Fonts Problem?

For Unicode version click here

For ANSI version click here

Downloads

Wallpapers

Vikrantakarnataka Weekly

 

 

ಮುಖ ಪುಟ

ಸುದ್ದಿ-ಸದ್ದು

ಎನ್ನಾರೈ

ಸಾಹಿತ್ಯ-ಸಂದರ್ಭ

ಚಿತ್ರ ವಿಚಿತ್ರ

ಚಿತ್ರ ಶಾಲೆ

ಒಕ್ಕಲುತನ

ವೆಬ್ ಲಿಂಕ್ಸ್

ಪಾಕ ಶಾಲೆ

ಆಟ ಬೊಂಬಾಟ

ನಗೆ ಬುಗ್ಗೆ

ನಿಮ್ಮ ಓಲೆ

Google    

ವೆಬ್

ವಿಕ್ರಾಂತ ಕರ್ನಾಟಕ

Sunday, 31 December 2006 05:29 PM

ಪ್ರಸಿದ್ಧ ನೃತ್ಯಗಾರ್ತಿ ಚಂದ್ರಲೇಖಾ ದೇಹಾಂತ್ಯ

 

ಚೆನ್ನೈ: ಸುಪ್ರಸಿದ್ಧ ನೃತ್ಯಗಾರ್ತಿ ಮತ್ತು ನೃತ್ಯ ನಿರೂಪಕಿ ಚಂದ್ರಲೇಖಾ(೭೮) ಚೆನ್ನೈನ ತಮ್ಮ ನಿವಾಸದಲ್ಲಿ ಶನಿವಾರ ರಾತ್ರಿ ಕ್ಯಾನ್ಸರ್ ರೋಗದಿಂದ ನಿಧನ ಹೊಂದಿದ್ದಾರೆ.
Chandralekha

ಭಾರತೀಯ ಸಮಕಾಲೀನ ರಂಗ ಸಜ್ಜಿಕೆಗೆ ವಿನೂತನ ರೀತಿಯ ಸೌಂದರ್ಯ ಮತ್ತು ಕಲೆಯ ಆಯಾಮ ನೀಡಿ ಕ್ರಾಂತಿಯನ್ನೇ ಮಾಡಿದ ಶ್ರೇಯಸ್ಸು ಚಂದ್ರಲೇಖಾರವರಿಗೆ ಸಲ್ಲುತ್ತದೆ.
 

೧೯೫೦ರ ದಶಕದಲ್ಲಿ ಭರತನಾಟ್ಯದ ಏಕ ವ್ಯಕ್ತಿ ಪ್ರದರ್ಶನಗಳಲ್ಲಿನ ವಿಶಿಷ್ಟ ಪ್ರಯೋಗಗಳ ಮೂಲಕ ಜನರ ಗಮನ ಸೆಳೆದರು.
 

ಭರತ ನಾಟ್ಯದ ಮುಖ್ಯ ಲಕ್ಷಣವಾದ ಅರ್ಪಣಾ ಮನೋಭಾವಕ್ಕೆ ವಿರುದ್ಧವಾದ ಹರಿತ ಆಂಗಿಕ ಅಭಿನಯ ಹಾಗೂ ಆವೇಗಭರಿತ ಪ್ರದರ್ಶನಗಳು ಚಂದ್ರಲೇಖಾ ಅವರಿಗೆ `ಅಸಂಪ್ರದಾಯಕನೃತ್ಯಗಾರ್ತಿ' ಎನ್ನುವ ಹೆಸರನ್ನು ತಂದುಕೊಟ್ಟಿತ್ತು.
 

ಇವರು ಭರತನಾಟ್ಯ, ಯೋಗ ಮತ್ತು ಕಳರಿಪಯಟ್ಟು ಎಂಬ ಸಮರಕಲೆಯ ಚಲನೆಗಳನ್ನು ತಮ್ಮ ನೃತ್ಯಶೈಲಿಯಲ್ಲಿ ಅಳವಡಿಸಿಕೊಂಡಿದ್ದರು. ತಮ್ಮ ಸಾಧನೆಗಾಗಿ ಚಂದ್ರಲೇಖಾ ಅವರು ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಗೌರವಗಳಿಗೂ ಪಾತ್ರರಾಗಿದ್ದಾರೆ.
 

