ನ್ಯೂಯಾರ್ಕ್‌ನಲ್ಲಿ ಬಿಪಾಶಾಗೆ ಕಿರುಕುಳವಂತೆ
ನ್ಯೂಯಾರ್ಕ್:
ನ್ಯೂ ಜೆರ್ಸಿಯಲ್ಲಿ ನಡೆದ ಇಂಡಿಯಾ ಡೇ ಪೆರೇಡ್‌ನಲ್ಲಿ `ಬಿಚ್ಚು
ಮನಸ್ಸಿನ ಬಾಲಿವುಡ್ ಬೆಡಗಿ ಬಿಪಾಶಾ ಬಸು ಸಮಾರಂಭ ಸಂಯೋಜಕರಿಂದ
ಮಾನಸಿಕ ಹಾಗೂ ದೈಹಿಕವಾಗಿ ಹಿಂಸೆಗೆ ಒಳಗಾಗಿರುವುದಾಗಿ
ಆರೋಪಿಸಿದ್ದಾರೆ.

ಸೋಮವಾರ
ಇಂಡಿಯನ್ ಬ್ಯುಸಿನೆಸ್ ಅಸೋಸಿಯೇಶನ್ ಪ್ರಾಯೋಜಕತ್ವದಲ್ಲಿ ನಡೆಯಬೇಕಿದ್ದ
ಇಂಡಿಯಾ ಪೆರೇಡ್ ಕಾರ್ಯಕ್ರಮಕ್ಕೆ ನ್ಯೂಯಾರ್ಕಿನಿಂದ ಎಡಿಸನ್‌ಗೆ
ತೆರಳುವಾಗ ತಾನು ಪ್ರಯಾಣಿಸುತ್ತಿದ್ದ ಕಾರಿನಲ್ಲಿದ್ದ ಇಬ್ಬರು ಸಂಯೋಜಕರು
ದೈಹಿಕವಾಗಿ ಕಿರುಕುಳ ನೀಡಿರುವುದಾಗಿ ಬಿಪಾಶಾ ಬಹಿರಂಗಪಡಿಸಿದ್ದಾರೆ.
ಸಮಾರಂಭದಲ್ಲಿ
ಮುಖ್ಯ ಅತಿಥಿಯಾಗಿ ಮಾತನಾಡಿದ ಬಿಪಾಶಾ ಈ ಘಟನೆಯನ್ನು ಬಹಿರಂಗಪಡಿಸಿ,
ಇದರಿಂದ ಬೇಸರಗೊಂಡು ಕಾರ್ಯಕ್ರಮದಿಂದ ಹೊರನಡೆದಿದ್ದಾರೆ ಎನ್ನಲಾಗಿದೆ.
ಘಟನೆಯಿಂದ ಬಿಪಾಶಾ ದೇಹದ ಮೇಲೆ ಪರಚಿದ ಗಾಯಗಳಾಗಿರುವುದಾಗಿ
ನಟಿಯ ಆಪ್ತರು ತಿಳಿಸಿದ್ದಾರೆ. ಇಂಡಿಯನ್ ಬ್ಯುಸಿನೆಸ್ ಅಸೋಸಿಯೇಶನ್
ವಕ್ತಾರ ಸತೀಶ್ ಪೂಂಡಿ ಘಟನೆಯನ್ನು ಗಂಭೀರವಾಗಿ ಪರಿಗಣಿಸಿ
ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ.