನ್ನೂ ವೀಕ್ಷಿಸಿದ್ದೇವೆ. ಆಯ್ಕೆಯ ಹಿಂದೆ ಯಾವುದೇ ವೈಯಕ್ತಿಕ ಉದ್ದೇಶವಿಲ್ಲ. ವಾರ್ತಾ ಇಲಾಖೆ ನೇಮಿಸಿದ ಸದಸ್ಯರನ್ನೂ ಹಿಡಿದು ೯ ಜನ ಸದಸ್ಯರೂ ಸೇರಿ ಆಯ್ಕೆ ಮಾಡಿದ್ದೇವೆ' ಎಂದು ಟಿ. ಎನ್. ಸೀತಾರಾಮ್ ಸಮಜಾಯಿಸಿ ನೀಡಿದ್ದಾರೆ.

ಇನ್ನಷ್ಟು

ಬುದ್ಧ ಜೈನರನ್ನು ಹಿಂದು ಎಂದು ಒಪ್ಪಲು ತಕರಾರು

ಕಳಸ-ಬಂಡೂರಿ ನಾಲಾ ಯೋಜನೆ ಖಾಯಂ

ಸರ್ಕಾರಿ ವೆಬ್ ಸೈಟ್ ನಿರ್ವಹಣೆ ಐಬಿಎಂ ಸಂಸ್ಥೆಗೆ

ಬೆಂಕಿಗೆ ಆಹುತಿಯಾದ ಮಾಜಿ ಮುಖ್ಯಮಂತ್ರಿ ಪತ್ನಿ

ಮೈಸೂರಿನಲ್ಲಿ ಪ್ರವಾಸೋದ್ಯಮ ರ್‍ಯಾಲಿ

ರಾಜ್ಯ ಪ್ರಶಸ್ತಿ ಒಲ್ಲದ ಜಗ್ಗೇಶ್

ಮೊದಲ ಅಂತರಿಕ್ಷ ಮಹಿಳಾ ಪ್ರವಾಸಿ

ವಿಂಡೀಸ್ ವಿರುದ್ಧ ಭಾರತಕ್ಕೆ ಅಮೋಘ ಜಯ

ಉನ್ನತ ಶಿಕ್ಷಣದಲ್ಲಿ ಶೇ. ೨೭ ಮೀಸಲಾತಿ: ಮೊಯ್ಲಿ

ಈ ಬಾರಿ ೫೦ ಜನರಿಗೆ ಮಾತ್ರ ರಾಜ್ಯೋತ್ಸವ ಪ್ರಶಸ್ತಿ

ಬೆಂಗಳೂರಿನಲ್ಲಿ ಪುರುಷರ ಫ್ಯಾಷನ್ ಶೋ

ಹಸಿರು ಚಹಾಸೇವನೆಯಿಂದ ಹೃದಯ ರಕ್ಷಣೆ

ಚಲನಚಿತ್ರ ಪ್ರಶಸ್ತಿ ಪ್ರಕಟ: ನಾಯಿ ನೆರಳು ಚಿತ್ರಕ್ಕೆ ಪ್ರಶಸ್ತಿ

 

Print This PagePrint this page

Email this Page

ಮುಖಪುಟ

Copyright Vikranta Prakashana 2006. All rights reserved.
Site best viewed in 800x600 resolution.

Email : feedback@vikrantakarnataka.com