Fonts Problem?

For Unicode version click here

For ANSI version click here

Downloads

Wallpapers

Vikrantakarnataka Weekly

 

 

ಮುಖ ಪುಟ

ಸುದ್ದಿ-ಸದ್ದು

ಎನ್ನಾರೈ

ಸಾಹಿತ್ಯ-ಸಂದರ್ಭ

ಚಿತ್ರ ವಿಚಿತ್ರ

ಚಿತ್ರ ಶಾಲೆ

ಒಕ್ಕಲುತನ

ವೆಬ್ ಲಿಂಕ್ಸ್

ಪಾಕ ಶಾಲೆ

ಆಟ ಬೊಂಬಾಟ

ನಗೆ ಬುಗ್ಗೆ

ನಿಮ್ಮ ಓಲೆ

Google    

ವೆಬ್

ವಿಕ್ರಾಂತ ಕರ್ನಾಟಕ

Saturday, 18 November 2006 03:29 PM

`ಜೊತೆಜೊತೆಯಲಿ' ಮುಂದೆ ಐಶ್ವರ್ಯ ಹಿಂದೆ

 

ಬೆಂಗಳೂರು: `ಜೊತೆಜೊತೆಯಲಿ' ಚಿತ್ರದ ಸಂಗೀತವು ಎಲ್ಲಾ ಸಂಗೀತ ಮಾರಾಟಕೇಂದ್ರದಲ್ಲಿ ಅಧಿಕ ಮಾರಾಟವಾಗಿ ಅಗ್ರಸ್ಥಾನವನ್ನು ಅಲಂಕರಿಸಿದೆ. ಇಂದ್ರಜೀತ್ ಲಂಕೇಶ್ ನಿರ್ದೇಶನದ `ಐಶ್ವರ್ಯ' ಮೊದಲ ಸ್ಥಾನದಿಂದ ಕೆಳಗಿಳಿದು ಎರಡನೇ ಸ್ಥಾನಕ್ಕೆ ಇಳಿದಿದೆ.
 

`ಜೊತೆ ಜೊತೆಯಲಿ' ಚಿತ್ರಕ್ಕೆ ವಿ.ಹರಿಕೃಷ್ಣ ಅವರ ಸುಮಧುರ ಸಂಗೀತವಿದೆ. ಕೆ, ಕಲ್ಯಾಣ್ ಹಾಗೂ ವಿ.ನಾಗೇಂದ್ರ ಪ್ರಸಾದ್ ಅವರ ಸಾಹಿತ್ಯದಿಂದ ಕೂಡಿರುವ ಹಾಡುಗಳು ಯುವಪೀಳಿಗೆಗೆ ತುಂಬಾ ಮೆಚ್ಚುಗೆಯಾಗಿದೆ. ಶ್ರೇಯಾ ಗೋಸಲ್ ಹಾಡಿರುವ `ಓ. . .ಗುಣವಂತ', ಬಾಂಬೆ ಜಯಶ್ರೀ ಹಾಡಿರುವ `ಸುಮ್ಮನೆ ಸುಮ್ಮನೆ..' ಹಾಗೂ ಟೈಟಲ್ ಸಾಂಗ್ ಜನರ ಮೆಚ್ಚುಗೆ ಪಡೆದಿದೆ. ಚಾಲೆಜಿಂಗ್ ಸ್ಟಾರ್ ದರ್ಶನ್ ಸಂಸ್ಥೆಯಿಂದ ತಯಾರಾದ ಮೊದಲ ಚಿತ್ರವನ್ನು ದಿನಕರ್ ತೂಗುದೀಪ್ ಪ್ರಥಮ ನಿರ್ದೇಶಿಸಿದ್ದಾರೆ. ಈಗಾಗಲೇ ೫೦ ದಿನ ಪೂರೈಸಿ ಶತದಿನದತ್ತ ಚಿತ್ರ ಸಾಗಿದೆ.
 

