ಚಿತ್ರೋತ್ಸವದಲ್ಲಿ ಕಾಸರವಳ್ಳಿ ಚಿತ್ರದ ಶೋಭೆ
ನವದೆಹಲಿ: ೮ ನೇ
ಏಷಿಯನ್ ಚಿತ್ರೋತ್ಸವದಲ್ಲಿ ಗಿರೀಶ್ ಕಾಸರವಳ್ಳಿಯವರ ನಾಯಿನೆರಳು ಚಲನಚಿತ್ರ ವೀಕ್ಷಕರ
ಮೆಚ್ಚುಗೆ ಪಾತ್ರವಾಯಿತು.
ನಿರ್ದೇಶಕ ಅಡೂರು
ಗೋಪಾಲ ಕೃಷ್ಣನ್, ಕೇತನ್ ಮೆಹ್ತಾ, ನಟಿ ನಂದಿತಾ ದಾಸ್, ದೀಪ ಸಹಿ, ಮಿತಾ ವಸಿಷ್ಟ
ಚಿತ್ರವನ್ನು ವೀಕ್ಷಿಸಿದ ಪ್ರಮುಖರು.
ಕಾಸರವಳ್ಳಿ ಮಾತನಾಡುತ್ತಾ
ಚಿತ್ರದ ಹೆಸರಲ್ಲಿರುವ ಚಿತ್ರದಲ್ಲಿ ನಾಯಿ ಹಾಗೂ ನೆರಳು ಕಾಣಲಿಲ್ಲವೆಂದು ಹುಡುಕಬೇಡಿ
ಅದೂ ರೂಪಕವಾಗಿ ಬಳಕೆಯಾಗಿದೆ ಅಷ್ಟೆ. ಪುನರ್ಜನ್ಮದ ಬಗ್ಗೆ ಇರುವ ಕತೆಗೆ ವಿಭಿನ್ನರೀತಿಯ
ನಿರೂಪಣೆ ಒದಗಿಸುವ ಪ್ರಯತ್ನ ಮಾಡಿದ್ದೇನೆ. ಎಸ್. ಎಲ್. ಭೈರಪ್ಪರ ಕಾದಂಬರಿ
ಆಧಾರಿತ ಈ ಚಿತ್ರದಲ್ಲಿ ನಾನು ಕೆಲವು ಮೂಲಭೂತ ವಿಷಯಗಳನ್ನು ಕೈಗೆತ್ತಿಕೊಂಡಿದ್ದೇನೆ.
ಸಂಪ್ರದಾಯದಿಂದ ಬಂದ ಹಲವು ಕಟ್ಟುಪಾಡುಗಳನ್ನು ಪ್ರಶ್ನಿಸದೆ ಆಚರಿಸುವುದು ಏಕೆ,
ಜೀವನದ ಹಲವು ಸಂಘರ್ಷಗಳು, ಅಸಂಗತ ಸಂಗತಿಗಳು, ಜೀವನವನ್ನು ತರ್ಕದ
ದೃಷ್ಠಿಯಿಂದ ಕಾಣುವುದು ಸರಿಯೇ, ಇದು ವೈಯಕ್ತಿಕ ಅಭಿಪ್ರಾಯವೇ ಅಥವಾ ಸಮಾಜದ
ನೆಮ್ಮದಿಗಾಗಿ ಅವನ ಮೇಲೆ ಹೇರಲಾಗಿದೆಯೇ ಎಂಬುದನ್ನು ಮನಗಾಣಬೇಕು ಎಂದರು
ಸೆಪ್ಟಂಬರ್ ಅಥವಾ
ಅಕ್ಟೋಬರ್‌ನಲ್ಲಿ ನಾಯಿನೆರಳು ಚಿತ್ರವನ್ನು ಬಿಡುಗಡೆ ಮಾಡುವ ಸಾಧ್ಯತೆ ಇದೆ.
ಚಿತ್ರೋತ್ಸವದಲ್ಲಿ ಪ್ರದರ್ಶನಕ್ಕಿಂತ ಕರ್ನಾಟಕದ ಜನತೆ ಈ ಚಿತ್ರವನ್ನು ನೋಡುವುದು
ಮುಖ್ಯ ಎಂದು ಹೇಳಿದರು.
ಪೂರಕ ವರದಿ :
H® bܨ
Pۿ " '