|
ಬರ್ಜತ್ಯಾ ಅವರ ಮುಂದಿನ ಚಿತ್ರದಲ್ಲಿ ಸಲ್ಲು?
ಸೂರಜ್ ಬರ್ಜತ್ಯಾ ಬಹಳ ಖುಷಿಯಲ್ಲಿದ್ದಾರೆ. ಕಾರಣ ಇತ್ತೀಚೆಗೆ
ಬಿಡುಗಡೆಯಾದ ಅವರ `ವಿವಾಹ್' ಚಿತ್ರ ಗೆದ್ದಿರುವುದು. ಶಾಹಿದ್
ಕಪೂರ್ ಮತ್ತು ಅಮೃತಾ ರಾವ್ ಜೋಡಿ ವೀಕ್ಷಕರನ್ನು
ಚಿತ್ರಮಂದಿರದ ಕಡೆ ಸೆಳೆಯುವಲ್ಲಿ ಸಫಲವಾಗಿವೆ. ವಿವಾಹ್ ಚಿತ್ರದ
ಬೇಡಿಕೆ ಏರಿದ್ದರಿಂದ ನಿರ್ಮಾಪಕರು ಇನ್ನೂ ೧೫ ಹೆಚ್ಚಿಗೆ ಸಿನಿಮಾ
ಪ್ರತಿಗಳನ್ನು ಪ್ರಿಂಟ್ ಮಾಡಿದ್ದಾರೆ. ಬರ್ಜತ್ಯಾ ನಿರ್ದೇಶನ ಪ್ರಶಂಸೆಗೆ
ಪಾತ್ರವಾಗಿದೆ.

ರಾಜಶ್ರೀ ಚಿತ್ರ ನಿರ್ಮಾಣ ಕಂಪೆನಿ ಮತ್ತು ಬರ್ಜತ್ಯಾ ನಿರ್ದೇಶನದ ಬಗ್ಗೆ
ಮಾತನಾಡುವಾಗ ಸಲ್ಮಾನ್ ಖಾನ್ ನೆನಪಿಗೆ ಬಾರದಿರಲಾರರು.
ಏಕೆಂದರೆ ಸಲ್ಮಾನ್ ಅವರನ್ನು ನಾಯಕರನ್ನಾಗಿಸಿಕೊಂಡು ಇದೇ
ಬ್ಯಾನರ್ ಅಡಿಯಲ್ಲಿ ನಿರ್ದೇಶಿಸಿರುವ `ಮೈನೆ ಪ್ಯಾರ್ ಕಿಯಾ', `ಹಮ್
ಆಪ್ ಕೆ ಹೈ ಕೌನ್' `ಹಮ್ ಸಾತ್ ಸಾತ್ ಹೈ' ಚಿತ್ರಗಳು ಸೂಪರ್
ಹಿಟ್ ಆಯಿತು.
ಈಗ ಬರ್ಜತ್ಯಾ ಮತ್ತೆ ಸಲ್ಮಾನ್ ಖಾನ್‌ರನ್ನು ಹಾಕಿಕೊಂಡು ಮುಂದಿನ
ಚಿತ್ರ ನಿರ್ದೇಶಿಸಲಿದ್ದಾರೆ. ಸಲ್ಮಾನ್ ಅವರನ್ನು ಮನಸಿನಲ್ಲಿರಿಸಿಕೊಂಡು
ರಚಿಸಿರುವ ಮೂರು ಚಿತ್ರಕಥೆಗಳು ಈಗಾಗಲೇ ಬರ್ಜತ್ಯಾ ಕೈಯಲ್ಲಿದೆ
ಎಂದು ನಂಬಲರ್ಹ ಮೂಲಗಳು ತಿಳಿಸಿವೆ.
ಇನ್ನಷ್ಟು
ಭಾರತ-ಚೀನಾ ಬಾಂಧವ್ಯಕ್ಕೆ ೧೦ ಅಂಶಗಳ ಕಾರ್ಯತಂತ್ರ
ಪತ್ನಿಗೆ ಹಿಂಸೆ ನೀಡುತ್ತಿರುವ ರಾಹುಲ್ ಮಹಾಜನ್!?
ಚಿಕ್ಕಮಗಳೂರು ಲೋಕಸಭಾ ಕ್ಷೇತ್ರ ಇನ್ನಿಲ್ಲ
ರಾಷ್ಟ್ರೀಯ ಸುರಕ್ಷಾ ಸಂಕಲ್ಪ ಸಮಾವೇಶದ ಸಂಕಲ್ಪಗಳು
ಧರ್ಮಸ್ಥಳದಲ್ಲಿ ಸರ್ವಧರ್ಮ ಸಮ್ಮೇಳನಕ್ಕೆ ಚಾಲನೆ
`ಮಹಾನದಿ' ಕೃತಿಗೆ ವೀಚಿ ಸಾಹಿತ್ಯ ಪ್ರಶಸ್ತಿ
ಪರೀಕ್ಷೆಯಲ್ಲಿ ಪಾಸಾದ `ಪೃಥ್ವಿ-೨' ಕ್ಷಿಪಣಿ
ಚುನಾವಣೆ ಗೆಲ್ಲಲು ಉದ್ಯಮಿಗಳ ಹಣ: ದೇವೇಗೌಡ
ಲಾಲು ಪ್ರಸಾದ್ ಇಂಗ್ಲೀಷ್ ಕುದುರೆ ಪರಗತ
|