ಕಾಬುಲ್ ಎಕ್ಸ್‌ಪ್ರೆಸ್‌ಗೆ ಸದ್ಯವೇ ಗ್ರೀನ್ ಸಿಗ್ನಲ್
ಈ ಚಿತ್ರದ ತಾರಾಗಣವನ್ನು
ನೋಡಿ. ಇದೊಂದು ಪಕ್ಕಾ ಮಸಾಲಾ ಚಿತ್ರ ಎಂದು ಯಾರಿಗಾದರೂ ಅನ್ನಿಸಿಬಿಡುತ್ತದೆ. ಆದರೆ
`ಕಾಬೂಲ್ ಎಕ್ಸ್‌ಪ್ರೆಸ್' ಒಂದು ವಿಭಿನ್ನ ಕಾಲ ಘಟ್ಟಕ್ಕೆ ಹೊಂದಿಕೊಳ್ಳುವ ಚಿತ್ರ.
ಇಬ್ಬರು ಪತ್ರಕರ್ತರು
ಅಫಘಾನಿಸ್ತಾನ ಯುದ್ಧದ ನಂತರದ ಘಟನೆಗಳನ್ನು ವರದಿ ಮಾಡುವುದೇ ಚಿತ್ರಕತೆ.
ಚಿತ್ರ ಸೆಪ್ಟೆಂಬರ್‌ನಲ್ಲಿ ಸೆಟ್ಟೇರಲಿದೆ. ೯/೧೧ ಘಟನೆಯ ನಂತರ ಅಫಘಾನಿಸ್ತಾನದಲ್ಲಿ ನಡೆದ
ಘಟನೆಯನ್ನಾಧರಿಸಿ ನಿರ್ಮಾಪಕ ಕಬೀರ್ ಖಾನ್ ಕಾಬೂಲ್ ಎಕ್ಸ್‌ಪ್ರೆಸ್‌ಗೆ ಚಿತ್ರಕತೆ ಬರೆದಿದ್ದಾರೆ.

ಚಿತ್ರ ಬಿಡುಗಡೆಗೆ
ಸಿದ್ಧವಾಗಿದ್ದು, ಕಬೀರ್ ಕೆಲವು ಅಪಾಯಕಾರಿ ಸ್ಥಳಗಳ ಚಿತ್ರೀಕರಣದ ಘಟನೆಯನ್ನು ಹರವಿಟ್ಟಿದ್ದಾರೆ.
`ಚಿತ್ರೀಕರಣದ ಸಂದರ್ಭದಲ್ಲಿ ಅಫಘಾನಿಸ್ತಾನ ಸಂಬಂಧಿಸಿದಂತೆ ಯಾವುದೇ ನಿರ್ದಿಷ್ಠ
ಸ್ಥಳದ ಚಿತ್ರ ತೆಗೆಯಬಾರದು ಎಂದು ತಾಲಿಬಾನ್ ಎಚ್ಚರಿಸಿದೆ. ಆದರೆ ತಾಲಿಬಾನ್
ಎಚ್ಚರಿಕೆಯನ್ನು ಪರಿಶೀಲಿಸಿದ ಅಲ್ಲಿನ ಸರ್ಕಾರ ನಮಗೆ ಸಹಾಯ ಮಾಡಿದೆ' ಎಂದು
ಅವರು ಹೇಳಿದ್ದಾರೆ.
ತಾಲಿಬಾನ್ ಸ್ಪಷ್ಟ
ಚಿತ್ರಣ
ಪತ್ರಕರ್ತರಾಗಿ ಅಫಘಾನಿಸ್ತಾನಕ್ಕೆ
ತೆರಳುವ ಜಾನ್ ಅಬ್ರಹಾಂ ಹಾಗೂ ಅರ್ಶಿದ್ ವಾರ್ಸಿ ಅಭಿನಯ ತಾಲಿಬಾನ್‌ನ ಸ್ಪಷ್ಟ ಚಿತ್ರಣ ನೀಡುತ್ತದೆ.
ಜೊತೆಗೆ ಪಾಕಿಸ್ತಾನದ ನಟ ಸಲ್ಮಾನ್ ಸಾಹೇಬ್, ಅಫಘಾನಿಸ್ತಾನದ ನಟ ಹನೀಫ್ ಹಮ್‌ಗುಮ್
ಅಮೇರಿಕಾದ ನಟಿ ಲಿಂಡಾ ಅರ್‌ಸೇನಿಯೋ ಅವರವರ ದೇಶವನ್ನು ಚಿತ್ರದಲ್ಲಿ ಪ್ರತಿನಿಧಿಸಿದ್ದಾರೆ.
ಕಾಬೂಲ್ ಎಕ್ಸ್‌ಪ್ರೆಸ್
ಸೆ.೭ ರಿಂದ ೧೬ರವರಗೆ ಟೊರೊಂಟೋದಲ್ಲಿ ನಡೆಯುವ ಅಂತಾರಾಷ್ಟ್ರೀಯ ಚಲನ
ಚಿತ್ರೋತ್ಸವಕ್ಕೆ ಅಧಿಕೃತವಾಗಿ ಆಯ್ಕೆಯಾಗಿದೆ.