|
ಕನ್ನಡ ಪ್ರತಿಭೆಗಳ ಚಿತ್ರ ಬೈಟೂ!!!?
ಬೈಟೂ ಎಂಬ ಹೆಸರಿನ ತಮಿಳು ಚಿತ್ರ ಬರುತ್ತಿದೆ. ಈ ಚಿತ್ರದ
ವಿಶೇಷವೆಂದರೆ ಇದರ ನಿರ್ದೇಶಕ ಲೋಕಿ, ನಾಯಕ ನಟ ಶ್ರೀನಗರ
ಕಿಟ್ಟಿ, ನಾಯಕಿ ಸುನೀತಾ ವರ್ಮಾ ಕನ್ನಡದಲ್ಲಿ ಮೊದಲು
ಕಾಣಿಸಿಕೊಂಡವರು.

ಲೋಕಿ ಈ ಮುಂಚೆ ಮಯೂರ್ ಪಟೇಲ್ ನಾಯಕತ್ವದ `ಗುನ್ನ'
ಚಿತ್ರ ನಿರ್ದೇಶಿಸಿದ್ದರು. ಇನ್ನೂ ಶ್ರೀನಗರ ಕಿಟ್ಟಿ ಕಿರುತೆರೆಯಲ್ಲಿ
ನಟಿಸಿದವ, ಜೊತೆಗೆ `ಗಿರಿ' ಚಿತ್ರದ ನಾಯಕನಾಗಿದ್ದವ. ನಾಯಕಿ
ಸುನೀತಾ ವರ್ಮ `ಅಶೋಕ' ಚಿತ್ರದಲ್ಲಿ ಶಿವರಾಜ್ ಕುಮಾರ್ ಎದುರು
ನಾಯಕಿಯಾಗಿದ್ದವಳು.
ವಿಭಿನ್ನ ಕಥೆ ಹಾಗೂ ಕಾಡಿನ ಪರಿಸರದಲ್ಲಿ ಪೂರ ಚಿತ್ರೀಕರಣ
ನಡೆದಿದ್ದು, ಚಿತ್ರವು ಯಶಸ್ವಿಯಾಗುವ ನೀರೀಕ್ಷೆಯನ್ನು ಲೋಕಿ
ಹೊಂದಿದ್ದಾರೆ.
ಇನ್ನೊಂದು ವಿಷಯ ಅಂದರೆ ತಮಿಳುನಾಡಿನಲ್ಲಿ ಇತ್ತೀಚಿಗೆ ಶುರುವಾದ
ಸ್ವಭಾಷಾ ಹೆಸರಿನ ಚಳುವಳಿಯಿಂದ `ಬೈಟೂ' ಚಿತ್ರದ ಹೆಸರು
ಬದಲಾವಣೆ ಕಂಡಿದೆ. `ಬೈಟೂ' ಹೋಗಿ `ಇರ್ವರ್ ಮಟ್ಟುಮ್' ಆಗಿದೆ.
ತಮಿಳು ಭಾಷೆಯಲ್ಲದೆ ಬೇರೆ ಭಾಷೆಯ ಹೆಸರುಳ್ಳ ಚಿತ್ರಕ್ಕೆ
ತೆರಿಗೆ ವಿನಾಯಿತಿ ಸಿಗುವುದಿಲ್ಲವೆಂಬ ಅಲ್ಲಿನ ಸರ್ಕಾರದ ಆದೇಶಕ್ಕೆ
ಮಣಿದು ಇಂಗ್ಲೀಷ್ ಹೆಸರು ಹೊತ್ತಿದ್ದ ಎಲ್ಲಾ ಚಿತ್ರಗಳು
ಬೆಳಗಾಗುವುದರೊಳಗೆ ತಮಿಳು ಹೆಸರನ್ನು ಮೆತ್ತಿಕೊಂಡಿದೆ.
ಬೈಟೂ ಅಲ್ಲಲ್ಲಾ `ಇರ್ವರ್ ಮಟ್ಟುಮ್' ಚಿತ್ರ ಎಲ್ಲಾ ಭಾಷೆಯಲ್ಲೂ
ಬಿಡುಗಡೆಯಾಗುವ ಸಾಧ್ಯತೆಯಿದೆ. ಚಿತ್ರದ ಹೆಸರಿನ ಜೊತೆಗೆ ಕಿಟ್ಟಿ
ಹೆಸರು ಅಭಯ್ ಎಂದು ಬದಲಾಗಿದೆ. ಸದ್ಯಕ್ಕೆ ತಮಿಳಿನಲ್ಲಂತೂ
ತೆರೆ ಕಾಣಲಿದೆ.
ಇನ್ನಷ್ಟು
ಭದ್ರಾ ಮೇಲ್ದಂಡೆ
ಯೋಜನೆಗೆ ತಜ್ಞರ ಸಲಹೆ
ರೈಲ್ವೇ ಹಳಿ ಮೇಲೆ ಬಿದ್ದ
ನಾಸಿರುದ್ದೀನ್ ಷಾ ಪುತ್ರ
ಮಂಗಳೂರು ಹುಬ್ಬಳ್ಳಿಗೆ
ಹೊಸ ರೈಲು
ಹಿಮಾಚಲದಲ್ಲಿ ಆರರಲ್ಲಿ
ಒಬ್ಬರ ಬಳಿ ಮೊಬೈಲ್
ಫೊರ್ಬ್ಸ್ ಪಟ್ಟಿ:ಮೊದಲ ಇಪ್ಪತ್ತರಲ್ಲಿ ಟಾಟ ಸಂಸ್ಥೆ
ಆಷಸ್ ಸರಣಿ: ಪಾಂಟಿಂಗ್
ಭರ್ಜರಿ ಬ್ಯಾಟಿಂಗ್
ಸುವರ್ಣ ಕಾಯಕ ಯೋಜನೆಗೆ ಚಾಲನೆ
ಕಾಲಿಸ್ ಶ್ರೇಷ್ಠ ಪ್ರದರ್ಶನ; ಭಾರತಕ್ಕೆ ಸೋಲು
ಡಿಸೆಂಬರ್ ೧: ಮಂಗಳೂರಲ್ಲಿ
ಕೊಂಕಣಿ ಹಬ್ಬ
|