Fonts Problem?

For Unicode version click here

For ANSI version click here

Downloads

Wallpapers

Vikrantakarnataka Weekly

 

 

ಮುಖ ಪುಟ

ಸುದ್ದಿ-ಸದ್ದು

ಎನ್ನಾರೈ

ಸಾಹಿತ್ಯ-ಸಂದರ್ಭ

ಚಿತ್ರ ವಿಚಿತ್ರ

ಚಿತ್ರ ಶಾಲೆ

ಒಕ್ಕಲುತನ

ವೆಬ್ ಲಿಂಕ್ಸ್

ಪಾಕ ಶಾಲೆ

ಆಟ ಬೊಂಬಾಟ

ನಗೆ ಬುಗ್ಗೆ

ನಿಮ್ಮ ಓಲೆ

Google    

ವೆಬ್

ವಿಕ್ರಾಂತ ಕರ್ನಾಟಕ

Wednesday, 29 November 2006 01:32 PM

ಅರ್ಧ ಅಪರಾಧಿ ಸಂಜಯ್ ದತ್

 

ಮುಂಬೈ: ಅನೇಕ ದಿನಗಳಿಂದ ಕಾಯುತ್ತಿದ್ದ, ಮುಂಬೈ ಸರಣಿ ಸ್ಫೋಟದಲ್ಲಿ ಭಾಗಿಯಾಗಿದ್ದಾರೆ ಎಂದು ಆರೋಪ ಹೊತ್ತ ಸಂಜಯ್ ದತ್‌ರ ಬಗೆಗಿನ ತೀರ್ಪು ಮಂಗಳವಾರ ಹೊರಬಿದ್ದಿದೆ.
ದತ್ ಅವರನ್ನು ಟಾಡಾ ಆರೋಪಗಳಿಂದ ಮುಕ್ತಗೊಳಿಸಿದ ನ್ಯಾಯಾಲಯ ಅಕ್ರಮ ಶಸ್ತ್ರಾಸ್ತ್ರಗಳನ್ನು ಹೊಂದಿರುವ ಪ್ರಕರಣದಲ್ಲಿ ದೋಷಿ ಎಂದು ತೀರ್ಮಾನಿಸಿದೆ.


Sanjaydutt

ಸಂಜಯ್ ದತ್ ೧೯೯೨-೯೩ರಲ್ಲಿ ನಡೆದ ಮುಂಬೈ ಸರಣಿ ಸ್ಫೋಟದಲ್ಲಿ ಭಾಗಿಯಾದ ಬಗ್ಗೆ ಯಾವುದೇ ದಾಖಲೆಗಳಿಲ್ಲದಿರುವುದು, ಸಂಜಯ್ ನೀಡಿರುವ ತಪ್ಪೊಪ್ಪಿಗೆ ಹೇಳಿಕೆಗಳು ಮತ್ತು ಸಂಜಯ್ ಪರವಾಗಿ ನೀಡಿರುವ ಸಹ ಆರೋಪಿಗಳ ಹೇಳಿಕೆಗಳನ್ನು ಪರಿಗಣಿಸಿ ನ್ಯಾಯಾಲಯ ಸರಣಿ ಸ್ಫೋಟದ ಆರೋಪಗಳಿಂದ ಮುಕ್ತ ಗೊಳಿಸಿದೆ.
 

ಅನಧಿಕೃತವಾಗಿ ಶಸ್ತ್ರಾಸ್ತ್ರಗಳನ್ನು ಹೊಂದಿರುವ ಆರೋಪದಲ್ಲಿ ಸಂಜಯ್ ದತ್ ಅವರನ್ನು ನ್ಯಾಯಾಲಯ ದೋಷಿ ಎಂದು ಪರಿಗಣಿಸಿದೆ. ಅಲ್ಲದೆ ಸಂಜಯ್ ಬಳಿ ಇದ್ದ ಶಸ್ತ್ರಾಸ್ತ್ರಗಳನ್ನು ತಮ್ಮ ಮನೆಯಲ್ಲಿ ಇರಿಸಿಕೊಂಡಿದ್ದ ಜೆಬುನ್ನಿಸಾ ಖಾಜಿ, ಕಸ್ಟಂ ಅಧಿಕಾರಿ ಸೋಮನಾಥ್‌ರನ್ನೂ ದೋಷಿ ಎಂದು ಪರಿಗಣಿಸಲಾಗಿದೆ.
 

ಈಗಾಗಲೇ ಸಂಜಯ್ ದತ್ ೧೮ ತಿಂಗಳುಗಳ ಶಿಕ್ಷೆಯನ್ನು ಅನುಭವಿಸಿದ್ದು ಮೂರು ವರ್ಷಗಳ ಶಿಕ್ಷೆಯನ್ನು ನ್ಯಾಯಾಲಯ ವಿಧಿಸುವ ಸಂಭವವಿದೆ.

 

ಇನ್ನಷ್ಟು

ಕನ್ನಡಿಗರ ಮನದಲ್ಲಿ ಇನ್ನೂ ನೆಲೆಸಿರುವ ಸರ್.ಎಂ. ವಿ

ರೈತರ ಆತ್ಮಹತ್ಯೆ ತಡೆಗೆ ಪ್ಯಾಕೇಜ್ ಘೋಷಣೆ

ಬುದ್ಧನೆಡೆಗೆ.. ಮರಳಿ ಮನೆಗೆ: ಬೃಹತ್ ಸಮಾವೇಶ

ಸಕ್ಕರೆ ಕಾರ್ಖಾನೆ ಅಭಿವೃದ್ಧಿಗೆ ಸಹಕಾರಿ ಸಂಸ್ಥೆ

ಎಸ್‌ಜಿಪಿಸಿಯ ಮುಖ್ಯಸ್ಥರಾಗಿ ಮಕ್ಕಾರ್ ಪುನರಾಯ್ಕೆ

ದೇಶದ ಪ್ರಥಮ ಚಿಟ್ಟೆ ಉದ್ಯಾನದ ಉದ್ಘಾಟನೆ

Print This PagePrint this page

Email this Page

ಮುಖಪುಟ

Copyright Vikranta Prakashana 2006. All rights reserved.
Site best viewed in 800x600 resolution.

Email : feedback@vikrantakarnataka.com