|
ಗೋವಾ ಚಿತ್ರೋತ್ಸವದ ನಿರ್ಲಕ್ಷ್ಯ: ಕನ್ನಡಕ್ಕೆ ಅವಮಾನ
ಪಣಜಿ: ಗೊವಾದಲ್ಲಿ ನಡೆಯುತ್ತಿರುವ ೩೭ನೇ
ಅಂತರರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಬಿಡುಗಡೆ ಮಾಡಿದ ಕಿರು
ಪುಸ್ತಕದ ಡಾ. ರಾಜ್‌ಗೆ ಶ್ರದ್ಧಾಂಜಲಿ ಅರ್ಪಿಸುವ ಅಧ್ಯಾಯದಲ್ಲಿ ಡಾ.
ರಾಜ್ ಅವರ ಭಾವಚಿತ್ರದ ಬದಲು ನಿರ್ದೇಶಕ ಗಿರೀಶ್ ಕಾಸರವಳ್ಳಿ
ಅವರ ಭಾವಚಿತ್ರವನ್ನು ಮುದ್ರಿಸಲಾಗಿದೆ. ಕನ್ನಡ
ಚಿತ್ರೋದ್ಯಮವನ್ನು ಅನೇಕ ರೀತಿಯಲ್ಲಿ ನಿರ್ಲಕ್ಷಿಸಲಾಗುತ್ತಿದೆ
ಎನ್ನುವುದಕ್ಕೆ ಈ ಘಟನೆ ಸಾಕ್ಷಿಯಾಗಿದೆ.
ಈ ವರ್ಷದ ಚಲನಚಿತ್ರೋತ್ಸವದಲ್ಲಿ ಪ್ರದರ್ಶಿತವಾಗಲಿರುವ
ಚಲನಚಿತ್ರಗಳ ಬಗ್ಗೆ ವಿವರಿಸುವ `ಎಂಟರ್‌ಟೈನ್‌ಮೆಂಟ್ ಸೊಸೈಟಿ ಆಫ್
ಗೋವಾ' ಪ್ರತಿನಿಧಿ ಮತ್ತು ಪತ್ರಕರ್ತರಿಗೆ ನೀಡಿದ ಪುಸ್ತಕದಲ್ಲೇ ಈ
ಅವಾಂತರವಾಗಿರುವುದು. ಕೇವಲ ಭಾವಚಿತ್ರದ ವಿಷಯದಲ್ಲಷ್ಟೇ
ಅಲ್ಲದೆ ರಾಜ್ ಅವರ ಬಗ್ಗೆ ನೀಡಿದ ಮಾಹಿತಿಗಳೂ ಕೆಲವು ತಪ್ಪಾಗಿದೆ.
`ಮುತ್ತುರಾಜ್' ಬದಲಾಗಿ `ಮುತ್ಲುರಾಜ್' ಮತ್ತು ರಾಜ್ ಅವರ
ಕೊನೆಯ ಚಿತ್ರ `ಒಡಹುಟ್ಟಿದವರು' ಎಂದು ತಪ್ಪಾಗಿ ಅಚ್ಚಾಗಿವೆ.
`ಎಂಟರ್‌ಟೈನ್‌ಮೆಂಟ್ ಸೊಸೈಟಿ ಆಫ್ ಗೋವಾ'ದ ಸಿಇಒ ನಂದಿನಿ ಪಾಲಿವಾಳ್
ಆದ ಪ್ರಮಾದಕ್ಕೆ ಕ್ಷಮೆಯಾಚಿಸಿದ್ದಾರೆ.
ಇನ್ನಷ್ಟು
ನಾಡೋಜ ಪ್ರಶಸ್ತಿಗೆ ೫
ಜನರ ಆಯ್ಕೆ
೬೦ ಸಾವಿರ ಕ್ವಿ. ಅಡಿಕೆ ಖರೀದಿ :
ಅಡಿಕೆ ಮಂಡಳ
ಎಫ್೧:ಅಲ್ಸಾನೋಗೆ ಹೊಸ
ಜೋಡಿ ಹ್ಯಾಮಿಲ್ಟನ್
ಭಾರತಕ್ಕೆ ಲಗ್ಗೆ
ಇಡಲಿರುವ ಅಲ್‌ಜಜೀರಾ ಚಾನೆಲ್
ಫೈರ್ ಫಾಕ್ಸ್ ಹ್ಯಾಕರ್‍ಸ್
ಪಾಲಿಗೆ ಸುಲಭ ತುತ್ತು?
ವಿದ್ಯುತ್ ದರ ಇಳಿಸಲು
`ಅಂಚೆ ಕಾರ್ಡ್ ಚಳುವಳಿ'
ಮುಂಬೈನಲ್ಲಿ ಡೀಸೆಲ್ ಬೆಲೆ
ಕಮ್ಮಿ?
|