ಬಿಚ್ಚಮ್ಮಗಳ
ಗುಡ್‌ಲಕ್
ಒಳ್ಳೆಯ ಪತ್ರಕರ್ತ
ಎನ್ನಿಸಿಕೊಂಡ ನಂದಕುಮಾರ್ ಒಳ್ಳೆಯ ಚಿತ್ರ ಮಾಡಿಲ್ಲಪ್ಪಾ

ಇತ್ತೀಚೆಗೆ ಬಿಡುಗಡೆಯಾಗಿರುವ
ಗುಡ್‌ಲಕ್ ಚಿತ್ರದಲ್ಲಿ ಮಾಡೆಲಿಂಗ್ ಹೆಸರಿನಲ್ಲಿ ಸಾಕಷ್ಟು ಹಸಿಬಿಸಿ ದೃಶ್ಯಗಳಿರುವುದು
ಪಡ್ಡೆಗಳಿಗೆ ಆಕರ್ಷಣೆಯಾಗಿದೆಯಂತೆ.
ಸ್ವಲ್ಪ ತಂಗಳನ್ನ
ಆಗಿರುವ ಗುಡ್‌ಲಕ್ ಚಿತ್ರದ ನಾಯಕಿ ರಾಧಿಕಾ, ದಾಮಿನಿಯರ ಸ್ಟಿಲ್‌ಗಳನ್ನು ನೋಡಿಯೇ
ವೀಕ್ಷಕರು ಸಂತೃಪ್ತರಾದಂತಿದೆ. ಚಿತ್ರ ನೋಡಲು ಜನರ ದಂಡೇನೂ ಕಾಣಿಸುತ್ತಿಲ್ಲ. ಹಾಗೇನಾದರೂ
ಜನರು ಮುತ್ತಿದರೆ ಅದು ನಿರ್ದೇಶಕ ಕಮ್ ಪತ್ರಕರ್ತ ನಂದಕುಮಾರ್‌ರ ಗುಡ್‌ಲಕ್
ಅಷ್ಟೇ.
ಇನ್ನೊಂದು ವಿಶೇಷವೆಂದರೆ
ಈ ಚಿತ್ರ ಅರ್ಧದಲ್ಲಿ ಹಣಕಾಸು ತೊಂದರೆಯಿಂದಾಗಿ ನಿಂತಾಗ ಕೆ.ಮಂಜು ಸಹಾಯಕ್ಕೆ ಮುಂದಾಗಿದ್ದರು.
ಆದರೆ ಹಾಡುಗಳ ಚಿತ್ರೀಕರಣ ರೀತಿಯನ್ನು ನೋಡಿದಾಗಲೇ ಅವರಿಗೆ ಅಸಹ್ಯವೆನಿಸಿತು.
ಆದರೆ ಒಳ್ಳೆಯ ಪತ್ರಕರ್ತ
ಎನ್ನಿಸಿಕೊಂಡ ನಂದಕುಮಾರ್ ಒಳ್ಳೆಯ ಚಿತ್ರ ಮಾಡಿಲ್ಲ ಎಂಬುದು ಬೇಜಾರಿನ ವಿಷಯ.
ಎಕ್ಸ್‌ಪೋಸ್ ವಿರುದ್ಧ ಬರೆವ ಪತ್ರಕರ್ತರಿಗೆ, ಪತ್ರಕರ್ತ ಎಂಬ ವಿಶೇಷಣ ಹೊತ್ತುಕೊಂಡಿರುವ
ನಂದಕುಮಾರ್ ನಿರಾಸೆ ಉಂಟುಮಾಡಿದ್ದಾರೆ.