|
ಕುಮಾರ ರಾಮನಿಂದ ಅಪಪ್ರಚಾರವಾಗಿಲ್ಲ
ಬೆಂಗಳೂರು :
ಕನ್ನಡ ಚಿತ್ರೋದ್ಯಮದಲ್ಲಿ ಹೊಸದೊಂದು ಟ್ರೆಂಡ್ ಶುರುವಾಗಿದೆ. ಅದು ಚರಿತ್ರೆ ಮತ್ತು
ವಿವಾದಕ್ಕೆ ಸಂಬಂಧಿಸಿದ್ದು. ಚಾರಿತ್ರಿಕ ಚಿತ್ರಗಳಲ್ಲಿ ತಪ್ಪು ಹುಡುಕುವುದು ಹೊಸ
ಟ್ರೆಂಡ್. ಇದರಿಂದಾಗಿ ಬಿಡುಗಡೆಯಾಗದ ಚಿತ್ರಗಳು ಸಾಕಷ್ಟು ಪ್ರಚಾರ ಹಾಗ
ಪಜೀತಿಗೆ ಒಳಪಟ್ಟಿದೆ. ಈಗಿನ ಸರದಿ `ಕುಮಾರ
ರಾಮನದ್ದು'.

ಡಾ.ರಾಜ್ ಮಹತ್ವಾಕಾಂಕ್ಷೆಯ
ಶಿವರಾಜ್ ಕುಮಾರ್ ನಟಿಸಿರುವ ಕುಮಾರ ರಾಮ ಚಿತ್ರದ ಚಿತ್ರೀಕರಣ ಮುಗಿದಿದ್ದು ಬಿಡುಗಡೆಗೆ
ಸಿದ್ಧವಾಗಿದೆ. ಆಗಲೇ ಚಿತ್ರ ಕೆಲವರ ಕೆಂಗಣ್ಣಿಗೆ ಗುರಿಯಾಗಿದೆ.
`ಗಂಡುಗಲಿ
ಕುಮಾರ ರಾಮ ಚಿತ್ರದಿಂದ ಕೆಲವು ಜನಾಂಗದವರಿಗೆ ನೋವುಂಟಾಗಿದೆ' ಎಂಬ ಮಾತು ವಿವಾದದ
ಮೂಲ. `ಚಿತ್ರದಿಂದ ಯಾವ ಜನಾಂಗಕ್ಕಾಗಲೀ, ಕುಲಕ್ಕಾಗಲೀ ನೋವುಂಟು ಮಾಡಿಲ್ಲ'
ಎಂಬುದು ಎಂ.ಎಸ್.ರಾಮಯ್ಯ ಚಿತ್ರಾಲಯ ನೀಡುವ ಸ್ಪಷ್ಟನೆ.
ಚಿತ್ರದಿಂದ ಇತಿಹಾಸಕ್ಕೆ
ಅಪಚಾರವಾಗುತ್ತಿದೆ ಎಂದು ಗಂಡುಗಲಿ ಕುಮಾರ ರಾಮ ಯುವ ವೇದಿಕೆಯ ಕೊಪ್ಪಳ
ಜಿಲ್ಲಾ ಸಂಚಾಲಕ ಮಂಜುನಾಥ ಗೊಂಡಬಾಳ ನೀಡಿರುವ ಹೇಳಿಕೆಗೆ ಚಿತ್ರಾಲಯದ ನಿರ್ದೇಶಕ
ಎಚ್.ಆರ್ ಭಾರ್ಗವ ಬುಧವಾರ ಸ್ಪಷ್ಟನೆ ನೀಡಿದ್ದಾರೆ.
ಯಾವುದೇ ಅಪಚಾರ ಎಸಗುವ ದೃಶ್ಯಗಳು ಚಿತ್ರದಲ್ಲಿಲ್ಲ ಎಂಬುದು ಮಂಜುನಾಥ್ ಸಮಜಾಯಿಷಿ.
ಚಿತ್ರವನ್ನು ನೋಡದೆಯೇ
ಕೆಲವರು ಹೇಳಿಕೆ ನೀಡುತ್ತಿದ್ದಾರೆ. ಇದು ತಪ್ಪು, ಕುಮಾರ ರಾಮ ಶಿವಾಜಿ, ಚೆನ್ನಮ್ಮರ
ಸಾಲಿಗೆ ಸೇರಿರುವ ಮಹಾನ್ ಧೀರ. ಕುಲ ಮತಗಳಿಗೆ ಆತನನ್ನು ಮೀಸಲಿಡುವುದು
ಖೇದನೀಯ ಎಂದು ಅವರು ನೊಂದು ನುಡಿದಿದ್ದಾರೆ.
ಚಿತ್ರದ ಕತೆಯ ಬಗ್ಗೆ
ಕುಮಾರ ರಾಮನ ವಂಶಸ್ಥರಿಗೂ ತಿಳಿಸಲಾಗಿದೆ. ಕುಮಾರ ರಾಮ ಕಾದಂಬರಿ ಅಪಾರ ಮೆಚ್ಚುಗೆ
ಪಡೆದಿದ್ದು ಡಾ.ಬರಗೂರು ರಾಮಚಂದ್ರಪ್ಪ ಆ ಕಾದಂಬರಿಗೆ ಮುನ್ನುಡಿ ಬರೆದಿದ್ದಾರೆ. ಕನ್ನಡಿಗರಿಗೆ
ಚಿತ್ರದ ಬಗ್ಗೆ ಅಪಾರ ನಿರೀಕ್ಷೆ ಇದೆ ಹೀಗಿರುವಾಗ ವಿನಾಕಾರಣ ಅಪಸ್ವರ ಎತ್ತವುದು ಸೂಕ್ತವಲ್ಲ
ಎಂದು ಭಾರ್ಗವ ಕೋರಿದ್ದಾರೆ.
|