Fonts Problem?

Downloads

Wallpapers

Vikrantakarnataka Weekly

 

 

ಮುಖ ಪುಟ

ಸುದ್ದಿ-ಸದ್ದು

ಎನ್ನಾರೈ

ಸಾಹಿತ್ಯ-ಸಂದರ್ಭ

ಚಿತ್ರ ವಿಚಿತ್ರ

ಚಿತ್ರ ಶಾಲೆ

ಒಕ್ಕಲುತನ

ವೆಬ್ ಲಿಂಕ್ಸ್

ಪಾಕ ಶಾಲೆ

ಆಟ ಬೊಂಬಾಟ

ನಗೆ ಬುಗ್ಗೆ

ನಿಮ್ಮ ಓಲೆ

Google

 

ವೆಬ್

ವಿಕ್ರಾಂತ ಕರ್ನಾಟಕ

 

Friday, 01 September 2006 03:31 PM

ಚಿತ್ರಲೋಕ.ಕಾಂ ಸಿನೆಮಾ ಚಿತ್ರಸಂಗ್ರಹ ಪ್ರದರ್ಶನದ ಇಣುಕು ನೋಟ

ಬೆಂಗಳೂರು : ನಿಜಕ್ಕೂ ಅದೊಂದು ಅಪರೂಪದ ಕಾರ್ಯಕ್ರಮ. ನಿಂತಲ್ಲಿ ನಿಂತು ಗೋಡೆಯ ಮೇಲೆ ಹರಡಿಟ್ಟಿರುವ ಹಳೆಯ ಛಾಯಾಚಿತ್ರಗಳನ್ನು ಹಾಗೆಯೇ ದಿಟ್ಟಿಸುತ್ತಿದ್ದರೆ ಆ ಅಗಾಧ ಸಂಗ್ರಹವನ್ನು ಕಂಡು ಮನಸು ಬೆರಗಾಗುತ್ತದೆ. KM Veeresh, Editor Chitraloka.com

 

ಖ್ಯಾತ ಚಲನಚಿತ್ರ ಛಾಯಾಗ್ರಾಹಕ ವೀರೇಶ್ ಇಂಥಾದ್ದೊಂದು ವಿಶಿಷ್ಟ ಪ್ರಯೋಗ ಮಾಡಿದ್ದಾರೆ. ಅದಕ್ಕಾಗಿ ಹಲವು ವರ್ಷಗಳ ದುಡಿಮೆ ಮಾಡಿದ್ದಾರೆ. ಚಿತ್ರಲೋಕ.ಕಾಂನ ಕೆ. ಎಂ. ವೀರೇಶ್ ಶೇಷಾದ್ರಿಪುರಂನ ಸದಾಶಿವ ಸರ್ಕಲ್ ಬಳಿಯ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ಚಲನಚಿತ್ರ ಫೋಟೋ ಪ್ರದರ್ಶನವನ್ನು ಏರ್ಪಡಿಸಿದ್ದಾರೆ. ಅವರ ಸಂಗ್ರಹದಲ್ಲಿ ಸುಮಾರು ೪೦ ವರ್ಷಗಳ ಹಿಂದಿನ ಚಲನಚಿತ್ರಗಳ ಪ್ರಾತಿನಿಧಿಕ ಫೋಟೋಗಳಿವೆ.

 

Malashri

ಚಿತ್ರಲೋಕ.ಕಾಮ್ ಮೂಲಕ ಮನೆಮಾತಾಗಿರುವ ವೀರೇಶ್, ಪುಟ್ಟಣ್ಣ ಕಣಗಾಲ್‌ರಿಂದ ಹಿಡಿದು ಈಗಿನ್ನು ಬಿಡುಗಡೆಗೊಂಡಿರುವ ಚಲನ ಚಿತ್ರಗಳ ಸ್ಥಿರಚಿತ್ರವನ್ನು ಪ್ರದರ್ಶನದಲ್ಲಿ ಇರಿಸಿದ್ದಾರೆ.

 

ಕಪ್ಪು ಬಿಳುಪು ಹಾಗೂ ಕಲರ್ ಛಾಯಾಚಿತ್ರಗಳ ಪ್ರತ್ಯೇಕ ಸಂಗ್ರಹವನ್ನು ಅವರು ಅಚ್ಚುಕಟ್ಟಾಗಿ ಜೋಡಿಸಿದ್ದಾರೆ.

ವಾಣಿಜ್ಯ ಮಳಿಗೆಯಲ್ಲಿ ನಡೆದ ಈ ಕಾರ್ಯಕ್ರಮವನ್ನು ಆಗಸ್ಟ್ ೧೪ರಂದು ಮುಖ್ಯಮಂತ್ರಿ ಎಚ್.ಡಿ. ಕುಮಾರ ಸ್ವಾಮಿ ಉದ್ಘಾಟಿಸಿದರು. ಮಂಡಳಿಯ ಪ್ರಮುಖರಾದ ಪಾರ್ವತಮ್ಮ ರಾಜ್‌ಕುಮಾರ್, ಸಾ.ರಾ. ಗೋವಿಂದು ಈ ಸಮಾರಂಭದಲ್ಲಿ ಉಪಸ್ಥಿತರಿದ್ದರು.

 

ಕೆ. ಎಂ. ವೀರೇಶ್‌ಗೆ ಅಭಿನಂದನೆ ತಿಳಿಸಿ : kmveeresh@dataone.in

 

Print This PagePrint this page

 

Email this Page

ಮುಖಪುಟ

Copyright Vikranta Prakashana 2006. All rights reserved.
Site best viewed in 800x600 resolution.

Email : feedback@vikrantakarnataka.com