ಸಾಕ್ಷಿ ವಿರುದ್ಧ ಕ್ರಿಮಿನಲ್ ಮೊಕದ್ದಮೆ
ಬೆಂಗಳೂರು :
`ಸೌಂದರ್ಯ' ಚಿತ್ರೀಕರಣದ ಸಂದರ್ಭದಲ್ಲಿ ಅದರ ನಾಯಕಿ ಸಾಕ್ಷಿ ಕೊಟ್ಟ ಕಿರುಕುಳಕ್ಕೆ
ಬೇಸತ್ತಿರುವ ಚಿತ್ರ ನಿರ್ದೇಶಕ ಹಾಗೂ ನಿರ್ಮಾಪಕ ಚೆನ್ನ ಗಂಗಪ್ಪ ನಟಿ ಸಾಕ್ಷಿ ಶಿವಾನಂದ್
ವಿರುದ್ಧ ಕ್ರಿಮಿನಲ್ ಮೊಕದ್ದಮೆ ಹೂಡಲು ನಿರ್ಧರಿಸಿದ್ದಾರೆ.
ಸಾಕ್ಷಿ ಮೇಲೆ ನಂಬಿಕೆ
ದ್ರೋಹ, ಮಾನಸಿಕ ವಂಚನೆ, ಬ್ಲಾಕ್‌ಮೇಲ್, ಸಂಚು ಮತ್ತು ಹಣದ ದುರ್ಬಳಕೆ ಸಹಿತ
ಆರು ಕ್ರಿಮಿನಲ್ ಮೊಕದ್ದಮೆ ಹೂಡಲು ತೀರ್ಮಾನಿಸಿದ್ದೇನೆ ಎಂದು ಚೆನ್ನಗಂಗಪ್ಪ
ಹೇಳಿದ್ದಾರೆ.
ಸಾಕ್ಷಿ ಶಿವಾನಂದ್‌ಳ ಬೇಜವಾಬ್ದಾರಿ
ವರ್ತನೆಗಳಿಗೆ ನನ್ನ ಬಳಿ ಸಾಕಷ್ಟು ಪುರಾವೆಗಳಿವೆ. ಆಕೆ ಆಡಿದ ಧಿಮಾಕಿನ ಮಾತುಗಳನ್ನೂ
ಸಹ ರೆಕಾರ್ಡ್ ಮಾಡಿಟ್ಟುಕೊಂಡಿದ್ದೇನೆ. ಅದನ್ನು ಮುಂದಿಟ್ಟುಕೊಂಡೇ ಮೊಕದ್ದಮೆ ಹೂಡುತ್ತೇನೆ
ಎಂದಿದ್ದಾರೆ ಚೆನ್ನಗಂಗಪ್ಪ.