|
ಬಿಗ್ ಬಿ ಜೊತೆ ವಿಕ್ರಮ್ ನಟಿಸುವ ಸಾಧ್ಯತೆ
ಚೆನ್ನೈ: ಬಾಲಿವುಡ್‌ನ ಬಾದ್‌ಷಾ ಅಮಿತಾಬ್ ಬಚ್ಚನ್ ಹಾಗೂ
ತಮಿಳಿನ ವೈವಿಧ್ಯಮಯ ನಟ ವಿಕ್ರಮ್ ಒಟ್ಟಿಗೆ ನಟಿಸುವ
ಸಾಧ್ಯತೆಯಿದೆ.
ಎಬಿಸಿಎಲ್ ಹಾಗೂ ನಿರ್ಮಾಪಕ ಮಣಿಕಂ ನಾರಾಯಣನ್ ನಿರ್ಮಾಣದಲ್ಲಿ
ತಯಾರಾಗುವ ಬಹು ವೆಚ್ಚದ ತಮಿಳು ಚಿತ್ರದಲ್ಲಿ ಈ ಇಬ್ಬರು
ನಾಯಕರು ನಟಿಸಲಿದ್ದಾರೆ.
ನಿರ್ಮಾಪಕ ಎಂ. ನಾರಾಯಣ್ ಈಗಾಗಲೇ `ವೆಟ್ಟೆಯಾಡು
ವಿಲೈಯಾಡು' ಎಂಬ ಯಶಸ್ವಿ ಚಿತ್ರವನ್ನು ಕಮಲ್ ಹಾಸನ್
ನಾಯಕತ್ವದಲ್ಲಿ ನಿರ್ಮಿಸಿದ್ದಾರೆ.
ದಕ್ಷಿಣ ಭಾರತದಲ್ಲಿ ಮೊದಲ ಬಾರಿಗೆ ಕನ್ನಡ ಚಿತ್ರ `ಅಮೃತಧಾರೆ'
ಯಲ್ಲಿ ಅಭಿನಯಿಸಿದ್ದ ಅಮಿತಾಬ್ ಅವರು, ತಮಿಳು ಚಿತ್ರದಲ್ಲಿ ನಟಿಸುವ
ಇಚ್ಛೆಯನ್ನು ತೋರಿದ್ದರು. ಈಗ ಅಮಿತಾಬ್ ಚಲನಚಿತ್ರ ನಿರ್ಮಾಣ
ಸಂಸ್ಥೆ ಎಬಿಸಿಎಎಲ್ ಮೂಲಕ ಅವರ ಆಸೆ ಕೈಗೂಡಲಿದೆ.
ಎಬಿಸಿಎಲ್ ಸಂಸ್ಥೆ ನಿರ್ಮಿಸಿದ ತಮಿಳು ಚಿತ್ರ `ಉಲ್ಲಾಸಂ' ಚಿತ್ರದ
ಮೂಲಕವೇ ವಿಕ್ರಮ್
ಮೊದಲಿಗೆ ಜನಮೆಚ್ಚುಗೆಯನ್ನು ಗಳಿಸಿದ್ದನ್ನು ಇಲ್ಲಿ ಸ್ಮರಿಸಬಹುದು.
ಇನ್ನಷ್ಟು
ಸ್ವತಃ ಅಣ್ಣನ ಮಗನಿಂದ ಗುಂಡೇಟು ತಿಂದ ಕೋರೆ
ಇಮ್ರಾನಾ ಪ್ರಕರಣ: ತಪ್ಪಿತಸ್ಥ ಮಾವ
ಇನ್ನು ಯಾಹೂ ಮೆಸ್ಸೆಂಜರ್ ಹಿಂದಿ ತಮಿಳಲ್ಲೂ ಲಭ್ಯ
ರಾಷ್ಟ್ರಪತಿಯ ಕ್ಷಮಾದಾನ ಕೋರಲಿರುವ ಅಫಜಲ್
೧, ೪೦೦ ಉದ್ಯೋಗಿಗಳನ್ನು ಹೊರದಬ್ಬಿದ ಎಓಆಲ್
ಪಾಕ್ ಪಂದ್ಯವನ್ನು ಹಾಳುಗೆಡವಲು ಶಿವಸೇನೆ ಹಂಚಿಕೆ
ನೈಸರ್ಗಿಕ ಕೃಷಿಗೆ ಮಾರು ಹೋದ ಮಠ
|