|
`ಎದ್ದೇಳು ಮಂಜುನಾಥ' ನಿರ್ಮಿಸಲಿರುವ ಸನತ್ ಕುಮಾರ್
ಪತ್ರಕರ್ತ ಎಂದೇ ಗುರುತಿಸಿಕೊಳ್ಳುವ ಸನತ್ ಕುಮಾರ್ ಜಗ್ಗೇಶ್
ನಾಯಕತ್ವದಲ್ಲಿ `ಎದ್ದೇಳು ಮಂಜುನಾಥ' ಎನ್ನುವ ಚಲನಚಿತ್ರ
ನಿರ್ಮಿಸಲಿದ್ದಾರೆ. ಜಗ್ಗೇಶ್‌ರ ನೂರನೆ ಚಿತ್ರ `ಮಠ' ನಿರ್ದೇಶಿಸಿ ಗೆದ್ದ
ಗುರುಪ್ರಸಾದ್ `ಎದ್ದೇಳು ಮಂಜುನಾಥ'ದ ನಿರ್ದೇಶನವನ್ನೂ
ಮಾಡಲಿದ್ದಾರೆ.
ನಿರ್ದೇಶಕ ಗುರು ಪ್ರಸಾದ್ ಖುಷಿಯಾಗಿದ್ದರು. `ಜಗ್ಗೇಶ್‌ರ ನೂರನೆ
ಚಿತ್ರ ನಿರ್ದೇಶಿಸಿದ್ದೇ ನನ್ನ ಒಂದು ಸಾಧನೆ. ಈಗ ಜಗ್ಗೇಶ್ ಕನ್ನಡ
ಚಿತ್ರರಂಗ ಸೇರಿ ರಜತ ಮಹೋತ್ಸವ ಆಚರಿಸುತ್ತಿರುವ
ಸಂದರ್ಭದಲ್ಲಿ ಮತ್ತೆ ಅವರ ಚಿತ್ರ ನಿರ್ದೇಶಿಸಲು ಅವಕಾಶ ಸಿಕ್ಕಿದ್ದು
ಬಹಳ ಸಂತೋಷವಾಗಿದೆ. `ಎದ್ದೇಳು ಮಂಜುನಾಥ' ಸೋಮಾರಿ ಜನರ
ಕಥೆಯನ್ನು ಒಳಗೊಂಡಿದೆ. ಇದು ಸೋಮಾರಿ ಜನರಿಗೆ ಬದುಕಿನಲ್ಲಿ
ಏನಾದರೂ ಸಾಧಿಸುವ ಬಗ್ಗೆ ಬಲವಾದ ಸಂದೇಶವನ್ನು ನೀಡುತ್ತದೆ'
ಎನ್ನುತ್ತಾರೆ ಪ್ರಸಾದ್.

ಕನ್ನಡ ಚಿತ್ರರಂಗಕ್ಕೆ `ಎದ್ದೇಳು ಮಂಜುನಾಥ' ಹೊಸ ರೀತಿಯ
ಕೊಡುಗೆಯಾಗಲಿದೆ' ಎನ್ನುವುದು ಸನತ್ ಕುಮಾರ್ ಅಭಿಪ್ರಾಯ.
`ಈ ಸಿನಿಮಾದಲ್ಲಿ ನನ್ನದು ವಿಶಿಷ್ಟ ಪಾತ್ರ' ಎಂದು ಹೇಳುತ್ತಾರೆ
ಜಗ್ಗೇಶ್.
ಇನ್ನಷ್ಟು
ರಾಜ್ಯದ ಮೇಲೆ ಚುನಾವಣಾ
ಆಯೋಗದ ದೂರು
ಬಿಜೆಪಿ ಜಿಲ್ಲಾಮುಖಂಡರ
ಅಭಿಪ್ರಾಯ ಕೇಳಿ ಮೈತ್ರಿ
`ಲಾಡೆನ್'ಗೆ ಕಂಡಲ್ಲಿ
ಗುಂಡಿಕ್ಕಲು ಸರ್ಕಾರ ಆಜ್ಞೆ
ರವಿವಾರ ಬಿಜೆಪಿ
ರಾಜ್ಯಾಧ್ಯಕ್ಷರ ಚುನಾವಣೆ
ಮಾನವಾಭಿವೃದ್ಧಿಯಲ್ಲಿ
ಕರ್ನಾಟಕಕ್ಕೆ ಏಳನೆ ಸ್ಥಾನ
ಝಂಕ್ ಆಹಾರ ಕೋಲಾಗಳ
ಮೇಲೆ ನಿರ್ಬಂಧ?
AIIMS
ವೈದ್ಯರ ಅನಿರ್ದಿಷ್ಟ ಕಾಲದ ಉಪವಾಸ
|