|
ಎಐಎಡಿಎಂಕೆಯಿಂದ ನಟಿ ರಾಧಿಕಾ ಹೊರಕ್ಕೆ
ಚೆನ್ನೈ: ನಟಿ ರಾಧಿಕಾ ಶರತ್‌ಕುಮಾರ್ ಎಐಎಡಿಎಂಕೆ ಸೇರಿ
ಇನ್ನು ೬ ತಿಂಗಳು ಕಳೆಯುವಷ್ಟರಲ್ಲಿ ಅವರನ್ನು ಪಕ್ಷದ ಮುಖ್ಯ
ಕಾರ್ಯದರ್ಶಿ ಜೆ. ಜಯಲಲಿತಾ ಉಚ್ಚಾಟಿಸಿದ್ದಾರೆ.
`ರಾಧಿಕಾ ಅವರು ಪಕ್ಷದ ಪ್ರಣಾಳಿಕೆಯ ವಿರುದ್ಧ
ನಡೆದುಕೊಂಡಿದ್ದಾರೆ. ಪಕ್ಷ ವಿರೋಧಿ ಚಟುವಟಿಕೆಯಲ್ಲಿ ತೊಡಗಿದ
ಕಾರಣ, ಅವರನ್ನು ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದ
ಕಿತ್ತುಹಾಕಲಾಗಿದೆ' ಎಂದು ಜೆ. ಜಯಲಲಿತಾ ಹೇಳಿದ್ದಾರೆ.
ರಾಧಿಕಾರವರು ಮಾಡಿದ ತಪ್ಪಿನ ವಿವರಗಳು ತಿಳಿದಿಲ್ಲವಾದರೂ ಡಿಎಂಕೆ
ಮುಖ್ಯಸ್ಥ ಹಾಗೂ ತಮಿಳುನಾಡಿನ ಮುಖ್ಯಮಂತ್ರಿ ಎಂ.
ಕರುಣಾನಿಧಿಯವರ ಸನ್ಮಾನ ಸಮಾರಂಭದಲ್ಲಿ ರಾಧಿಕಾ
ಪಾಲ್ಗೊಂಡಿದ್ದು ಪ್ರಮುಖ ಕಾರಣ ಎನ್ನಲಾಗುತ್ತಿದೆ.

`ನಾನು ಯಾವುದೇ ಪಕ್ಷದ ಸದಸ್ಯತ್ವ ಪಡೆದಿಲ್ಲ. ಜೆ. ಜಯಲಲಿತಾ
ಅವರ ಹೇಳಿಕೆ ನಗೆ ತರಿಸುತ್ತಿದೆ' ಎಂದು ತಮ್ಮ ಉಚ್ಚಾಟನೆಯ ಬಗ್ಗೆ
ರಾಧಿಕಾ ಶರತ್‌ಕುಮಾರ್ ಪ್ರತಿಕ್ರಿಯಿಸಿದ್ದಾರೆ.
ಟಿವಿ ಮಾಧ್ಯಮದಲ್ಲಿ ಬಂಡವಾಳ ಹೂಡಿ ಉತ್ತಮ ಬೆಳವಣಿಗೆಯನ್ನು
ಕಂಡಿರುವ `ರಾಧಾನ್ ಮೀಡಿಯಾ' ದ ಒಡೆತನವನ್ನು ಹೊಂದಿರುವ
ರಾಧಿಕಾ ಅವರು ತಾವು ಟಿವಿ ಮಾಧ್ಯಮದಲ್ಲೇ
ಮುಂದುವರಿಯುವುದಾಗಿ ಹೇಳಿದ್ದಾರೆ. ರಾಧಿಕಾ ಅವರ ಪತಿ ಶರತ್
ಕುಮಾರ್ ಡಿಎಂಕೆ ಪಕ್ಷದ ಪರ ಪ್ರಚಾರದಲ್ಲಿ ನಿರತರಾಗಿದ್ದರು.
ಇನ್ನಷ್ಟು
ಸ್ವತಃ ಅಣ್ಣನ ಮಗನಿಂದ ಗುಂಡೇಟು ತಿಂದ ಕೋರೆ
ಇಮ್ರಾನಾ ಪ್ರಕರಣ: ತಪ್ಪಿತಸ್ಥ ಮಾವ
ಇನ್ನು ಯಾಹೂ ಮೆಸ್ಸೆಂಜರ್ ಹಿಂದಿ ತಮಿಳಲ್ಲೂ ಲಭ್ಯ
ರಾಷ್ಟ್ರಪತಿಯ ಕ್ಷಮಾದಾನ ಕೋರಲಿರುವ ಅಫಜಲ್
೧, ೪೦೦ ಉದ್ಯೋಗಿಗಳನ್ನು ಹೊರದಬ್ಬಿದ ಎಓಆಲ್
ಪಾಕ್ ಪಂದ್ಯವನ್ನು ಹಾಳುಗೆಡವಲು ಶಿವಸೇನೆ ಹಂಚಿಕೆ
ನೈಸರ್ಗಿಕ ಕೃಷಿಗೆ ಮಾರು ಹೋದ ಮಠ
|