ಉದಿತ್‌ಗೀಗ ಇಬ್ಬರು ಹೆಂಡ್ತೀರು!
ಪಟನಾ: ಬಾಲಿವುಡ್
ಗಾಯಕ ಉದಿತ್ ನಾರಾಯಣ್ ಈಗ ಇಬ್ಬರು ಹೆಂಡಿರ ಮುದ್ದಿನ ಗಂಡ. ಈ ಹಿಂದೆ ತಾನೇ ಉದಿತ್‌ರ
ಮೊದಲ ಪತ್ನಿ ಎಂದು ಘೋಷಿಸಿದ್ದ ರಂಜನಾ ಝಾ ಅವರನ್ನು ತಮ್ಮ ಪತ್ನಿಯೆಂದು ಉದಿತ್
ಒಪ್ಪಿಕೊಂಡಿದ್ದಾರೆ.
ಈ ಹಿಂದೆ ಬೆನ್ನು ಬಿಡದೆ
ಉದಿತ್‌ರನ್ನು ಪೀಡಿಸುತ್ತಿದ್ದ ರಂಜನಾ ಝಾ ಉದಿತ್ ವಿರುದ್ಧ ಬಿಹಾರ ಮಹಿಳಾ ಆಯೋಗಕ್ಕೆ
ದೂರು ಸಲ್ಲಿಸಿದ್ದರು.
ರಂಜನಾ ತಮ್ಮ ಪತ್ನಿಯಲ್ಲ,
ಆಕೆಗೂ ತನಗೂ ಸಂಬಂಧವಿಲ್ಲ, ಇದು ನನ್ನ ಹೆಸರು ಕೆಡಿಸಲು ನಡೆದಿರುವ ಕುತಂತ್ರ
ಎಂದಿರುವ ಉದಿತ್ ಈಗ ಸತ್ಯವನ್ನು ಒಪ್ಪಿಕೊಂಡಿದ್ದಾರೆ.
ಉದಿತ್-ರಂಜನಾ ದಂಪತಿಗಳಿಬ್ಬರೂ
ಬಿಹಾರ ಮಹಿಳಾ ಆಯೋಗಕ್ಕೆ ತೆರಳಿ ರಾಜಿ ಪತ್ರಕ್ಕೆ ಸಹಿ ಹಾಕಿದರು. ಇದರಿಂದ ಉದಿತ್ ಮೊದಲ
ಪತ್ನಿ ದೀಪಾ ಸ್ಥಾನಮಾನದಲ್ಲಿ ಯಾವುದೇ ವ್ಯತ್ಯಾಸವಿಲ್ಲ ಎಂದು ಅವರ ವಕೀಲರು
ತಿಳಿಸಿದ್ದಾರೆ.