|
ಹಿರಿಯ ನಟಿ ಶ್ರೀವಿದ್ಯಾ ನಿಧನ
ತಿರುವನಂತಪುರ: ಬಹಳ ದಿನಗಳಿಂದ ತೀವ್ರವಾದ
ಅನಾರೋಗ್ಯದಿಂದ ಬಳಲುತ್ತಿದ್ದ ಖ್ಯಾತ ತಾರೆ ಶ್ರೀವಿದ್ಯಾ ಗುರುವಾರ
ಖಾಸಗಿ ಆಸ್ಪತ್ರೆಯಲ್ಲಿ ೭:೫೫ ರ ಸುಮಾರಿಗೆ ನಿಧನರಾದರು. ಅವರಿಗೆ
೫೩ ವರ್ಷ ವಯಸ್ಸಾಗಿತ್ತು.
ಕಳೆದ ಮೂರು ವರ್ಷದಿಂದ ಕ್ಯಾನ್ಸರ್ ರೋಗಕ್ಕೆ ಚಿಕಿತ್ಸೆ
ಪಡೆಯುತ್ತಿದ್ದರು. ಭರತನಾಟ್ಯ ಕಲಾವಿದೆ ಹಾಗೂ ಗಾಯಕಿಯೂ
ಕೂಡ ಆಗಿದ್ದ ಶ್ರೀವಿದ್ಯಾರನ್ನು ಅಕ್ಟೋಬರ್ ೧೭ ರಂದು ಆಸ್ಪತ್ರೆಗೆ
ಸೇರಿಸಲಾಗಿತ್ತು.

೩೫ ವರ್ಷದ ತಮ್ಮ ವೃತ್ತಿ ಜೀವನದಲ್ಲಿ ಕನ್ನಡ, ತೆಲುಗು,
ತಮಿಳು, ಮಲಯಾಳಂ, ಹಿಂದಿ ಭಾಷೆಯಲ್ಲಿ ಸುಮಾರು ೮೫೦ಕ್ಕೂ
ಅಧಿಕ ಚಿತ್ರಗಳಲ್ಲಿ ನಟಿಸಿದ್ದರು.
ಖ್ಯಾತ ಶಾಸ್ತ್ರೀಯ ಗಾಯಕಿ ಎಂ. ಎಲ್. ವಸಂತ್ ಕುಮಾರಿ ಹಾಗೂ
ತಮಿಳು ನಟ `ವಿಗಡಂ' ಕೃಷ್ಣಮೂರ್ತಿ ಅವರ ಮಗಳಾಗಿದ್ದ ಶ್ರೀವಿದ್ಯಾ
ತಮ್ಮ ಹದಿಮೂರನೇ ವಯಸ್ಸಿನಲ್ಲೇ ತಮಿಳು ಚಿತ್ರರಂಗಕ್ಕೆ
ಪಾದಾರ್ಪಣೆ ಮಾಡಿದ್ದರು.
ತಮಿಳುನಾಡಿನ ಕಲೈ ಮಾಮನಿ, ಕೇರಳದ ರಾಜ್ಯದ ಶ್ರೇಷ್ಟ
ಪ್ರಶಸ್ತಿಯನ್ನು ಪಡೆದಿದ್ದರು.
ಮೃತರ ಅಂತಿಮ ಸಂಸ್ಕಾರವನ್ನು ಸಕಲ ಸರ್ಕಾರಿ ಗೌರವದಿಂದ
ಶುಕ್ರವಾರ ನೆರವೇರಿಸಲಾಗುವುದು.
ಇನ್ನಷ್ಟು
ಸ್ವತಃ ಅಣ್ಣನ ಮಗನಿಂದ ಗುಂಡೇಟು ತಿಂದ ಕೋರೆ
ಇಮ್ರಾನಾ ಪ್ರಕರಣ: ತಪ್ಪಿತಸ್ಥ ಮಾವ
ಇನ್ನು ಯಾಹೂ ಮೆಸ್ಸೆಂಜರ್ ಹಿಂದಿ ತಮಿಳಲ್ಲೂ ಲಭ್ಯ
ರಾಷ್ಟ್ರಪತಿಯ ಕ್ಷಮಾದಾನ ಕೋರಲಿರುವ ಅಫಜಲ್
೧, ೪೦೦ ಉದ್ಯೋಗಿಗಳನ್ನು ಹೊರದಬ್ಬಿದ ಎಓಆಲ್
ಪಾಕ್ ಪಂದ್ಯವನ್ನು ಹಾಳುಗೆಡವಲು ಶಿವಸೇನೆ ಹಂಚಿಕೆ
ನೈಸರ್ಗಿಕ ಕೃಷಿಗೆ ಮಾರು ಹೋದ ಮಠ
ಕೊನೆಗೂ ಕಡ್ಡಾಯವಾದ ಹೆಲ್ಮೆಟ್
ಕರ್ನಾಟಕದಲ್ಲಿ ಟೊಯೋಟಾ ಸಂಸ್ಥೆಯ ೨ನೇ ಘಟಕ
|