ರಾಷ್ಟ್ರಮಟ್ಟದಲ್ಲಿ ಸಂಗೀತ ನಾಟಕ ಅಕಾಡೆಮಿ ಫೆಲೋಶಿಪ್ ಮತ್ತು ಕಾಳಿದಾಸ ಸನ್ಮಾನಗಳನ್ನು ಪಡೆದಿದ್ದಾರೆ.
 

ಅಂತರರಾಷ್ಟ್ರೀಯ ಮಟ್ಟದಲ್ಲಿ ೧೯೯೨ರ ಇಟಲಿಯ ಗಿಯಾ ಪುರಸ್ಕಾರ ಮತ್ತು ೧೯೯೨ರ ಟೈಮ್ಸ್ ಔಟ್ ಡ್ಯಾನ್ಸ್ ಅಂಬ್ರೆಲ್ಲಾ ಪುರಸ್ಕಾರಗಳಿಗೆ ಪುರಸ್ಕೃತರಾಗಿದ್ದಾರೆ.
 

೧೯೫೦ರ ಪೂರ್ವದಲ್ಲಿ ಗುರು ಕಂಚಿಪುರಂ ಎಲ್ಲಪ್ಪ ಪಿಳ್ಳೈ ಅವರಿಂದ ಶಾಸ್ತ್ರೀಯ ನೃತ್ಯ ಕಲಿತು ತಮ್ಮ ವೃತ್ತಿ ಜೀವನ ಪ್ರಾರಂಭಿಸಿದರು.
 

೧೯೬೦ರಲ್ಲಿ ತಮ್ಮ ನೃತ್ಯ ವೃತ್ತಿಯನ್ನು ತೊರೆದು ಬರಹಗಾರ್ತಿ ಮತ್ತು ಮಹಿಳಾ ಹಕ್ಕುಗಳ ಕಾರ್ಯಕರ್ತೆಯಾಗಿ ಗುರುತಿಸಿಕೊಂಡರು. ೧೯೮೫ರಲ್ಲಿ ನೃತ್ಯ ನಿರೂಪಕಿಯಾಗಿ ಪುನಃ ನೃತ್ಯ ಪ್ರಪಂಚಕ್ಕೆ ಕಾಲಿರಿಸಿದರು.

 

ಇನ್ನಷ್ಟು

ಜೆಸ್ಸಿಕಾ ಲಾಲ್ ಹತ್ಯೆ: ಮನು ದೋಷಿ

ಅಕ್ರಮ ಆಸ್ತಿ ಪ್ರಕರಣ ಗೆದ್ದ ಲಾಲೂ ದಂಪತಿಗಳು

ರಜತ ಕಳೆದುಕೊಳ್ಳುವ ಭಯದಲ್ಲಿ ಶಾಂತಿ

ಗೌಡರ ಜೊತೆ ಸೇರುವ ಆಸೆ ಇತ್ತು ಆದರೆ...

ಫೆ.೧೧ಕ್ಕೆ ವಿಶ್ವ ಹಿಂದೂ ಅಧಿವೇಶನ

ರಾಜ್ಯದ ಮೇಲೆ ಚುನಾವಣಾ ಆಯೋಗದ ದೂರು

ಬಿಜೆಪಿ ಜಿಲ್ಲಾಮುಖಂಡರ ಅಭಿಪ್ರಾಯ ಕೇಳಿ ಮೈತ್ರಿ

Print This PagePrint this page

Email this Page

ಮುಖಪುಟ

Copyright Vikranta Prakashana 2006. All rights reserved.
Site best viewed in 800x600 resolution.

Email : feedback@vikrantakarnataka.com