|
`ಸಿರಿವಂತ', `ಜೊತೆಜೊತೆಯಲಿ'ಯನ್ನು ಹಿಂದಿಕ್ಕಿದ `ಹುಬ್ಬಳ್ಳಿ'
ಬೆಂಗಳೂರು:
ಈ ವರ್ಷದ ಸೂಪರ್ ಹಿಟ್ ಚಿತ್ರವಾಗಿ ಸುದೀಪ್, ರಕ್ಷಿತಾ ಅಭಿನಯಿಸಿರುವ
`ಹುಬ್ಬಳ್ಳಿ' ಚಿತ್ರ ಹೊರಹೊಮ್ಮಿದೆ.
ಕಳೆದ ಎರಡು ವಾರದ ಬಾಕ್ಸಾಫೀಸ್ ಗಳಿಕೆಯಲ್ಲಿ `ಜೊತೆ
ಜೊತೆಯಲಿ' ಹಾಗೂ `ಸಿರಿವಂತ' ಚಿತ್ರವನ್ನು ಹಿಂದಿಕ್ಕಿದೆ.
ಓಂ ಪ್ರಕಾಶ್ ರಾವ್ ನಿರ್ದೇಶನದ `ಹುಬ್ಬಳ್ಳಿ' ಕಳೆದ ಮೂರು
ವಾರಗಳಲ್ಲಿ ಬೆಂಗಳೂರು ನಗರ ಒಂದರಲ್ಲೇ ಸುಮಾರು ೧೦
ದಶಲಕ್ಷ ರೂ. ಸಂಪಾದಿಸಿದೆ. `ಜೊತೆಜೊತೆಯಲಿ' ಚಿತ್ರದ ಸಂಗೀತ
ಎಲ್ಲಾ ಮ್ಯೂಸಿಕ್ ಚಾರ್ಟ್ ಗಳಲ್ಲಿ ಮೊದಲ ಸ್ಥಾನ ಗಳಿಸಿದರೂ ಚಿತ್ರ
ಬಿಡುಗಡೆಯಾದ ಮೊದಲೆರಡು ವಾರಗಳಲ್ಲಿ ಹೆಚ್ಚಿನ ಲಾಭ
ಮಾಡಲಿಲ್ಲ. ಈಗಾಗಲೇ ೫೦ ದಿನ ಪೂರೈಸಿರುವ ಕಾರಣ ನಿಧಾನವಾಗಿ
ಜನಪ್ರಿಯತೆಯನ್ನು ಗಳಿಸತೊಡಗಿದೆ.

ಆದರೆ ವಿಷ್ಣುವರ್ಧನ್ ಅಭಿನಯದ `ಸಿರಿವಂತ' ಚಿತ್ರ ಮಾತ್ರ
ಆರಂಭದಲ್ಲಿ ತೋರಿದ ಭರವಸೆಯನ್ನು ನಂತರದ ದಿನಗಳಲ್ಲಿ
ಸುಳ್ಳಾಗಿಸಿದೆ. ಎಲ್ಲಾ ವರ್ಗದ ಜನರನ್ನು ಆಕರ್ಷಿಸುವಲ್ಲಿ ವಿಫಲವಾಗಿ
ಎನ್ನಲಾಗುತ್ತಿದೆ.
ಉಳಿದಂತೆ
ದರ್ಶನ್ ಅಭಿನಯದ `ತಂಗಿಗಾಗಿ' ಚಿತ್ರ ತೋಪೆದ್ದಿದೆ. ಕಳೆದ ವಾರ
ಬಿಡುಗಡೆಯಾದ ವಿನೋದ್ ರಾಜ್ ಅಭಿನಯದ `ಕನ್ನಡದ ಕಂದ'
ಚಿತ್ರ ಅಪಾರ ಜನರನ್ನು ಆಕರ್ಷಿಸತೊಡಗಿದೆ. ಈ ಚಿತ್ರದ ಭವಿಷ್ಯ
ಮುಂದಿನ ದಿನಗಳಲ್ಲಿ ತಿಳಿಯಲಿದೆ.
ಇನ್ನಷ್ಟು
ಕನ್ನಡಿಗರ ಮನದಲ್ಲಿ
ಇನ್ನೂ ನೆಲೆಸಿರುವ ಸರ್.ಎಂ. ವಿ
ರೈತರ ಆತ್ಮಹತ್ಯೆ ತಡೆಗೆ
ಪ್ಯಾಕೇಜ್ ಘೋಷಣೆ
ಬುದ್ಧನೆಡೆಗೆ.. ಮರಳಿ
ಮನೆಗೆ: ಬೃಹತ್ ಸಮಾವೇಶ
ಸಕ್ಕರೆ ಕಾರ್ಖಾನೆ
ಅಭಿವೃದ್ಧಿಗೆ ಸಹಕಾರಿ ಸಂಸ್ಥೆ
ಎಸ್‌ಜಿಪಿಸಿಯ ಮುಖ್ಯಸ್ಥರಾಗಿ
ಮಕ್ಕಾರ್ ಪುನರಾಯ್ಕೆ
ದೇಶದ ಪ್ರಥಮ ಚಿಟ್ಟೆ
ಉದ್ಯಾನದ ಉದ್ಘಾಟನೆ
|