|
ಅನಿಮೇಶನ್ ಚಿತ್ರ ನಿರ್ಮಾಣಕ್ಕೆ ಕೈ ಹಾಕಲಿರುವ ಕರಣ್
ಕರಣ್ ಜೋಹರ್ ಇತ್ತೀಚೆಗೆ ನಿರ್ಮಿಸಿದ `ಕಭಿ ಅಲ್ವಿದಾ ನಾ ಕೆಹೆನಾ'
ಚಿತ್ರಕ್ಕೆ ಹೊಗಳಿಕೆಗಿಂತ ಅದರ ವಿಭಿನ್ನ ಕಥಾವಸ್ತುವಿನ ಕಾರಣದಿಂದ
ತೆಗಳಿಕೆಗೆ ಗುರಿಯಾಯಿತು. ಹೀಗಿದ್ದರೂ ಎದೆಗುಂದದ ಕರಣ್
ಮತ್ತೆ ಸಂಪೂರ್ಣ ವಿಭಿನ್ನವಾದ ಚಿತ್ರವನ್ನು ನಿರ್ಮಿಸಲು
ಯೋಜಿಸುತ್ತಿದ್ದಾರೆ.

ಈಗ ಅವರು ಭಾರತೀಯ ವೀಕ್ಷಕರಿಗಾಗಿ ಉತ್ತಮ
ಸಂಗೀತವನ್ನೊಳಗೊಂಡ ಭಾವ ಪ್ರಧಾನ ಅನಿಮೇಶನ್ ಚಿತ್ರವನ್ನು
ತಯಾರಿಸುವುದಾಗಿ ಹೇಳಿದ್ದಾರೆ. ಈ ಚಲನಚಿತ್ರದ ನಿರ್ಮಾಣ
ಕಾರ್ಯವನ್ನು ಮುಂದಿನ ವರ್ಷ ಕೈಗೆತ್ತಿಕೊಳ್ಳಲಿದ್ದಾರೆ.
ವಿದೇಶಗಳಲ್ಲಿ ಜನಪ್ರಿಯವಾದ ಅನಿಮೇಶನ್ ಚಿತ್ರ ಭಾರತೀಯ
ವೀಕ್ಷಕರಿಗೆ ಇನ್ನೂ ಹೊರಗಿನದೆ. ಇದನ್ನೆ ದೃಷ್ಟಿಯಲ್ಲಿರಿಸಿಕೊಂಡು
ಭಾರತೀಯ ನೋಡುಗರಿಗೆ ಭರ್ಜರಿಯಾಗಿ ಅಮೇಶನ್ ಚಿತ್ರವನ್ನು
ಕರಣ್ ಪ್ರಸ್ತುತ ಪಡಿಸಲಿದ್ದಾರೆ. ಇನ್ನೊಂದೆಡೆ ತಮ್ಮ ಮುಂದಿನ
ಚಿತ್ರದ ನಿರ್ದೇಶನವನ್ನು ೨೦೦೭ ವರ್ಷ ಕೊನೆಯಲ್ಲಿ
ಪ್ರಾರಂಭಿಸಲಿದ್ದಾರೆ.
ಅನೇಕ ವರ್ಷಗಳಿಂದ ಕರಣ್ ಜೋಹರ್ ಅವರ ಜೊತೆಗಾರರಾಗಿ
ಕೆಲಸಮಾಡುತ್ತಿದ್ದ ತರುಣ್ ಮನ್ಸುಖನಿ ಇನ್ನೂ ಹೆಸರಿಡದ ಈ
ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. ಇದೊಂದು ಹಾಸ್ಯ ಪ್ರಧಾನ
ಪ್ರಣಯ ಚಿತ್ರವಾಗಿದ್ದು ದೊಡ್ಡ ತಾರಾಬಳಗವನ್ನು ಹೊಂದಲಿದೆ.
ಇನ್ನಷ್ಟು
ಲಾಲು ಪ್ರಸಾದ್ ಇಂಗ್ಲೀಷ್ ಕುದುರೆ ಪರಗತ
ಭದ್ರಾವತಿಯಲ್ಲಿ ರಕ್ಷಣಾ ವೇದಿಕೆ ಘಟಕ: ನಾರಾಯಣಗೌಡ
ಪದವಿಪೂರ್ವ ಪರೀಕ್ಷೆ ವೇಳಾಪಟ್ಟಿ ಪ್ರಕಟ
ರಾಜಿ ಸಂಧಾನಕ್ಕೆ ಒಪ್ಪಿದಿದ್ದರೆ ಗುಂಡಿಕ್ಕಿ:ಸಿಯಾಲ್ ಆದೇಶ
ನವೆಂಬರ್ ೧೯ರಂದು ಸಿಎಟಿ ಪರೀಕ್ಷೆ
ಹತ್ತು ಔಷಧಗಳ
ಮಾರಾಟ ನಿಷೇಧ
ಸಾಕ್ಷಿ ನೀಡಿ ನಂತರ ಆರೋಪಿಸಿ : ಡಿಕೇಶಿ
|