ಏಷ್ಯಾದ ಸೆಕ್ಸಿ ಪುರುಷ ಅಭಿಷೇಕ್ ಬಚ್ಚನ್
ಲಂಡನ್: ಲಂಡನ್‌ನಲ್ಲಿ ಪ್ರಕಟವಾಗುವ
ಏಷ್ಯಾದ ವಾರ ಪತ್ರಿಕೆ `ಈಸ್ಟರ್ನ್ ಐ' ಮಾಡಿರುವ `ಏಷ್ಯಾದ ಅತ್ಯಂತ ಸೆಕ್ಸಿ
ಪುರುಷ' ಎನ್ನುವ ಸಮೀಕ್ಷೆಯಲ್ಲಿ ಬಾಲಿವುಡ್ ನಟ ಅಭಿಷೇಕ್ ಬಚ್ಚನ್
ಪ್ರಥಮ ಸ್ಥಾನವನ್ನು ಪಡೆದಿದ್ದಾರೆ.
ಇದಕ್ಕೆ ಪ್ರತಿಕ್ರಿಯಿಸಿದ ಅಭಿಷೇಕ್ `ಏನು!
ನಿಜವಾಗಿಯೂ ಹೀಗಾಗಿದಿಯೆ? ಜನರಿಗೆ ಕಣ್ಣೇ ಇಲ್ಲವೆ? ನಾನೆಂತೂ ಈ ಮಾತನ್ನು
ಒಪ್ಪುವುದಿಲ್ಲ. ಆದರೆ ನನ್ನನ್ನು ಅತ್ಯಂತ ಸೆಕ್ಸಿ ಪುರುಷ ಎಂದ ಜನರಿಗೆ
ಧನ್ಯವಾದ ಅರ್ಪಿಸುತ್ತೇನೆ' ಎಂದು ಹೇಳಿದ್ದಾರೆ.
ಹಿಂದಿನ ವರ್ಷ ಇದೇ ಪತ್ರಿಕೆ ನಡೆಸಿದ ಸಮೀಕ್ಷೆಯಲ್ಲಿ
ಜಾನ್ ಅಬ್ರಾಹಂ ಪ್ರಥಮ ಸ್ಥಾನ ಪಡೆದಿದ್ದರು. ಆದರೆ ಈಗ ಎರಡನೆಯ
ಸ್ಥಾನಕ್ಕೆ ಸಮಾಧಾನ ಪಟ್ಟುಕೊಳ್ಳಬೇಕಾಗಿದೆ.
ಸುಂದರ ಪುರುಷರ ಪಟ್ಟಿ ಹೀಗಿದೆ: ೧.
ಅಭಿಷೇಕ್ ಬಚ್ಚನ್ ೨. ಜಾನ್ ಅಬ್ರಾಹಂ ೩. ಆಮೀರ್ ಖಾನ್ ೪. ಹೃತಿಕ್
ರೋಶನ್ ಮತ್ತು ಡಿನೋ ಮೋರಿಯಾ ೫. ಯಾತೀನ್ ಸೋನಿಕ್ ೭. ಉಪೇನ್
ಪಟೇಲ್ ೮. ಅರ್ಜುನ್ ರಾಮ್‌ಪಾಲ್ ೯. ಸೈಫ್ ಅಲಿ ಖಾನ್ ೧೦. ಜೋ ಸಾನ್.