|
ಭೋಜ್‌ಪುರಿ ಭಾಷೆಯಲ್ಲಿ ಬರಲಿರುವ ಶೋಲೆ
ಇತ್ತ ಅಬ್ಬರದಲ್ಲಿ ರಾಮ್‌ಗೋಪಾಲ್ ವರ್ಮಾ ತಮ್ಮ ಹೊಸ
ಶೋಲೆಯಲ್ಲಿ ಅಮಿತಾಭ್ ಅವರನ್ನು ಗಬ್ಬರ್ ಸಿಂಗ್ ಆಗಿ
ಕಣಕ್ಕಿಳಿಸುತ್ತಿದ್ದರೆ ಅತ್ತ ಹೊಸ ನಿರ್ದೇಶಕರಾದ ಮಹೇಶ್ ಪಾಂಡೆ
ಸದ್ದಿಲ್ಲದೆ ಶೋಲೆಯ ಭೋಜ್‌ಪುರಿ ಆವೃತ್ತಿಯನ್ನು
ಹೊರತರುತ್ತಿದ್ದಾರೆ.
ಆದರೆ ಒಂದು ಬದಲಾವಣೆ ಎಂದರೆ ಇದರಲ್ಲಿ `ಗಬ್ಬರ್ ಸಿಂಗ್'
ಬೇರೆಯದೇ ರೂಪದಲ್ಲಿ ಕಾಣಿಸಿಕೊಳ್ಳಲಿದ್ದಾನೆ. ಭೋಜ್‌ಪುರಿಯ
ಸೂಪರ್ ಸ್ಟಾರ್ ರವಿ ಕಿಶನ್ `ಜೈ' ಅಥವಾ `ವೀರು' ಪಾತ್ರ
ನಿರ್ವಹಿಸಲಿದ್ದಾರೆ. ನಾನಾ ಪಾಟೇಕರ್ ಅಥವಾ ಮಿಥುನ್ ಚಕ್ರವರ್ತಿ ಗಬ್ಬರ್
ಆಗಿ ಕಾಣಿಸಿಕೊಳ್ಳಲಿದ್ದಾರೆ. ಈ ಪಾತ್ರ ಮಾಡಲು ಇವರಿಬ್ಬರನ್ನೂ
ಕೇಳಿಕೊಂಡಾಗಿದೆ. ಆದರೆ ಇನ್ನೂ ಅವರಿಂದ `ಎಸ್' ಎನ್ನುವ ಉತ್ತರ
ಬಂದಿಲ್ಲ ಎನ್ನುತ್ತಾರೆ ಪಾಂಡೆ.
ಮೆಗಾ ಧಾರವಾಹಿಗಳ ನಿರ್ಮಾಣದ ಮೂಲಕ ಹೆಂಗಳೆಯರ
ಮನಗೆದ್ದ ಏಕ್ತಾ ಕಪೂರ್ ಭೊಜ್‌ಪುರಿ ಶೋಲೆಯ ನಿರ್ಮಾಪಕಿಯೂ
ಆಗಿದ್ದಾರೆ. ಕಾಕತಾಳಿಯವೆಂಬಂತೆ ಏಕ್ತಾ ಅವರು ರಾಮ್ ಗೋಪಾಲ್
ವರ್ಮಾರ ದೊಡ್ಡ ಅಭಿಮಾನಿಯೂ ಆಗಿದ್ದಾರೆ.
ಇನ್ನಷ್ಟು
ಸ್ವತಃ ಅಣ್ಣನ ಮಗನಿಂದ ಗುಂಡೇಟು ತಿಂದ ಕೋರೆ
ಇಮ್ರಾನಾ ಪ್ರಕರಣ: ತಪ್ಪಿತಸ್ಥ ಮಾವ
ಇನ್ನು ಯಾಹೂ ಮೆಸ್ಸೆಂಜರ್ ಹಿಂದಿ ತಮಿಳಲ್ಲೂ ಲಭ್ಯ
ರಾಷ್ಟ್ರಪತಿಯ ಕ್ಷಮಾದಾನ ಕೋರಲಿರುವ ಅಫಜಲ್
೧, ೪೦೦ ಉದ್ಯೋಗಿಗಳನ್ನು ಹೊರದಬ್ಬಿದ ಎಓಆಲ್
ಪಾಕ್ ಪಂದ್ಯವನ್ನು ಹಾಳುಗೆಡವಲು ಶಿವಸೇನೆ ಹಂಚಿಕೆ
ನೈಸರ್ಗಿಕ ಕೃಷಿಗೆ ಮಾರು ಹೋದ ಮಠ
|