|
ಬೋಲ್ಡ್
ಪಾತ್ರಕ್ಕೂ ರೆಡಿ
ವಿದ್ಯಾ ಬಾಲನ್
ಜೈಪುರ:
ಖಾಸಗಿ ಎಫ್‌ಎಂ ವಾಹಿನಿಯ ಉದ್ಘಾಟನೆಗೆ ಜೈಪುರಕ್ಕೆ ಆಗಮಿಸಿದ್ದ ಬಾಲಿವುಡ್ ಚೆಲುವೆ ವಿದ್ಯಾ
ಬಾಲನ್ `ನಾನು ಎಲ್ಲಾ ರೀತಿಯ ಪಾತ್ರಗಳನ್ನು ಮಾಡಲು ತಯಾರಾಗಿದ್ದೇನೆ.
ಪಾತ್ರಕ್ಕೆ ಅಗತ್ಯವಿದ್ದರೆ ಮಾದಕವಾಗಿ ಬಟ್ಟೆ ಧರಿಸಲು ಯಾವುದೇ ಅಡ್ಡಿಯಿಲ' ಎಂದಿದ್ದಾರೆ.
ನೆರೆದಿದ್ದ ಜನ ಸಮೂಹವನ್ನು ಉದ್ದೇಶಿಸಿ ಮುಂಬರುವ ಮುನ್ನ
ಬಾಯಿ ಲಗೇ ರಹೋ ವನ್ನು ನೋಡಿ ಪ್ರೋತ್ಸಾಹಿಸಬೇಕೆಂದರು.
ಸಂಜಯ್ ದತ್ ಅಭಿನಯದ
`ಮುನ್ನಭಾಯಿ ಲಗೇ ರಹೋ' ಚಿತ್ರದಲ್ಲಿ ರೇಡಿಯೋ ಜಾಕಿ ಪಾತ್ರ ಮಾಡುತ್ತಿದ್ದು ಈ ಹಿಂದೆ
`ಪರಿಣಿತಾ'
ಚಿತ್ರದಲ್ಲಿ ನಿರ್ವಹಿಸಿದ ಲೋಲಿಟಾಳ ಪಾತ್ರಕ್ಕೂ ಬಹಳ ವ್ಯತ್ಯಾಸವಿದೆ.
ಆದರೆ
ಒತ್ತಾಯ ಪೂರ್ವಕವಾಗಿ ನನ್ನ ಇಮೇಜ್ ಬದಲಾಯಿಸುವ ಇಚ್ಛೆಯಿಲ್ಲ, ಪ್ರತಿಭೆಗೆ ಸವಾಲಾಗುವಂತಹ
ಪಾತ್ರಗಳು ಸಿಕ್ಕರೆ ಚೆನ್ನ ಎಂದರು. ಮುನ್ನಬಾಯಿಯ ನಂತರ ಏಕಲವ್ಯ, ಮಣಿರತ್ನಂನ ಗುರು ಚಿತ್ರಗಳ ಬಗ್ಗೆ ಹೆಚ್ಚಿನ ನಿರೀಕ್ಷೆಯಿದೆ, ತಮ್ಮ ಅಭಿನಯದ ಬಗ್ಗೆ ಬಿಗ್ ಬಿ,
ಕರಣ್‌ಜೋಹರ್ ನೀಡಿರುವ ಪ್ರಶಂಸೆಯಿಂದ ಪುಳಕಿತಗೊಂಡಿರುವ ವಿದ್ಯಾ ಅವರ ನಿರೀಕ್ಷೆಗೆ
ತಕ್ಕಂತೆ ಅಭಿನಯಿಸುವುದಾಗಿ ಹೇಳಿದರು.
|