ಉಳಿದಂತೆ ಐಶ್ವರ್ಯ ಚಿತ್ರದ ಕುನಾಲ್ ಗಂಜಾವಾಲಾ ಹಾಡೀರುವ `ಹುಡುಗಿ ಹುಡುಗಿ.....' `ಮನ್ಮಥಾ, ಮನ್ಮಥ' ಹಾಡುಗಳು ಯುವಕರನ್ನು ಸೆಳೆದಿದೆ. ಈ ಚಿತ್ರಕ್ಕೆ ರಾಜೇಶ್ ರಾಮನಾಥ್ ಸಂಗೀತ ನೀಡಿದ್ದಾರೆ.
 

ಮೂರನೇ ಸ್ಥಾನವನ್ನು ರಮ್ಯಾ ಹಾಗೂ ರಕ್ಷಿತಾ ಅಭಿನಯದ ಕವಿತಾ ಲಂಕೇಶ್ ನಿರ್ದೇಶನದ `ತನನಂ ತನನಂ' ಪಡೆದಿದೆ. ಪಿ.ಕಲ್ಯಾಣ್ ಅವರ ಸಾಹಿತ್ಯ ಹಾಗೂ ಸಂಗೀತದಿಂದ ಈ ಚಿತ್ರದ ಹಾಡುಗಳು ಕೂಡಿವೆ. ಈ ಚಿತ್ರದ ಟೈಟಲ್ ಟ್ರಾಕ್, `ಕಂಡೆ ಕಂಡೆ ಗೋಪಾಲನ...' ಜನರಿಗೆ ಹಿಡಿಸಿದೆ.
 

ವಿಜಯ ರಾಘವೇಂದ್ರ ಹಾಗೂ ರಮ್ಯ ಅಭಿನಯದ ಜಾನಪದ ಗೀತೆಯುಳ್ಳ `ಸೇವಂತಿ ಸೇವಂತಿ' ಚಿತ್ರ ನಾಲ್ಕನೆ ಸ್ಥಾನದಲ್ಲಿದೆ. ಈ ಚಿತ್ರಕ್ಕೆ ಎಸ್.ಎ. ರಾಜ್ ಕುಮಾರ್ ಸಂಗೀತವಿದೆ.
 

ಗುರುಕಿರಣ್ ಸಂಗೀತ ನಿರ್ದೇಶನದ ಇನ್ನೂ ಬಿಡುಗಡೆಯಾಗದ ವಿಷ್ಣುವರ್ಧನ್ ಅಭಿನಯನದ `ಏಕದಂತ' ಚಿತ್ರದ ಸಂಗೀತ ಸದ್ಯಕ್ಕೆ ಐದನೇ ಸ್ಥಾನ ಪಡೆದಿದೆ.

 

ಇನ್ನಷ್ಟು

ಇಂಡೋ-ಜರ್ಮನ್ ಚಿತ್ರೋತ್ಸವಕ್ಕೆ ಚಾಲನೆ

ಆಂಜಲಿನಾ ಜೋಲಿ ರಕ್ಷಕರಿಗೆ ಜಾಮೀನು

ಮಹಾರಾಷ್ಟ್ರಕ್ಕೆ ಛೀಮಾರಿ: ರಾಜ್ಯಕ್ಕೆ ಕೇಂದ್ರದ ಬೆಂಬಲ

ಫೋರ್ಬ್ ಪಟ್ಟಿಯಲ್ಲಿ `ಲಕ್ಷ್ಮಿ'ಗೆ ಮೊದಲ ಸ್ಥಾನ

ರಾಜ್ಯದಲ್ಲಿ ೪ ವಿಜ್ಞಾನ ಪಾರ್ಕ್ ಸ್ಥಾಪನೆ: ವಿಜ್ಞಾನ ಸಚಿವ

ಮೊಬೈಲ್‌ನಲ್ಲೀಗ ಬ್ರಾಂಡ್‌ಬಾಂಡ್ ಸೇವೆ ಲಭ್ಯ

ಅಡೋಬ್ ಸಿಇಓ ಮಗ ಅನಂತ್ ಪಾರು

ಮಾಸ್ಟರ್ ಕಿಶನ್‌ಗೆ ಕರುಣಾನಿಧಿಯ ಪ್ರಶಂಸೆ

Print This PagePrint this page

Email this Page

ಮುಖಪುಟ

Copyright Vikranta Prakashana 2006. All rights reserved.
Site best viewed in 800x600 resolution.

Email : feedback@vikrantakarnataka.com