Fonts Problem?

Downloads

Wallpapers

Vikrantakarnataka Weekly

 

 

ಮುಖ ಪುಟ

ಸುದ್ದಿ-ಸದ್ದು

ಎನ್ನಾರೈ

ಸಾಹಿತ್ಯ-ಸಂದರ್ಭ

ಚಿತ್ರ ವಿಚಿತ್ರ

ಚಿತ್ರ ಶಾಲೆ

ಒಕ್ಕಲುತನ

ವೆಬ್ ಲಿಂಕ್ಸ್

ಪಾಕ ಶಾಲೆ

ಆಟ ಬೊಂಬಾಟ

ನಗೆ ಬುಗ್ಗೆ

ನಿಮ್ಮ ಓಲೆ

Google    

ವೆಬ್

ವಿಕ್ರಾಂತ ಕರ್ನಾಟಕ

Saturday, 09 September 2006 04:41 PM

ಅಭಿಷೇಕ್ ಜೊತೆ ದೀಪಿಕಾ ಪಡುಕೊಣೆ

ಮುಂಬಯಿ: ಶಾರುಕ್ ಖಾನ್ ಅಭಿನಯನದ ಫರ್‍ಹಾ ಖಾನ್ ನಿರ್ಮಾಣದ `ಓ ಶಾಂತಿ ಓಂ ಚಿತ್ರಕ್ಕೆ ಸಹಿ ಹಾಕಿದ ಮೇಲೆ ದೀಪಿಕಾ ಪಡುಕೋಣೆ ಈಗ ಅಭಿಷೇಕ್ ಬಚ್ಚನ್ ನಾಯಕನಾಗಿರುವ `ದಿಲ್ಲಿ೬ ಚಿತ್ರವನ್ನು ಒಪ್ಪಿಕೊಂಡಿದ್ದಾರೆ.

ಆದರೆ ಈ ಬಗ್ಗೆ ಏನನ್ನೂ ಹೇಳಲು ಇಷ್ಟಪಡದ ದೀಪಿಕಾ, ಹೆಚ್ಚಿಗೆ ಮಾಹಿತಿ ಬೇಕಿದ್ದರೆ ನಿರ್ಮಾಪಕ ರಾಕೇಶ್ ಮೆಹ್ರನನ್ನೇ ಕೇಳಿ ಎಂದಿದ್ದಾರೆ. ಓಂ ಶಾಂತಿ ಓಂ ಬಾಲಿವುಡ್‌ನಲ್ಲಿ ನನ್ನ ಮೊದಲ ಚಿತ್ರವಾಗಲಿದೆ ಇದರಲ್ಲಿ ಯಾವುದೇ ಸಂಶಯಬೇಡ. ಡಿಸೆಂಬರ್ ಹೊತ್ತಿಗೆ ಚಿತ್ರೀಕರಣ ಪ್ರಾರಂಭವಾಗುತ್ತದೆ ಎಂದಿದ್ದಾರೆ.

ಈಗಾಗಲೇ ಬೆಂಗಳೂರಿನಿಂದ ಮುಂಬಯಿಗೆ ಹಾರಿರುವ ದೀಪಿಕಾ ಬಾಂದ್ರಾದಲ್ಲಿ ನೆಲೆಸಿದ್ದಾರೆ. `ಚಿತ್ರರಂಗಕ್ಕೆ ಬರುವ ಆಸೆಯೇನೂ ಇರಲಿಲ್ಲ ಆದರೆ ಸಿಕ್ಕ ಅವಕಾಶಗಳು ಕುತೂಹಲಕರವಾಗಿದ್ದವು. ಹಾಗಾಗಿ ಬಾಲಿವುಡ್‌ಗೆ ಕಾಲಿಟ್ಟೆ ಎಂದು ಹೇಳಿದ್ದಾರೆ.

ಅನುಪಮ್ ಖೇರ್ ಅವರ ನಟನಾ ತರಬೇತಿ ಶಾಲೆಯಲ್ಲಿ ಮೂರು ತಿಂಗಳು ನಟನೆ ಬಗ್ಗೆ ಕಲಿತಿರುವುದಾಗಿ ಈ ಟಾಪ್ ಮಾಡೆಲ್ ಹೇಳುತ್ತಾರೆ.

ನರ್ತಿಸುವುದೆಂದರೆ ದೀಪಿಕಾಗೆ ಇಷ್ಟ. ಭರತನಾಟ್ಯ, ಜಾಜ್, ಬ್ಯಾಲೆಯಲ್ಲಿ ಅವರಿಗೆ ಪರಿಣತಿ ಇದೆ. ಚಿತ್ರಗಳ ಹಾಡಿನಲ್ಲಿ ಕುಣಿವುದನ್ನೇ ದೀಪ್ಸ್ ಎದುರು ನೋಡುತ್ತಿದ್ದಾರೆ.

ಇನ್ನಷ್ಟು

ಸಾಯಿಬಾಬ ರೂಪದಲ್ಲಿ ಜಾಕಿಶ್ರಾಫ್ ಹೊಸ ಅವತಾರ

ಸಂಜಯ್ ಲೀಲಾ ಬನ್ಸಾಲಿ ಚಿತ್ರದಲ್ಲಿ ೧೫ ಹಾಡುಗಳು!

ಗೇಶ್ ಕುಕನೂರು ಬಳಿ ಪ್ರೇಮ ಕಥೆಗಳಿಲ್ಲ

ವರ್ಮಾ ಶೋಲೆ-೨ ಚಿತ್ರಕ್ಕೆ `ಸಾಂಬ' ಫಿಕ್ಸ್

ಸಂಸಾರ ಸಾಗರದಲ್ಲಿ ತೇಲುತ್ತಿರುವ ನಮ್ರತಾ

ಕಿಂಗ್‌ಸ್ಲೆಯನ್ನು ಬೆರಗುಗೊಳಿಸಿದ ಐಶ್ವರ್ಯ

 

Print This PagePrint this page

Email this Page

ಮುಖಪುಟ

Copyright Vikranta Prakashana 2006. All rights reserved.
Site best viewed in 800x600 resolution.

Email : feedback@vikrantakarnataka.com